ಆವಳಿಗೆ ಪೆಣ್ಣೆಂದು ನುಡಿಯುವರೊ ನರರು
ಅವಳೆ ಮುರಿದುತಿನ್ವ ರಕ್ಕಸ್ಯೆಂದೆನ್ನಿರೊ ಪ
ಮುದ್ದು ಮುಖವನೆ ತೋರಿ ಬುದ್ಧಿನಾಶನ ಗೈದು
ಶುದ್ಧಪದ್ಧತಿ ಕೆಡಿಸಿ ಇದ್ದಾಸ್ತಿಯಳಿದು
ಬದ್ಧನೆನಿಸಿ ಮುಂದೆ ಬೇಡಿದ್ದು ಕೊಡದಿರೆ ಬಿಡದೆ
ಒದ್ದು ನೂಕ್ವದರಿಯದೆ ಶುದ್ಧ ಮೂರ್ಖರಾಗಿ1
ತಂದೆ ತಾಯಿನಗಲಿಸಿ ಬಂಧುಬಳಗ ದೂರೆನಿಸಿ
ಮಂದಿ ಮಕ್ಕಳೊಂದುಗಳಿಗೆ ಹೊಂದಿಇರಗೊಡದೆ
ತಂದದ್ದೆಲ್ಲ ತಿಂದು ನಿಂದೆಯಾಡುತ ಯಮನ
ಬಂಧಕ್ಕಟ್ಟುವುದರಿಯದೆ ಮಂದಮತಿಗಳಾಗಿ 2
ತನುಮನಧನ ಸೆಳೆದು ಘನತೆನಾಶಿಸಿ ಮುಂದೆ
ಬಿನುಗರಲಿ ಬಿನುಗೆನಿಸಿ ತಿನುವುದೊಂದಿನದಿ
ಮನದರಿತು ನೋಡದಿರು ಘನಮುಕ್ತಿಯನ್ನು ಕೊಡುವ
ವನಜಾಕ್ಷ ಶ್ರೀರಾಮನಂ ಘನನೆಂದರಿಯದಲೆ 3