ಹನುಮ - ಭೀಮ - ಮಧ್ವರು
ಆದರ್ಶಕನೋ ಹರಿ ತನ್ನಾಧರಿಸಿದವರಿ
ಗಾದರ್ಶಕನೋ ಹರಿ ಪ.
ಈ ಧರೆಯೊಳು ತನ್ನಾಧರಿಸಿದ
ಪಾದ ಸೇವಕ ಪಾಂಡವರಿಗೆ ಹರಿ ಅ.ಪ.
ತನುಮನಧನ ನಿನದೆನೆ ಹರುಷಿಪ
ಹನುಮನೇನಿತ್ತನೋ ಘನರಾಮ ರಾಘವಚಂದ್ರಗೆ
ವನರುಹಲೋಚನ ಇನಕುಲಚಂದ್ರನ
ತನ ಹೃದಯದಿ ದಿನ ನೆನೆದನಲ್ಲದೆ 1
ಕುರುಕುಲ ಧ್ವಂಸನು ಕುರುಹು ಕೃಷ್ಣನೇ
ಎನೆ ಭೀಮ ನೆರೆದಾ ನೃಪ ನಿಸ್ಸೀಮನನ
ಕರಿಬಲ ಸಮ ಕರುಣಿಸಿ ಭೀಮಗೆ
ಕರೆದಾದರಿಶಿದ ರಣ ಅಧ್ವರದಲಿ ಹರಿ 2
ಮಧ್ವಾಂತರ್ಗತ ಮುದ್ದು ಶ್ರೀ ಶ್ರೀನಿವಾಸ
ಇದ್ದ ಸ್ಥಳವು ಶುದ್ಧ ಎನುತ ಪೇಳಿ
ಸದ್ವೈಷ್ಣವರ ಉದ್ಧರಿಸಲವರ
ಹೃದ್ಗಮಲದಿ ಕೃಷ್ಣಾ ಇದ್ದಾನೆಂದು 3