ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಶ್ರೀಹತಿಸ್ತುತಿಗಳು ಜಗದುದರನು ಹರಿ ಸೂತ್ರಧಾರಂ ನಗಿಸುವ ಅಳಿಸುವ ಕಾರಕನಿವ ತಾಂ ಪ ಪರಿಪರಿ ಸೃಷ್ಟಿಸುತಾ ಸಲಹುವನು ಅರಿವಿಂದವುಗಳ ಲಯಗೈಸುವನು ಭರಿತನು ಸಕಲ ಚರಾಚರಂಗಳಲಿ ನಿರುತವೆಲ್ಲ ತರತಮದಿಂದಾರಿಸಿ ಇರುವನು ಪರಮಾತ್ಮನು ಸರ್ವೇಶಂ 1 ನಿತ್ಯನಿರ್ಮಲನು ಸತ್ಯಸನಾತನು ಅತ್ಯಂತನು ಗುರುವನಂತನು ಮೃತ್ಯುನಿಯಾಮಕ ಮುಕ್ತಿಪ್ರದನು ಭೃತ್ಯವರ್ಗ ಸಂರಕ್ಷ ಶಕ್ತನು ಮತ್ತೊಂದಕು ಸಹ ಮೂಲನು 2 ಅಣೋರಣೀವನು ಮಹತೋಮಹೀಮನು ಗುಣಗಣಭರಿತನಗಣ್ಯನು ಕ್ಷಣಮಾದಲನು ಕಂಟಕನು ಕಾಲನು ತೃಣಮೊದಲು ಬ್ರಹ್ಮಾಂಡನು ಧೀರನು ಘನಮಹಿಮನು ಶ್ರೀ ಜಾಜೀಶಂ 3
--------------
ಶಾಮಶರ್ಮರು
ಕಾಲಕಾಲದಲಿ ಕೇಶವನೆನ್ನಿರೊ ಬಾಲ ಮುಕುಂದ ಮಾಧವನೆನ್ನಿರೊ ಧ್ರುವ ಉದಯಕಾಲದಲಿ ಅನಂತಮಹಿಮನೆನ್ನಿ ಮಧ್ಯಾಹ್ನದಲಿ ಪದ್ಮನಾ¨sನೆನ್ನಿ ಸಂಧ್ಯಾಸಾಯಂಕಾಲದಲಿ ಶ್ರೀಧರನೆನ್ನಿ ಸದಾ ಕಾಲದಲಿ ಶ್ರೀ ಹರಿಯೆನ್ನಿರೊ 1 ಏಳುತ ಮಚ್ಛಾವತಾರ ಅಚ್ಯುತನೆನ್ನಿ ಮಲಗುತ ಶೇಷಶಯನನೆನ್ನಿರೊ ಹೇಳುತ ವಿಷ್ಣುವರಾಹವತಾರನೆನ್ನಿ ಕೇಳುತ ಕೃಷ್ಣಾವತಾರನೆನ್ನಿ 2 ನಡೆಯುತ ಸುಗುಣ ನಿರ್ಗುಣ ಸರ್ವೋತ್ತಮನೆನ್ನಿ ನುಡಿಯುತ ನಾರಯಣನೆನ್ನಿರೊ ಮಾಡುತ ಕೃಷ್ಣನಿರ್ಮಿತ ದಾಮೋದರನೆನ್ನಿ ಕೂಡುತ ಕೂರ್ಮಾವತಾರನೆನ್ನಿ3 ಆಡುತ ಗರುಡವಾಹನ ತ್ರಿವಿಕ್ರಮನೆನ್ನಿ ಬೇಡುತ ಸ್ವಾಮಿ ವಾಮನನೆನ್ನಿರೊ ನೋಡುತ ವಾರಿಜನೇತ್ರ ಪ್ರಸಿದ್ದನೆನ್ನಿ ಪಾಡುತ ಪರಮಾತ್ಮನೆನ್ನಿರೊ 4 ಉದ್ಯೋಗದಲಿ ಸಹಕಾರನಿರುದ್ದನೆನ್ನಿ ಉದರ ಕಾಯದಲಿ ಉಪೇಂದ್ರನೆನ್ನಿ ಮೇದಿನೊಯೊಳು ಹರಿಮಧುಸೂದನನೆನ್ನಿ ಆದಿ ಅಂತಿಮ ಅಧೋಕ್ಷಜನೆನ್ನಿರೊ 5 ಹೃದಯಕಮಲದೊಳು ಹೃಷೀಕೇಶನು ಎನ್ನಿ ಶಬ್ದಜಿಹ್ವೆಲಿ ಜನಾರ್ಧನನೆನ್ನಿರೊ ಬುದ್ಧಿಯಲಿ ಸಿದ್ಧಬೌದ್ದಾವತಾರನೆನ್ನಿ ಅದಿಅನಾದಿ ಗೋವಿಂದನೆನ್ನಿ 6 ಅನುದಿನ ಮನದೊಳು ಘನಮಹಿಮನು ಎನ್ನಿ ತನುವಿನೊಳು ಪುರುಷೋತ್ತಮ ನಾನೆನ್ನಿ ಅನ್ನವುದಕ ಸೇವಿಸುವ ಹರಿಭೋಕ್ತನೆನ್ನಿ ಘನಭೂಷಣದಿ ಸಂಕರುಷಣನೆನ್ನಿ 7 ಸತಿಪತಿ ಸಂಯೋಗದಲಿ ಪ್ರದ್ಯುಮ್ನನೆನ್ನಿ ಪತಿತಪಾವನ ಪರಬ್ರಹ್ಮನೆನ್ನಿ ಭಕ್ತವತ್ಸಲ ನರಸಿಂಹಾವತಾರನೆನ್ನಿ ಮುಕ್ತಿದಾಯಕ ದೇವೋತ್ತಮನೆನ್ನಿರೊ 8 ಪಾವನಮೂರುತಿ ಪರಶುರಾಮನೆನ್ನಿ ಜೀವಸಂಜೀವ ಶ್ರೀ ರಾಮನೆನ್ನಿ ಭವಭಯನಾಶ ಕಲ್ಕ್ಯಾವತಾರನೆನ್ನಿ ಮಹಿಪತಿಗುರು ವಾಸುದೇವನೆನ್ನಿ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀರಾಮನಾ ಅಡಿವಿಡಿವೆನು ನಾ ಶ್ರೀರಾಮನಾ ಪ ನುಡಿಯಂತೆ ಮಾತೆಯಾ ಮಡದಿಯಿಂದೊಡಗೂಡಿ ಬಿಡದೆ ನಡೆದನವನಡವಿ ವಾಸಕೆ 1 ಕನಕಮೃಗವ ತೋರಿ ಸೊಣಕ ರಾವಣ ತಾನು ಜನಕ ಸುತೆಯ ನಿಜ ವನಕೆ ಕೊಂಡು ಪೋದಾ 2 ಕಾಣಾದೆ ಸತೀಯಳೇ ಮಾಣಾದೆ ಪುಡುರೆದಾ (?) ದಾನವನೆಡೆ ಪೇಳ್ದ ಮಾನಿಜಟಾಯು 3 ಲಂಕಾ ಪತ್ತನಕೆ ತಾ ಹುಂಕಾರಿಯುರಿ ಇರ್ಕೆ ಬಿಂಕದಿ ತಾ ರಾಮನಂಘ್ರಿಗೆರಗಿದಾ 4 ಶರಧಿ ಹಾದಿಯ ಮಾಡಿ ವರರಾಮನೊಡಗೂಡಿ ಲಂಕೆಗೆ ನಡೆದರು 5 ಜಗದೀಶ ರಾಮಾನೆಂದು ಮುಗುದಾ ಹನುಮ ಕರಾ ಜಗಜ್ಜನನಿಗೆ ಇತ್ತ ಸೊಗಲು ಪುಂಗುರಾ 6 ಶರಥಸುತನಿಗೆ ವಸುಧೆಯೊಳ್ಸಮರಾರು 7 ಅನಲಾಮುಖದಿ ತಾನು ವನಿತೇಯ ಕೂಡಿದಾ ಘನಮಹಿಮನ ಲೀಲೆ ಮನುಜರರಿವರೇ 8 ಮನಮುಟ್ಟಿ ಭಜಿಸೀದ ಮನುಜಗೊಲಿದ ನಿಜ ಘನಮಹಿಮನು ಶ್ರೀ ನರಸಿಂಹವಿಠ್ಠಲಾ 9
--------------
ನರಸಿಂಹವಿಠಲರು
ಶ್ರೀವಧು ನಯನಾಬ್ಜ ವಿಲೋಚನಾ ದಾವನಾಗಿಹ ಪಂಕಜಲೋಚನಾ ದೇವನಂಘ್ರಿಯ ಚರಿತದ ಸೂಚನಾ ಪಾತಕ ಮೋಚನಾ 1 ಮತಿ ಮಂತಾಂಭುನಿಧಿ ದ್ವಿಜರಾಜ ದಿತಿ ಸುತಾಹಿ ಕುಲದ್ವಿಜರಾಜಾ ಸುತ ಮುನಿಹೃದಯಾಬ್ಜದಿನೇಶಾ ಸತತ ದುಷ್ಕøತ ತರುರದನೇಶಾ2 ಆವನೀಭುವ ನತ್ರಯವ ಪಾಲಕಾ ದೇವಕೀತಪದಲಾದನು ಬಾಲಕಾ ದೇವನಾಡಿದ ಮನಿಲಿಯ ಶೋದಾ ಭಾವಿಸಲ್ಕವಗ ಗತಿ ಶ್ರೀಯಶೋದಾ3 ಪರಮ ಸುಂದರ ನಂದ ಕುಮಾರಾ ಅರಿತು ಬಂದನುಗರ್ಭದಿ ಮಾರಾ ಧರಿಯೊಳಾವನ ಮನಿ ಕಾಪುರದ್ವಾಶಕಾ ಸ್ಮರಸಲೀ ಜಗದ ಪಾವಿದಾರಕಾ4 ಮಾನವ ತಂದಿಯಾ ಸುಗಮದಿಂದರಿದ ಬಂಧನ ತಂದಿಯಾ ಮಗನ ಕಾಯಿದಾ ಶಿಕ್ಷಿಸಿ ತಂದಿಯಾ ಮಗನ ಶಿಕ್ಷಿಸಿ ಕಾಯಿದಾತಂದಿಯಾ5 ವನಧಿ ವಂಧಿಸಿ ತೇಲಿಸಿ ಪರ್ವತಾ ಜನಪದಾಟಿಸಿ ವಾನರ ಪರ್ವತಾ ಘನಮಹಿಮನು ಜಾನಕಿ ಕಾಂತಾ ನೆನಹುತಿಹನು ಸಹಶಿವಕಾಂತಾ 6 ಸೇವಿಗಂಡೊಲಿದು ರಾಘವ ತಮ್ಮನಾ ರೇವತೀರಮಣಗೆಂಬನುತಮ್ಮನಾ ಜೀವಗಾಯಿದಾ ಭೀಮನತಮ್ಮನಾ ಪಾವನಂಘ್ರಿಯ ನೆನಿಸತತಂಮನಾ7 ಕುದಿಪುತಿರ್ಪುದು ಮಡು ಪವನಾಶನಾ ವಿದಿತೆ ಘಾಳಿಗೆ ಜೀವನ ನಾಶನಾ ಅದರೊಳಗಡಲು ತಾಜಗ ಜೀವನಾ ಸುಧಿಯ ರೂಪವ ಆಯಿತು ಜೀವನಾ8 ಜಲದಲೀ ನೆನಿಯಲು ಮದವಾರಣಾ ವಲಿದು ಮಾಡಿದ ಬಂಧ ನಿವಾರಣಾ ಸತಿಸ್ವರೂಪದ ನೀಡಿದ ಮುಕ್ತಿಯಾ ನಲಿದು ಮಾಡಲಿ ಶ್ರೀ ಹರಿ ಭಕ್ತಿಯಾ9 ದಾವ ತೇಲಿಸಿದ ನಚ್ಚಿಲಿ ಗೋಕುಲಾ ದೇವ ಕಾವನು ನೋಡಿರಿ ಗೋಕುಲಾ ಜೀವಜಾಲದ ಬೇಡಿ ಪ ಗೋಕುಲಾ ತಾವಿಹರಿಸುತಿಹನು ಗೋಕುಲಾ 10 ಸ್ಮರಿಸಿ ಗೋಕುಲಲ್ಯಾಕಳ ಕಾವನಾ ಧರೆಯೊಳೊಪ್ಪುವ ಕಾಟಿಯ ಕಾವಳಾ ಚರಣ ಗೋಚರ ಮುನಿಮನ ಕಾವನಾ ಶರಣ ಹೋಗದು ಸಕಲಿ ಕಾವನಾ11 ಅವನಂಘಿಯ ಸೇರೆ ವನೌಕಸಾ ಜೀವರಾದರು ಸಾಮದಿವೌಕಸಾ ಭಾವಿಸಲ್ಕಾರಿಯದಾದಳು ಶ್ರೀರಮಾ ದೇವನಾಸ್ತುತಿಸಿ ಬಣ್ಣಿಪ ರಾರಮಾ12 ಮುನಿ ಬಂದನೆಂದು ಸ್ಮರಿಸಲು ಕೃಷ್ಣಾ ಮನಸ್ನೇ ಹದಿಂದೋಡಿ ಬಂದನು ಕೃಷ್ಣ ಅನೇಕ ಪದಾರ್ಥದಿಂ ದುಣಿಸುತಾ ಘನಾನಂದ ನೀಡಿದ ಪಾರ್ಥನ ಸೂತಾ13 ಸುರಗಂಗಿಯ ಪಡದ ದಾವನ ಚರಣ ಅರಿಮರ್ದನಾಗಿಹ ದಾಪಾಣಿ ಚರಣಾ ಸರಿಜಾರ ನಖದಾ ತೇಜಕ್ಕ ತರಣೀ ಇಂದಿರೆ ತರುಣಿ14 ಚರಣಧ್ಯಾಯಿಪದಾವನು ಮಾಧವಾ ಸುರನರೋರಗ ಪೂಜಿ ಮಾಧವಾ ಧರಿಯೊಳಾದನು ಬಾಲಕ ನಂದನಾ ಚರಿತ ಪಾಡಿದ ಮಹಿಪತಿ ನಂದನಾ15
--------------
ಕಾಖಂಡಕಿ ಶ್ರೀ ಕೃಷ್ಣದಾಸರು