ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಿಹ್ವೆ ರಸವನುಂಬದೆ ತ್ವಕ್ಕಿಗೇನುಛಳಿ ಬಿಸಿಲ ಹದನೂ ಚನ್ನ 1ಕಾಲು ನಡೆಯದು ಕರವು ಪಿಡಿಯದಾಡದು ಮಾತನಾಲಗೆಯು ಉಳಿದವೆರಡೂತಾಳಲಾರವು ವಿಸರ್ಗಾನಂದ ಕೃತ್ಯವನುಜಾಳು ಪ್ರಾಣವದು ಕರಡುಗಾಳಿರೂಪಿನ ಪಾನವ್ಯಾನವು ಸಮಾನವೂಕೇಳುದಾನವದು ಬರಡೂಹಾಳೂರ ಕೊಳಕ್ಕೆ ಕಾಲ ನೀಡಿದ ತೆರದಿಬಾಳುವೀ ಜೀವ ಕುರುಡೂ ನೋಡು 2ಬರಿದೆ ವ್ಯವಹರಿಸಿದರೆ ಫಲವಿಲ್ಲ ನಿಮ್ಮೊಡನೆಸರಸಕೆ ರಸಜ್ಞರಲ್ಲಾಇರುವರೆಮ್ಮವರು ಮೂವರು ಬುದ್ಧ್ಯಹಂಕಾರನೆರೆ ಚಿತ್ರ ಸಂಜ್ಞರೆಲ್ಲಾಬರಿದೆಯಾಳೋಚಿಸುವನೊರ್ವ ಹೆಮ್ಮೆಯೊಳೊರ್ವನೆರೆಯೊಳಿಹನೊಬ್ಬ ಬಲ್ಲಾತಿರುಪತಿಯ ವೆಂಕಟನ ಚರಣವನು ಭಜಿಸುವರೆನೆರೆ ಜಾಣ ನಾನೆಯಲ್ಲದಿಲ್ಲಾ 3ಕಂ||ಮನ ನುಡಿಯಲಿಂದ್ರಿಯಂಗಳುಘನರೋಷದಿ ಜೀವ ತನುಗಳನು ನಿಲ್ಲೆನ್ನುತಮನವೆ ಬಾ ನಮ್ಮೊಳು ನುಡಿನಿವಗಧಿಕಾರವನು ಕೊಟ್ಟವವನಾವನಯ್ಯಾ
--------------
ತಿಮ್ಮಪ್ಪದಾಸರು
ದೇಶ ತಿರುಗಿಸಿ ಪರದೇಶಿ ಮಾಡಲು ಬೇಡೋ ಈಶ ನೀ ಘನ್ನಾ ಸಂಪನ್ನಾ ಪ ಜನಕನಂಶದಿ ಧ್ರುವನು ಸನುಮತವ ಮಂಡಿಸಲು ಘನರೋಷ ತಾಳಿ ಮಲಜನನಿ ಧೂರ್ತೆ ದೂಡಲು ವನವಾಸ ಲೇಸೆಂದು ತಿಳಿದು ನಿನ್ನ ನೆನೆಯೆ ತಾ ನಡೆದ ಘನಮಹಿಮ ಶ್ರೀಮನ್ನಾರಾಯಣ ಸ್ಥಿರಪಟ್ಟವ ನಾಡಿದ 1 ಖಳ ಕುರುಪಗೊಡೆತನವು ಭಲೆ ಧರ್ಮಗೆ ವನವಾಸವು ಬಲು ಮಾನವಂತೆ ದ್ರೌಪದಿಯು ಜಲಜನಾಭನೆ ನೀನೆ ಗತಿಯೆನಲು ಒಲಿದು ಬೆಂಬಲನಾಗಿ ಪಾಂಡವರ ಪೊರೆದೆ 2 ವರಮುನಿಯ ಶಾಪದಿಂದರಸನಿಂ ಪ್ರದ್ಯುಮ್ನ ಕರಿರಾಜನಾಗಿ ಮಡುವೊಳು ಕ್ರೀಡಿಸೆ ಭರದಿ ನೆಗಳಿಯು ಪೀಡಿಸೆ ಶ್ರೀ- ಹರಿಯೆಂದು ಮೊರೆಯಿಡÀಲು ಶ್ರೀ- ಕರದಿಯುದ್ಧರಿಸಿದೆ ನರಸಿಂಹವಿಠ್ಠಲಾ 3
--------------
ನರಸಿಂಹವಿಠಲರು