ಚಿರಶಾಂತಿಯ ಪಡೆವುದಕೆ ಮನ ತ್ಯಾಗಮಾಡು ಜೀವಾ
ಮನವೇ ಭವಬಂಧನಕೆ ಘನಕಾರಣವೈ ಜೀವಾ ಪ
ತಿಳಿ ಈ ಮನದಾ ನಾಶಾ ಆದಾಗಲೆ ನಿಜಮುಕುತಿ
ಮನ ಮೋಕ್ಷದ ಸಾಧನವೈ ಅನುಮಾನಿಸದಿರು ಜೀವಾ 1
ಮನವಿಲ್ಲದ ಆ ಸ್ವರೂಪ ಅದು ತಾನೆ ನಿರ್ವಿಕಲ್ಪ
ಅದೆ ನಾನಿಹೆನೆಂದರಿಯೈ ಇದೆ ಮನದ ತ್ಯಾಗ ಜೀವಾ 2
ಪರಮ ಪದ ಆನಂದ ವೇದಾಂತದ ಘನಬೋಧಾ
ಗುರುಪುಂಗವ ಶಂಕರನಾ ಪರಮಾರ್ಥ ಬೋಧಸಾರ 3