ಘನವೇನೋ ನಿನಗಿದು ಗುಣವನದೀ | ಮಾನದ ಮಾನ್ಯ ||ಮನವ ನಿನ್ನಲಿ ನಿಲ್ಲಿಸೋ ಪ
ತನುಮನ ಸಕಲ ಸಾಧನವೆಲ್ಲ ಎನಗಿತ್ತುಮನ ಆದಿ ಕರಣವ ಎನಗೊಶಪಡಿಸದೆ ಅ.ಪ.
ಅಚ್ಯುತ ಮೂರ್ತಿ | ಸತತ ಎನ್ನಲ್ಲಿ ಇದ್ದುಹಿತವ ಮಾಡಿದೆ ಎನ್ನ | ಹತಭಾಗ್ಯನೆನಿಪುದು 1
ಹೀನ ಬುದ್ಧಿಯ ಕಳೆಯದೇ | ಮುನಿಜನ ವಂದ್ಯಾ |ವಾನರ ನಾನಾದೆ ಹರಿಯೇ ||ಶ್ವಾನ ಮತಿಯ ನೀಗಿ | ಧ್ಯಾನ ಸಾಧನ ನೀಡೋ |ಗಾನ ಲೋಲನೆ ನಿಧಾನ ಮಾಡಲಿ ಬೇಡ 2
ತಂದೆ ಮುದ್ದು ಮೋಹನರೂ | ಮಂದನು ಎನ್ನ |ತಂದೆ ನಿನ್ನಡಿಗ್ಹಾಕಿದರೊ ||ಇಂದಿರೆಯರಸ ಗುರು | ಗೋವಿಂದ ವಿಠಲಯ್ಯ |ಛಂದಾಗೀಯೆನ್ನ ಮನ | ಮಂದಿರದೊಳು ನಿಲ್ಲೊ 3