ಅರಹು ಅಂಜನಾಗದನಕಾ
ಪರಗತಿ ದೊರೆಯದು ಗುರುಕೃಪೆ ಆಗದನಕಾ ಧ್ರುವ
ಕಣ್ಣುಕಂಡು ಕಾಣದನಕಾ
ಅನುಮಾನ ಹೋಗದು ಉನ್ಮನವಾಗದನಕಾ
ಙÁ್ಞನ ಉದಯವಾಗದನಕಾ
ಮನ ಬೆರಿಯದು ಘನಮಯಾಶ್ಚರ್ಯವಾಗದನಕ 1
ತನ್ನೊಳು ತಾ ತಿಳಿಯದನಕಾ
ಭಿನ್ನವಳಿಯದು ಅನುಭವ ಸುಖ ಹೊಳೆಯದನಕಾ
ನೆನವು ನೆಲೆ ಗೊಳ್ಳದನಕಾ
ಘನಪ್ರಭೆಯು ಹೊಳಿಯದು ಧ್ಯಾನ ನಿಜವಾಗದನಕ2
ಏರಿ ತ್ರಿಪುರ ನೋಡದನಕಾ
ಗುರುಮಹಿಮೆ ತಿಳಿಯದು ತಾ ದೃಢಗೊಳ್ಳದನಕಾ
ಮುರು ಹರಿಯಗುಡದನಕಾ
ಹರಿಯದು ಜನ್ಮಗುರುಚರಣವ ನೋಡದನಕಾ 3