ಒಟ್ಟು 7 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘನಲೀಲಾಕುಲ ದೇವಕಿ ಬಾಲಾ ಪ ಹೀನನ ಮೊರೆ ಕಿವಿಗೆ ಬೀಳದಲಾ ಸ್ವಾಮಿ ಅ.ಪ ಬಾಲಕ ನೆನೆದುದ ಆಲಿಸಿದೈ ತಂದೆ ಖೂಳನ ನುಡಿ ಕಿವಿಗೆ ಕೇಳಿಸದೆ ದೇವಾ 1 ಹಾಡಲು ಅರಿಯೆ ಕೊಂಡಾಡಲು ಅರಿಯೆನು ನೋಡುವೆಯೋ ನದಿಗೆ ದೂಡುವೆಯೋ ದೇವಾ 2 ಚರಣ ಸರೋಜದ ದರುಶನಗೈಸೋ ಕರವ ಮುಗಿವೆ ಮಾಂಗಿರಿ ರಂಗಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಚಿನ್ಮನೆಂದುಪೇಕ್ಷಿಸದೇ ದತ್ತಾತ್ರೇಯಾ ಪ ಸರಸಿರುಹ ಸಖ ಶತಕೋಟಿ ತೇಜಾ ಪರಭಕ್ತ ಜನ ಸುರ ಭೂಜಾ ಕರುಣಾ ಸಾಗರ ಅತ್ರಿ ತನುಜಾ ಮೊರೆ ಹೊಕ್ಕವರ ರಾಜಾಧೀರಾಜಾ 1 ಪತಿತ ಜನರ ಮಾಡುತಿಹೆ ಉದ್ಧಾರಾ ಚತುರ್ದಶ ಭುವನಾಧಾರ ಅತಿಕೀರ್ತಿ ಸು ಶೋಭಿತ ದಿಗಂಬರಾ ನುತಗುಣ ಮಂಡಿತ ಮುನಿ ಮನೋಹರಾ 2 ಪರಮ ಪುರುಷ ಸದ್ಗುರು ಸಿರಿಲೋಲಾ ಸರಸಿಜ ನೇತ್ರ ದಯಾಳಾ ಧರಿಯೊಳನೇಕ ರೂಪವ ದೋರ್ಪೆ ಘನಲೀಲಾ ಗುರುವರ ಮಹಿಪತಿ ನಂದನ ಪಾಲಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿಲುನಿಲು ಘನಲೀಲಾ ನಲಿನಲಿ ಗೋಪಾಲ ಪ ಕಿಲಕಿಲನಗು ಬಾಲಾ ಒಲಿಒಲಿ ಶ್ರೀಲೋಲಾ ಅ.ಪ ಅಡಿಯಿಡು ಸಡಗರದಿ ನುಡಿನುಡಿ ಕಡುಮುದದಿ ಪಿಡಿಕೊಳಲನು ಕರದಿ ನುಡಿಸಿ ಮುದ್ದಾಡುವೆ ನಾನು 1 ತೊದಲುನುಡಿಗೆ ನಲಿವೆನು ಬಾ ಬಾ ಚದುರತನವ ನೀ ತೋರುತೆ ಬಾ ಬಾ ಮುದದಿ ಕುಣಿಯುತೆ ಮಣಿಯುತೆ ಬಾ ಬಾ ಇದೆಗೋ ಎತ್ತಿಕೊಂಡೊಯ್ವೆನು 2 ಜೋಗುಳಗಳ ಹಾಡಿ ರಾಗದಿ ಕೊಂಡಾಡಿ ಬಾಗಿ ಬಿಗಿದು ಕುಣಿದಾಡಿ ನಾಗಸಂಪಿಗೆ ಸೂಡಿ3 ಸಂತಸದಿಂದೋಡು ಅಂತರಿಕ್ಷವ ನೋಡು ಕಂತುಕವೆಸೆದಾಡು ಶಾಂತಿಯ ಮನಕೆ ಕೊಡು 4 ಚಂದಿರನಂದದ ಕಂದಾ ನೊಂದಿಹ ಮನಕಾನಂದಾ ಸುಂದರ ಮುಖಾರವಿಂದಾ ಅಂದದ ನಗು ಮಿಗಿಲಾನಂದಾ5 ಗೋಲಿಯನಾಡುವೆ ಬಾ ಗಾಲಿಯನೋಡಿಸು ಬಾ ಬಾಲಭಾಷೆಯ ಪೇಳುವ ಬಾ ಲೀಲೆಯನೀಕ್ಷಿಸಿ ದಣಿವೆ 6 ಕುಣಿ ಕುಣಿ ಅರಗಿಣಿಯೆ | ಅಣಕಿಸು ಮನದಣಿಯೆ ಮಣಿ ಕಣ್ಮಣಿಯೆ | ತಣಿಯುವ ಮನಕೆಣೆಯೆ7 ಬಣ್ಣದ ಹೂಮುಡಿವೆ ಹಣ್ಣನು ಮೆಲಗುಡುವೆ 8 ನೊರೆಹಾಲ್ಕುಡಿ ನೀಲಾಂಗ ಮರೆಹೊಕ್ಕರ ಪೊರೆ ರಂಗಾ ಕರುಣಿಸೊ ಶಿರಬಾಗುವೆನಾಂ ಮಾಂಗಿರಿಯ ರಂಗಾ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮಚಂದ್ರ ರಘುವೀರಾ ನಮೋ ನಮೋ ಪ ಶ್ಯಾಮಾಂಗ ಸುಕುಮಾರಾ ನಮೋ ನಮೋ ಕಾಮಿತಾರ್ಥದಾತಾರಾ ನಮೋ ನಮೋ ಓಂಕಾರ ಅ.ಪ ವಸಿಷ್ಟಾದಿಮುನಿ ತೋಷಿತ ನಮೋ ನಮೋ ನಿಶಚರೇಭ ಕುಲಕಾಲಾ ನಮೋ ನಮೋ ಶ್ರೀ ಬಾಲಾ 1 ನೀತಿಸುಗುಣಯುತಶೀಲಾ ನಮೋ ನಮೋ ಘನಲೀಲಾ 2 ಮಾರೀಚಾಂತಕ ವೀರಾ ನಮೋ ನಮೋ ಶ್ರೀಕಾರಾ 3 ಖ್ಯಾತ ಮೃದುವಾಕ್ ದೀಪ್ತಾ ನಮೋ ನಮೋ ಸಂತೃಪ್ತಾ4 ಪರಮ ಪುಣ್ಯಚರಿತ್ರಾ ನಮೋ ನಮೋ ಶ್ರೀಗಾತ್ರಾ 5 ಅರಿಕುಲ ನಾಶಕ ರಂಗಾ ನಮೋ ನಮೋ ಶ್ರೀರಂಗ 6 ದೇವ ದಿವಿಜನುತ ನಮೋ ನಮೋ ಶ್ರೀರಾಮಾ 7 ನಿತ್ಯ ಮುಕ್ತ ವನಮಾಲಾ ನಮೋ ನಮೋ ಭೂಪಾಲಾ8 ಮಾಂಗಿರೀಶ ಮಾಲಿಂಗಾ ನಮೋ ನಮೋ ಶ್ರೀರಂಗ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವನಜನಾಭನ ಅಡಿಯು ಮನುಜಾನೀಪತಿಯು ಪ ಅನುದಿನದೊಳೈತಂದು ಘನಸಿಂಧುಶಯನನು ಮಿಂದು ದ್ವಾದಶಿಯೊಳಿಂದು ಸನುಮತದಿಯರ್ಪಿಸಿದ ಎಡೆಯನು ಘನತರದ ಸಂಭ್ರಮದಿ ಭುಂಜಿಸಿ ಜನಿಸಿ ಭಕುತಿಯನೆನ್ನ ಮನದಿ ಪ್ರ- ಸನ್ನನಾದನು ಎನಿತು ಪೇಳಲಿ 1 ರಕ್ಕಸರಿಗತಿ ವೈರಿ ಮಿಕ್ಕಾನತರ ಸಹಕಾರಿ ಶ್ರೀಹರಿ ಮುರಾರಿ ತಕ್ಕ ವಿಜಯಗೆ ಸಾರಥ್ಯಾಗಿ ಇಕ್ಕರಿಸಿ ಕುರುಪತೀಯನನ್ವಯ ಅಕ್ಕರದಿ ದ್ರುಪದಸುತೆಯ ಸಲಹಿ ರುಕ್ಮಿಣೀಶನು ರಕ್ಷಿಪನು ಸಲೆ 2 ಕರಿವರದ ಶಿರಿಲೋಲಾ ಪರಮಾತ್ಮ ಶ್ರೀಘನಲೀಲಾ ಜರರಹಿತ ವಿಮಲಾ ನಿರುತದೀಪರಿ ಸ್ಮರಿಪ ನರನಿಗೆ ಕರುಣಸಾಗರನಾಗಿ ಸುರವರ ತ್ವರಿತದೀವನು ಹರಸಿ ವರಗಳ ಹರಗೊಲಿದ ನರಸಿಂಹವಿಠಲಾ 3
--------------
ನರಸಿಂಹವಿಠಲರು
ಸಣ್ಣವನೆ ಘನಲೀಲಾ|ಗೋಪಿ|ಸಣ್ಣವನೆ ಘನಲೀಲಾ ಪ ಶಿಶುವೆಂದು ಪೂತನಿ ಮೊಲೆಯನು ಕೊಟ್ಟರೆ| ಕಾಲ ಗೋಪಿ 1 ಚರಣವ ಕಟ್ಟಲು ಒರಳೆಳೆದೊಯ್ದಾ| ಮರಗಳ ಕೆಡಹಿದ ಬಾಲ2 ತಂದೆ ಮಹಿಪತಿ ಪ್ರಭು ನರನೆಂಬರೆ| ಪತಿ ಗೋಪಾಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು