ಎನ್ನಾಗಮವ ಹೀಗಾಯಿತೊ ದೇವ
ಇನ್ನು ನೀ ಎನ್ನನು ಸಲಹುವ ಬಗೆಯಂತೊ ಪ
ಸಕ್ಕರಿ ತಾಯೆಂದು ಸಂತಿಗೆ ಕಳುಹಲು
ತಕ್ಕಡಿ ಲಶುನವ ತಂದ ತರಳನಂತೆ 1
ಪರಮ ನಿರ್ಮಲವಾದ ತುಲಸಿ ತಾಯೆನೆ ದುಷ್ಟ
ತುರುಚಿಯನೆ ತಂದ ತರಳನಂತೆ 2
ಮಸಿಯ ಒರೆಸಿಕೊಂಡು ಬಾಯೆನ್ನೆ ಶಿಶು ತಾನೆ
ಕೆಸರು ಪೂಸಿಕೊಂಡು ಬಂದ ತರಳನಂತೆ3
ಕಳುಹಿದಾ ಪಿರಿಯರು ಹಳಿಯಲಿ ಚಿಂತಿಲ್ಲ
ಗೆಳೆಯಾರು ನಗುವ ಚಿಂತೆಯೆ ಘನವೆಲೊ ದೇವ4
ಆಪುತ ಪ್ರಿಯ ಬಂಧು ವ್ಯಾಪಕ ನೀನೆಂದು
ಜ್ಞಾಪಕಗೊಳಿಸಿದೆ ವಾಸುದೇವವಿಠಲ 5