ಕೇಳಿ ನಗಬಹುದು ಮಜಾತ್ಮರು |
ಕೇಳಿ ನಗಬಹುದು |
ಹೋಲಿಕೀಲ್ಯಾಡುವ ಜನದ ಜ್ಞಾನದ ನುಡಿ ಪ
ದಂಭಮಾನದಲಿ | ಮನಸಿನ |
ಹಂಬಲ ಘನವಿರಲಿ |
ಥಂಬಿಸಿ ಕರ್ಮವ | ಸರ್ವಂ ಬ್ರಹ್ಮಮಯ |
ವೆಂಬುದು ತೋರುವರಾ ನುಡಿಗಳಾ 1
ಆಶಾಪಾಶಗಳು | ವಿಷಯದಿ |
ಲೇಸಿಗೆ ಬಿಗಿದಿರಲು |
ನಾಶಿವ ನಾ ಬ್ರಹ್ಮನೆಂ | ದೊದರುತ ನಾನಾ |
ವೇಷವ ಧರಿಸುವರಾ | ನುಡಿಗಳು 2
ಚಿನುಮಯ ನಿಜ ಸುಖವಾ | ಕಂಗಳ
ಕೊನಿಯಲಿ ದೋರಿಸುವಾ |
ಘನ ಗುರು ಮಹಿಪತಿ ಪ್ರಭು ಕರುಣಾನಂದ |
ಅನುಭವಿಸಿದ ಲ್ಯಾಡುವ ನುಡಿಗಳಾ 3