ಸ್ವಾಮಿ ಭಜನೆ ಮಾಡೊ ಮನುಜ ಪ್ರೇಮದಿಂದಲಿ
ಪಾದ ಹಿಡಿದು ಪ
ಬಂಧು ಬಳಗ ಭಾಗ್ಯವೆಂಬ ಬಯಲು ವಸ್ತುವೊ
ಹಿಂದು ಮುಂದೇನು ಬರುವರು ಯಾರು ಇಲ್ಲವೊ
ಎಂದು ತಿಳಿದು ಹರಿಯ ಮನದಿ ಮರೆಯಬೇಡವೊ
ಇಂದಿರೇಶ ಸಕಲಕರ್ತ ವೆಂಕಟಾದ್ರಿ ನಿಲಯನಾದ 1
ನಿತ್ಯನೇವÀು ನಿಷ್ಠೆಯಿಂದ ನಿಜವು ತಿಳಿದು ನಿ
ಸತ್ಯವಂತರ ಸಂಗ ಬಿಡದೆ ಸರ್ವಕಾಲದಿ
ಭೃತ್ಯರಿಗೆ ಭೃತ್ಯನಾಗಿ ಪೂರ್ಣಭಾವದಿ
ಮರಿಯದ್ಹೋಗಿ ಬಿಡದೆ 2
ಗಾನಲೋಲ ಕರುಣಾಸಾಗರ ಘನವಿಲಾಸನ
ಭಾನುಕೋಟಿ ತೇಜನಾದ ಪರಮ ಪುರುಷನಾ
ಶರಧಿ ಧ್ಯಾನದಲಿ ಚಿತ್ತವಿಟ್ಟು ಧೇನು ಪಾಲಕ ದಿವಿಜವಂದ್ಯನ 3