ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡಲಶಯನ ಹರಿಯ ತೊಡೆಯಲ್ಲಿ ಮಡದ್ಯೇರಿಬ್ಬರು ಕುಳಿತು ಪ ಪನ್ನಂಗಶಯನ ಕೇಳೆ ಸ್ವಾಮಿ ನೀ ಎನ್ನ ಮನೆಗೆ ಏಳೊ ನಿನ್ನ ಪಾದಕ್ಕೆ ಎರಗುವೆನೆಂದು ಭಾಮೆ ಕೈ- ಯನ್ನು ಮುಗಿದಳಾಗ 1 ಎನ್ನ ಮನೆಯಲ್ಲಿದ್ದ ಶ್ರೀಹರಿ- ಯನ್ನು ಕರೆಯಲವರ ಕಣ್ಣೇಸೆನುತಲಿ ಕರ್ಣಿ(ನ್ಯೆ?) ರುಕ್ಮಿಣಿ ಕೋಪ- ವನ್ನು ಧರಿಸಲಾಗ 2 ಎಷ್ಟು ಹಣವ ನೀನು ಕೃಷ್ಣಗೆ ಕೊಟ್ಟು ಕೊಂಡಿ ಹೇಳೆ ದಿಟ್ಟತನದ ಮಾತಾಡೋ ರುಕ್ಮಿಣಿ ನಿನ್ನ ಶ್ರೇಷ್ಠತನವೇನ್ಹೇಳೆ 3 ಹತ್ತು ಆರು ಸಾವಿರದಷ್ಟ ಭಾರ್ಯೇರವೊಳಗೆ ಸತ್ಯಭಾಮೆ ಉತ್ಕøಷ್ಟ ಚೆಲುವೆಯೆಂದು ಕೃಷ್ಣ ನಿನ್ನಲ್ಲಿಹನೆ4 ಹದಿನಾಲ್ಕು ಲೋಕದಲಿ ಹರಿ ಪಾದಾಂಬುಜವ ಕಾಂಬುವೋರಿಲ್ಲೆ ಯದುನಾಥನ ಎದೆ ಮ್ಯಾಲ್ಹತ್ತಿರುವೋದು ಇದು ಸೋಜಿಗವಲ್ಲೆ 5 ಇಷ್ಟೆ ಸೋಜಿಗವೆಂದು ಆಡಲು ದಿಟ್ಟೆ ನಿನಗೆ ಅರಿದೆ ಅಷ್ಟದಿಕ್ಪಾಲಕರನೆ ಓಡಿಸಿ ವೃಕ್ಷ ಕಿತ್ತು ಒದರು(ರುವು?) ದಲ್ಲೆ 6 ಜಲಪ್ರಳಯ ಕಾಲದಲಿ ಜನರಿಲ್ಲದ ಅಂಧಕಾರದಲಿ ಎಲೆಯಾಗಾ ಪರಮಾತ್ಮನ ಮನವ ನೀ ಮೊ- ದಲೆ ಒಲಿಸಿಕೊಂಡೆ 7 ಕಾದು ಸೇವಿಸೆ ಹರಿಯ ಪಾದದ- ಲ್ಲಾದರವಿಲ್ಲದಲೆ ದಾನ ಮಾಡುತ ಮುನಿಹಿಂದಟ್ಟಿದರ್ಹರಿ ಹ್ಯಾಗೆ ಬರುವನ್ಹೇಳೆ 8 ಮೂರು ಲೋಕದ ದೊರೆಯ ಮೂರೆಲೆ ತುಳಸಿ- ಸರಿಯ ಮಾಡಿ ಮುಕುತಿದಾಯಕ ಕೈವಶವಾ- ಗಿರಲು ನೀ ಸಕಲ ಮಾಯವ ಬಲ್ಲೆ 9 ಪಟ್ಟದ್ವೊಲ್ಲಭೆ ನಾನು ಕೃಷ್ಣಗೆ ಮೆಚ್ಚಿ ಬಂದೆಯೆ ನೀನು ಅಚ್ಚುತ ತಾ ಪರಮಾನುಗ್ರ(ಹ)ವ ಮಾಡಿ ಬಂ- ದಿಚ್ಛೆಲಿರುವ ತಾನು10 ಮಾತಾಪಿತರು ಅನುಜನನ್ವಂಚಿಸಿ ಈತಗ್ವಾಲೆಯ ಬರೆದು ಯಾತಕಂಜಿಕೆ ವಲಿಸ್ಯೋಡಿ ಬಂದವಳೆಂದು ಕೀರ್ಹೊಗಳುವುದಲ್ಲೆ 11 ತಂದು ಕೊಡಲು ಮಣಿಯ ಸಭೆಯೊಳು ಅಂದು ತಗ್ಗಿಸಿ ತಲೆಯ ನಿಂದ್ಯದ ಮಾತಿಗೆ ತಂದು ನಿಮ್ಮಯ್ಯ ಮುಂದಿಟ್ಟು ಪೋದನೆ ನಿನ್ನ 12 ಕೇಳೊ ಕೇಳೊ ನುಡಿಯ ನೀನೀ- ರೇಳು ಲೋಕದ ಒಡೆಯ ಹೇಳೋ ಬುದ್ಧಿ ನಿನ್ನಯ ವಲ್ಲಭೆ ಮಾತಾ- ಡೋಳೊ ನಿರ್ಭಿಡೆಯ 13 ರಕ್ಕಸಾಂತಕ ಕೇಳೊ ನಿನ್ನ ಚಿಕ್ಕವಲ್ಲಭೆ ಮ(ಹಿ)ಮೆ ಉಕ್ಕಿ ಉಕ್ಕಿ ಎನ್ನ ಮ್ಯಾಲೆ ಬರಲು ನಿನ- ಗಕ್ಕರ ತೋರುವುದೆ 14 ಆರ್ಯಳೆಂದು ನಾನು ತಾಳಿದೆ- ನಕ್ಕ ರುಕ್ಮಿಣಿ ಮಾತ ಏರಿ ಏರಿ ಏನ್ನಮ್ಯಾಲೆ ಬರಲು ಇದು ನ್ಯಾಯವೇನೊ ನಿನಗೆ 15 ನಾಲ್ಕು ತೋಳಿನಿಂದ ಆಲಿಂಗಿಸಿ ಕಾಂತೆಯರಿಬ್ಬರನು ಯಾತಕಿಂಥ ಕದನವು ಘನವಾಯಿತು ಸಾಕು ಸಾಕುಯೆನುತ16 ವಾರಿಜಾಕ್ಷ ಕೇಳೋ ನಾರದ- ರ್ಹೂಡಿದರೀ ಜಗಳ ಪಾರಿಜಾತ ಸರಿಸವತಿಗೆ ಕೊಟ್ಟ- ರಿನ್ಯಾರು ಸೈರಿಸೋರ್ಹೇಳೊ 17 ನಂದನವನ ತರುವ ನಾ ತಂದಿಟ್ಟೆನಂಗಳದಲ್ಲೆ ಅಂದಿಬ್ಬರನಾನಂದವ ಬಡಿಸಿದ ಚೆಂದದಿಂದಲಿ ನಗುತ 18 ಭಾಮೆ ರುಕ್ಮಿಣಿ ಸಹಿತ ನಡುವೆ ಭೀಮೇಶ ಕೃಷ್ಣನು ಕುಳಿತ ಕಾಮನಯ್ಯನ ಚರಿತ್ರೆಯ ಪಾಡ- ಲಮೃತ ಪಾನವು ನಿರುತ 19
--------------
ಹರಪನಹಳ್ಳಿಭೀಮವ್ವ
ಎಲ್ಲಿ ಬೆಣ್ಣೆಯ ಬಚ್ಚಿಡುವೆನಾ-ಈ |ಕಳ್ಳ ಕೃಷ್ಣನ ಹಾವಳಿ ಘನವಾಯಿತು ಪನೆಲುವು ನಿಲುಕದೆಂದಿಡುವೆನೆ-ನೋಡೆ |ಬೆಳೆಯಬಲ್ಲನಿವ ಬ್ರಹ್ಮಾಂಡಕೆ ||ತಿಳಿಸದೆ ಕತ್ತಲೊರೆಳಿಡುವೆನೆ-ಅಕ್ಕ |ಬೆಳಕೆಲ್ಲವೀತನ ಕಂಗಳ ಢಾಳ 1ಎವೆಯಿಕ್ಕದಲ್ಲಿ ಕಾದಿಡುವೆನೆ-ನೋಡೆ |ದಿವಿಜರೆಲ್ಲ ಈತನಮಾಯೆ||ಅವರಬಳಿಗೆ ಮೊರೆಯಿಡುವೆನೆ-ಅಕ್ಕ |ಇವನಿಟ್ಟ ಬಂಟರಿಂದ್ರಾದಿಗಳೆಲ್ಲರು 2ಈಗಲೆ ಇಂತು ಮಾಡುವನು-ಮುಂದೆ |ಅಗಲಿಸುವನು ನಮ್ಮ ಒಗೆತನವಮ್ಮ ||ಕೂಗಿ ಹೇಳಲು ಮತ್ತೆ ಕೇಡಮ್ಮ-ಮುಂದೆ |ಹೇಗೆ ಪುರಂದರವಿಠಲನಟ್ಟುಳಿಗೆ? 3
--------------
ಪುರಂದರದಾಸರು
ದಾರುದಾರಿಲ್ಲೆಲೆ ರಂಗದಾರುದಾರಿಲ್ಲ ಸಂಗನೀರಜಾಕ್ಷನೀನೆ ಭವಸಾಗರತಾರಿಸಿ ಕೀರ್ತಿ ಪಡೆಯೊ ದಾತಾರ ಪ.ಮೀನವಾಮಿಷವುಂಡಂತೆ ಸುಖಮಾನಿನಿಯರ ತಡಿಯುಧೇನುಜರಿಯಾದಂತೆ ಏಳಿಲುಸೂನುಗಳ ಬಿರುನುಡಿಯುಏನು ಬಳಗಾಮೃಗ ದಗ್ಧ ವಿಪಿನದ ಸ್ನೇಹದೆ ಕಡಿಯುಪ್ರಾಣ ಪಯಣಕೆ ಬುತ್ತಿಲ್ಲಭವಸಂಧಾನ ಹರಿದರೆ ಆರಿಲ್ಲ ಒಡೆಯಾ 1ಏಸೋ ದಿನ ನೆಚ್ಚಿದಕಾಯಹೇಸಿಕೆಘನವಾಯಿತುಆಸೆಬಟ್ಟಾರ್ಥ ವೃಥಾವ್ರಯಕಾಸು ನಾಶಾಯಿತುಲೇಶ ಮಾತ್ರವು ಹಿತ ಹೊಂದದೆ ಮನದ್ವೇಷಿ ತಾನಾಯಿತು ಆಯುಷ್ಯ ಸೂತ್ರವು ಹರಿದರೆ ಭವರೋಗಭೇಷಜರಿಲ್ಲದಂತಾಯಿತು 2ಕುನ್ನಿ ಸಂತೆಗೆ ಹೋದಂತೆ ಬಹುಜನ್ಮ ನೋವಾದವುಮಣ್ಣಿನೊಳು ಹಾಲ ಕೊಡ ಒಡೆದಂತೆನನ್ನ ಧರ್ಮಕರ್ಮವುನನ್ನೆಚ್ಚರ ನನಗಿಲ್ಲವುನಿನ್ನೆಚ್ಚರವೆಲ್ಲಿಯದು ಪ್ರಸನ್ನವೆಂಕಟ ನಿನ್ನ ಯಾತ್ರೆಗೆ ನೀನೆಬೆನ್ನಾದರೆನಗೆಲ್ಲ ಗೆಲುವು 3
--------------
ಪ್ರಸನ್ನವೆಂಕಟದಾಸರು