ದಾಸರ ಸಖ ಮಾಡಂದೆ ಎನ್ನ
ಧ್ಯಾಸದಿರಗಲದೆ ಶ್ರೀಹರಿ ತಂದೆ ಪ
ಕನಕರಾಯನು ನಿಜದಾಸ ನಿನ್ನ
ಘನತರ ಪ್ರಸನ್ನತೆ ಪಡೆದನುಮೇಷ
ಅನುದಿನ ನಿಮ್ಮಯ ಘನಮಹಿಮೆಯನು ತೋರಿ
ಮುನಿವ್ಯಾಸರಾಯರ ಮನವ ತಣಿಸಿದಂಥ 1
ಘನ ಸತ್ಯ ಕಬೀರದಾಸ ತನ್ನ
ತನುಮನಧನವನ್ನು ನಿನಗರ್ಪಿಸೀತ
ವನಿತೆಯನೊತ್ತಿಟ್ಟು ತನುಜಾತನನು ಕೊಂದು
ಉಣಿಸಿ ಸಂತರಿಂ ಸುತನ ಪ್ರಾಣವ ಪಡೆದಂಥ 2
ವಾಸನಳಿದು ಪುರಂದಾಸ ತನ್ನ
ನಾಶಬುದ್ಧಿಗೆ ನಾಚಿ ನೀಗಿ ಮನದಾಸೆ
ಸೋಸಿಲಿಂ ತವಪಾದಧ್ಯಾಸ ಬಲಿಸಿ ಜಗದೀಶ
ಹೇಸದೆ ನಿಮ್ಮನು ಗಿಂಡಿಲ್ಹೊಡೆದಂಥ 3
ವರನಾಮದೇವ ನಿಜದಾಸ ತನ್ನ
ಪರಮಸಂತರಿಗೆಲ್ಲ ಪಾಲಿಸಿ ಭಾಷ
ಸಮ ಗೌಪ್ಯದಿಂ ಪಂಪಾಪುರಿಗೈದಿರಲು ನಿನ್ನ
ತಿರುಗಿ ಕರೆದೊಯ್ದು ಇರವ ಪೂರೈಸಿದಂಥ 4
ಬಲ್ಲಿದ ತುಕಾರಾಮದಾಸ ಬಲು
ಕ್ಷುಲ್ಲಕರುಪಟಳ ಸಹಿಸಿ ಮನದಕ್ಲೇಶ
ಎಲ್ಲವ ನೀಗಿ ಹರಿ ಪುಲ್ಲನಾಭನ ಪಾದ
ದಲ್ಲೆ ಮನ ನಿಲ್ಲಿಸಿ ಉಲ್ಲಾಸದಿರುವಂಥ 5
ಬಗೆಯ ತಿಳಿದು ಜಗನ್ನಾಥ ನಿಮ್ಮ
ಸುಗುಣದರಿದು ವ್ಯಾಧಿ ಕಳೆದುಕೊಂಡು ಪ್ರಮಥ
ನಿಗಮಗೋಚರ ನಿನ್ನ ಬಗೆಬಗೆ ಪೊಗಳುತ
ಜಗದಮಾಯವ ಗೆಲಿದು ಸೊಗಸಿನಿಂ ನಲಿವಂಥ 6
ಉದಧಿಜಿಗಿದ ಹನುಮಂತ ಮಹ
ಪದುಮಾಕ್ಷಿಯಳ ಕಂಡು ನಮಿಸಿದ ಬಲವಂತ
ಸದಮಲಾಂಗಿಗೆ ತನ್ನ ಹೃದಯಸೀಳಿದ್ಹಟದಿಂ
ಪಾದ ತೋರಿಸಿದಂಥ 7