ಶತ್ವ್ರಾಂತಕನು ಸುಜ್ಞಾನ ಭಕ್ತಿಯೇ
ಕಾಂತೆ ಜನಕಜೆಜೀವಹನುಮನು ಸುಪಥಸುಗ್ರೀವ 1
ಸಾಧನಾತ್ಮಕಕೌಶಿಕನಮಖ
ಕಾದುಸಲಹಿದವಿಘ್ನವೇದು
ರ್ಮೇಧೆತಾಟಕಿದುಷ್ಟಸಂಗಸುಬಾಹುಮುಖಖಳರೂ
ಸಾಧರವೆವರಯಜ್ಞಗೌತಮ
ಭೂದಿವಿಜಸತಿಶಾಪಮೋಕ್ಷವೆ
ಶೋಧನಿಷ್ಕøತಿತಾರ್ತಿಚಾಪವಧರ್ಮವೆನಿಸುವುದು 2
ಪರುಶುರಾಮ ಸಮಾಗಮವುವಿ
ಸ್ತರಿಸಿನೋಡೆಸಮತ್ವವಿಪಿನಾಂ
ತರವೆಕರ್ಮಸುವೃತ್ತಿಮುನಿಗಳು ರಾವಣನತಂಗಿ
ಪರಿಕಿಸಲುದುರ್ವೃತ್ತಿಗಳುತತ್
ಪರಿಜನಖರಾದಿಗಳುಭ್ರಾಂತಿಯು
ನೆರೆಕನಕಮೃಗದಶವದನನಿಂದ್ರಿಯಗಳೆನಿಸುವನು 3
ಅರುಣತನಯನುಧರ್ಮನೋಡೆ ಶ
ಸುರಪಸುತದುಷ್ಕರ್ಮಚಪಲವೆಕಪಿಸಮೂಹಗಳು
ಹಿರಿಯಮಗನೆಸಹಾಯವಾಸೆಯೆ
ಶರಧಿಲಂಕೆಯೆದೇಹಲಂಕಿನಿಯೇದುರಭಿಮಾನ 4
ಮಣಿಯೆಜ್ಞಾಪಕಸ್ವಸ್ಥಚಿತ್ತತೆ
ವನವಶೋಕವುತ್ರಿಜಟೆಕನಸೇ
ಘನವೆನಿಪಸಂಸ್ಕಾರದುಷ್ಕರ್ಮಾಖ್ಯವನಭಂಗಾ
ದನುಜಪತಿಸುತಮುಖರವಧೆಯೇ
ಮುನಿಮತವುದುರ್ವೃತ್ತಿಪರಿಹರ
ವನಜಸಂಭವನಸ್ತ್ರವೇಸನ್ಮಾರ್ಗವೆನಿಸುವುದು 5
ಮಮತೆಲಂಕೆಯದಹಿಸಿಮತ್ತೆಹ
ಪಮಶರಧಿ ಬಂಧನವೆಯಾಸೆನಿರೋಧನಂತರವು
ಕ್ರಮದಿಧರ್ಮವಿಭೀಷಣನಸುರ
ದಮನವಿಂದ್ರಿಯಜಯವುಮಿಗೆ ಹೃ
ತ್ಕಮಲವೇಸಾಕೇತಪುರವು ಸಮಾಧಿಯಭಿಷೇಕಾ 6
ವಧೆಯಗೈಸಿದಕಾಲಜ್ಞಾನದಿಲವಣ ಮುಖ್ಯರನು
ವಿಧವಿಧದಯಜ್ಞಗಳವಿರಚಿಸಿ
ಸದಮಲಾತ್ಮನುಸಕಲರಿಂದೈ
ದಿದಸಹಸ್ರಪಾದನು ಶ್ರೀಗುರುರಾಮವಿಠ್ಠಲನು 7