ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನವಳೆನಿಸೊ ಎನ್ನ ಘನ್ನ ಗೋಪಾಲ ನಿನ್ನವಳೆನಿಸೊ ಎನ್ನ ಪ. ಅನ್ಯರೊಬ್ಬರ ಕಾಣೆ ಮನ್ನಿಸುವರ ಜಗದಿ ನಿನ್ನ ಹೊರತು ಇಲ್ಲ ಪನ್ನಗಾದ್ರಿವಾಸ ಅ.ಪ. ಜನನ ಮರಣ ಕಷ್ಟ ಘನಭವ ಜಲಧಿಯೊಳ್ ಮುಣಗಿ ಮುಣಗಿ ದಡವನು ಕಾಣದಿರುವೆನೊ 1 ದುಷ್ಟ ವಿಷಯಗಳ ಅಟ್ಟಿ ದೂರದಿ ನಿನ್ನ ಶ್ರೇಷ್ಠ ನಾಮಾಮೃತ ಕೊಟ್ಟು ಪುಷ್ಟಿಯನಿತ್ತು 2 ಭಕ್ತಿ ಜ್ಞಾನವು ನಿನ್ನ ಭಕ್ತ ಸಂಗವು ವಿ- ರಕ್ತಿ ಪಥವ ತೋರಿ ಮುಕ್ತಿಯ ಪಾಲಿಸಿ 3 ನಿತ್ಯ 4 ಸಾರ ಉದ್ಘೋಷಿಸುವಂತೆ ಬುದ್ಧಿಪ್ರೇರಕನಾಗಿ ಶುದ್ಧ ಜ್ಞಾನವನಿತ್ತು 5 ನಿನ್ನ ಪದುಮ ಪಾದವನು ನಂಬಿದ ಎನ್ನ ನಿನ್ನ ದಾಸಳೆನಿಸಿ ಘನ್ನ ಮಾರ್ಗವ ತೋರಿ6 ಅಂತರಂಗದ ಧ್ಯಾನ ನಿಂತು ನೀ ನಡಿಸುತ ಅಂತರಂಗದಿ ನಿನ್ನ ಶಾಂತರೂಪವ ತೋರಿ 7 ತಂದೆ ಮುದ್ದುಮೋಹನ ಗುರುಹೃದಯ ಮಂದಿರ ನಿವಾಸ ಎಂದೆಂದಿಗಗಲದೆ 8 ಗೋಪಾಲಕೃಷ್ಣವಿಠ್ಠಲದೇವ ಸರ್ವೇಶಆಪನ್ನಿವಾರಕ ಆಪದ್ಭಾಂದವನಾಗಿ9
--------------
ಅಂಬಾಬಾಯಿ
ಶರಣು ಬಂದೆನೊ ಹರಿಯೆ ಶರಣು ಬಂದೆನೊ ಪ ಕರುಣದಿ ನೋಡೆನ್ನ ಸಲಹು ಎಂದೆನೊ ಅ.ಪ. ಜನನ ಮರಣ ಸುಳಿಗಳಲಿ ತೊನೆದು ಬಳಲಿ ನೊಂದೆನೊಘನಭವದಲಿ ಮೂರುತಾಪಗಳಲಿ ಸಿಲುಕಿ ಬೆಂದೆನೊ 1 ಧನಕೆ ಮೆಚ್ಚಿ ನಿನ್ನ ಮರೆತು ಕಹಿಯ ಫಲವ ತಿಂದೆನೊಅನುದಿನ ಘನ ಚಿಂತೆಯಿಂದ ಮನದ ಶಾಂತಿ ಹೊಂದೆನೊ 2 ವನಿತೆ ಸುತರು ಪೊರೆವರೆಂಬ ಭ್ರಮದೊಳಾತ್ಮ ಕೊಂದೆನೊಕೊನೆಗೆ ಗದುಗು ವೀರನಾರಾಯಣನೆ ಗತಿಯೆಂದೆನೊ 3
--------------
ವೀರನಾರಾಯಣ
ಸತ್ಯ ಸಂಕಲ್ಪ ನೀನಹುದೆಲೊ ಜಗದೊಳು ಭೃತ್ಯವತ್ಸಲ ಹರಿಯೆ ಪ. ನಿತ್ಯ ತೃಪ್ತನೆ ವ್ಯಾಪ್ತ ಜಗದಿ ಹರಿಯೆ ದೊರೆಯೆ ಅ.ಪ. ಜನನ ಮರಣ ವಿದೂರನೆ ದೇವಕಿ ತನಯ ರುಕ್ಮಿಣೀಶ ಘನಭವ ವನಧಿಯ ದಾಟಿಸಿ ಸಲಹೋ ವನಜ ನಯನ ದೇವ ಸತತದಿ 1 ಕಮಲಾಕ್ಷ ಕಮಲೇಶ ಕಮಲಪಾಣಿ ಪದ ಕಮಲವೆನಗೆ ತೋರೊ ಕಮಲನಾಭ ಹೃತ್ಕಮಲದಿ ನಿಲ್ಲೊ ಕಮಲಮುಖನೆ ದೇವ ಶ್ರೀಹರಿ 2 ಭಕ್ತಕಮಲ ಬಂಧು ವ್ಯಾಪ್ತ ದಯಾಸಿಂಧು ಉತ್ತಮನೆ ನೀನೆಂದು ಎತ್ತ ನೋಡಲು ಸುರರೆತ್ತಿ ಕೈ ಪೊಗಳಲು ಮತ್ತೆ ನಿನಗೆ ಸರಿಯೆ ಜಗದೊಳು 3 ಶ್ರೀನಿವಾಸನೆ ಕಾಯೊ ಮಾನನಿಧಿಯೆ ಎನ್ನ ಹೀನ ಕರ್ಮವ ಕಳೆಯೊ ಶ್ರೀನಿಧಿ ದ್ರೌಪದಿ ಮಾನ ಕಾಯ್ದನೆ ಗಾನಲೋಲ ಕೃಷ್ಣ ನರಹರಿ 4 ಸಂಕರ್ಷಣನೆ ಮನ ಪಂಕಜದಲಿ ನಿಂತು ಶಂಕಿಸದಲೆ ಕಾಯೊ ಪಂಕಜಮುಖ ಹರಿ ಗೋಪಾ- ಲಕೃಷ್ಣವಿಠ್ಠಲ ಶಂಖ ಚಕ್ರಧರನೆ ಪೊರೆಯೊ ನೀ5
--------------
ಅಂಬಾಬಾಯಿ
ಹರಹರಪುರಹರಗಿರಿಜಾಮನೋಹರಸುರವರ ಕರುಣಾಕರನೆ ನಮೋ ನಮೋಶರಣರಸುರತರುವರಪಂಪಾಪತಿವಿರೂಪಾಂಬಕ ಹೊರೆ ಶುಭದಿ ಪ.ಮದನಮಥನಪಂಚವದನಕೈಲಾಸದಸದನಸದಾಶಿವ ನಮೋ ನಮೋಹದಿನಾಲ್ಕು ಭುವನದಹದನಬಲ್ಲರಿಜಿತಕದನಕಲುಷಹರ ನಮೋ ನಮೋ1ತಾರಕಪತಿಧರ ಭೂರಿಕೃಪಾಂಬುಧಿತಾರಕಹರಪಿತ ಜಯ ಜಯತಾರಕಉಪದೇಶಕಾರಕ ಘನಭವತಾರಕಮೃತ್ಯುಂಜಯಜಯ2ಶೇಷಾಭರಣವಿಭೂಷಾಭವ ವಿಶೇಷಭಕುತಪ್ರಿಯ ವಿಭೋ ವಿಭೋಶೇಷಭೂಭೃತ್ ಪೋಷ ಪ್ರಸನ್ವೆಂಕಟೇಶ ಭಜನಶೀಲ ವಿಭೋ ವಿಭೋ 3
--------------
ಪ್ರಸನ್ನವೆಂಕಟದಾಸರು