ಗುರುವಿನಾ ಯಾಕೆ ಮರೆಯುವಿರಣ್ಣಾ | ಈ ಲೋಕದೊಳಗ |
ಶುಭ ಧರೆಯೊಳು ದೀನರುದ್ಧರಿಸುತ ಮೆರೆವಾ ಪ
ಮನಸಿನ ಜಾಡ್ಯ ತನವನು ಬಿಡಿಸಿ | ಶ್ರವಣಾದಿಗಳಿಂದ |
ಅನುವಾಗಿ ಬೋಧಾಮೃತವನೆ ಕುಡಿಸಿ | ಭಕ್ತಿಯ ಕಳೆಯಂಬಾ |
ಘನವಾದಲಂಕಾರವನೆ ತೊಡಿಸೀ | ಯೋಗದ ಸಿರಿಯಿಂದಾ |
ಚಿನುಮಯ ಮಂದಿರವನು ತೋರಿಸುವಾ 1
ನೀರಿನಾ ಬೊಬ್ಬುಳಿಯಂತೀ ತನುವು | ಮಿಂಚಿನಾ ತೆರನಂತೆ |
ಮೃಗ |
ನೀರಂತೆ ಕಾಣದೆ ಮೋಹಿಪ ಮನವು | ಇದನೆಚ್ಚದೆ ಬ್ಯಾಗ |
ಜಾರಿ ಶುಭೇಚ್ಛೆ ವಿಚಾರಕ ತಂದು 2
ವೇದಾಂತದ ನುಡಿಯಾ |
ಲೋಹ ಪರಸವ ನೆಶಿದಾ |
ಸ್ವಾನುಭವ ಸುಖದಾ |
ಗತಿ ಮತಿ ಕೂಡಿಸಿ ಗತಿಯನೆ ಕೊಡುವಾ 3