ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರಾಗಿರಿ ದಾಸರಾಗಿರಿ ದಾಸರಾಗಿರಿ ಬೇಗನೆ ಪ. ದಾಸರಾಯರ ಪದವ ನಂಬಿ ವಾಸುದೇವಗೆ ಬೇಗನೆ ಅ.ಪ ದುಷ್ಟಮನ ಕಲ್ಮಷವ ಕಳದು ಸೃಷ್ಟಿಕರ್ತನ ಭಜನೆ ಮಾಡುತ ಕಷ್ಟಗಳನೀಡಾಡಿರಿ 1 ತಂದೆ ಮುದ್ದುಮೋಹನರೆಂ- ತೆಂದು ಮೆರೆಯುವ ಗುರುಗಳ ದ್ವಂದ್ವ ಪಾದವ ಭಜಿಸಿ ಈ ಭವ ಬಂಧನವನೀಗಾಡುತ 2 ಜನನ ಮರಣ ನೀಗುವುದಕೆ ಕೊನೆಯ ಮಾರ್ಗವು ದಾಸತ್ವ ಘನಮನದಿ ಸ್ವೀಕಾರ ಮಾಡಿ ವನಜ ನಯನನ ಪಾಡಿರಿ 3 ಅಂಕಿತವ ಸ್ವೀಕಾರ ಮಾಡಿರಿ ಶಂಕಿಸದೆ ಶ್ರೀಗುರುಗಳಿಂ ಶಂಖ ಚಕ್ರಾಂಕಿತನ ಗುಣಮನ ಪಂಕಜದೊಳು ಸ್ಮರಿಸಿರಿ 4 ಆದಿಯಿಂದಲಿ ಇಹುದು ಜೀವಗೆ ಶ್ರೀಧರನ ದಾಸತ್ವವು ಈ ಧರ್ಮ ತಿಳಿಯದಲೆ ಗರ್ವದಿ ಹಾದಿ ತಪ್ಪಲಿ ಬೇಡಿರಿ 5 ಜಗದೊಡೆಯ ಶ್ರೀ ಹರಿಯು ಸರ್ವದ ನಿಗಮಗಳಿಗಾಧಾರನು ಬಗೆಬಗೆಯ ಜೀವರೊಳಗಿರುತಲಿ ಸುಗುಣವಂತರ ಪೊರೆವನು 6 ಈ ಪರಿಯ ದಾಸತ್ವ ಹೊಂದಿ ನಿ ರ್ಲೇಪರಾಗಿರಿ ಕರ್ಮದಿಂ ಗೋಪಾಲಕೃಷ್ಣವಿಠ್ಠಲನು ರೂಪ ತೋರ್ವನು ಹೃದಯದಿ 7
--------------
ಅಂಬಾಬಾಯಿ
ಪರಿ ನಿರ್ದಯಗೈದಿರಿ ತಂದೆ ಶ್ರೀ ಗುರುವೆ ಪೇಳಿ ಪ. ನೊಂದೆನು ಈ ದಿನ ನಿಮ್ಮ ವಾರ್ತೆ ತಿಳಿಯದೆ ಕುಂದೇನು ತೊರಿತೋ ಎನ್ನಿಂದ ಕ್ಷಮಿಸಿರಿ ಅ.ಪ. ಪ್ರತಿದಿನದಲಿ ನಿಮ್ಮ ಹಿತವಾರ್ತೆ ಕೇಳುತ ಅತಿಶಯಾನಂದವ ಪಡುತಲಿದ್ದೆ ಇಂದು ಅತಿಶಯದ ನಿಮ್ಮ ಹಿತವಾರ್ತೆ ತಿಳಿಯದೆ ಮತಿ ಹೀನಳಾಗಿಹೆ 1 ಉಲ್ಲಾಸಗೊಳಿಸುವ ಪುಲ್ಲನಾಭವ ಮಹಿಮೆ ಸೊಲ್ಲು ಸೊಲ್ಲಿಗೆ ನುಡಿಸಿ ಭವದಾಟಿಸಿ ಒಲ್ಲೆನು ನಾನೊಂದು ಇಹಪರ ಸೌಖ್ಯವು ನಿಲ್ಲಲಿ ಎನ್ನಮನ ನಿಮ್ಮ ಪಾದದಿ ನಿರುತ 2 ತನುಮನ ಒಪ್ಪಿಸಿ ಮನದಿ ಧ್ಯಾನಿಸುವುದು ಘನಮನಕಿನ್ನೀಗ ಬರಲಿಲ್ಲವೆ ವನಜಜಾಡಂಡದೊಳಿನ್ನು ಎನ್ನ ರಕ್ಷಿಸುವರ ಮನದಿ ನಾ ಕಾಣೆನು ವನಜಾಕ್ಷ ಬಲ್ಲನು 3 ಮೊರೆಯ ಕೇಳುತಲೀಗ ತ್ವರಿತದಿಂ ಬನ್ನಿರಿ ಸರಸಿಜಾಕ್ಷನ ತೋರಿ ಹರುಷವಿತ್ತು ದುರಿತವ ತೊಲಗಿಸಿ ಕರಕರಗೊಳಿಸದೆ ಪರಮಪ್ರಿಯರು ಎಂಬೊ ಬಿರುದುಳ್ಳ ಶ್ರೀ ಗುರುವೆ 4 ತಡಮಾಡದೆ ಭವಕಡಲ ದಾಟಿಸಿ ಈಗ ಮೃಡಸಖನನು ತೋರಿ ದೃಢ ಮನದಿ ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲ ಜಗಕೆ ಬಿಡದೆ ಪೊರೆಯುವನೆಂಬೊ ದೃಢವೆನಗೆ ಕರುಣಿಸಿ 5
--------------
ಅಂಬಾಬಾಯಿ
ರಾಘವದೇವ ಬಿಡಬೇಡ ಕೈಬಿಡಬೇಡ ಪ ಆಗಮಾರ್ಚಿತ ಪಾದಪದ್ಮಪಿಡಿದೆ ಬಿಡಬೇಡ ಕೈಬಿಡಬೇಡ ಅ.ಪ ಸೀತಾಕಾಂತನೆ ನಿನ್ನ ಭ್ರಾತಲಕ್ಷ್ಮಣನಂತೆ ಪ್ರೀತಿಸುತೆನ್ನ ಸನಾಥನೆನಿಸು 1 ನಂಬಿಬಂದ ವಿಭೀಷಣನನು ಬಲು ಸಂಭ್ರಮದೊಳು ಲಂಕಾರಾಜನ ಗೈದ2 ಹನುಮನಂದದಿ ಸೇವೆಮಾಡಿ ಮೆಚ್ಚಿಸಲಾರೆ ಕನಿಕರದೆನ್ನೊಳು ಘನಮನ ಮಾಡು 3 ದುಷ್ಟಜನಕೆ ಭಯ ಶಿಷ್ಟಜನಕೆ ಜಯ ಕೊಟ್ಟು ಭಕ್ತರಕಾವ ದಿಟ್ಟಹೆಜ್ಜಾಜೀಶ 4
--------------
ಶಾಮಶರ್ಮರು