ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ ಯುಕ್ತಿಯನರಿಯದೆ ಭಕ್ತ ನಾನೆಂದಾಡುವರ್ಹೊರಿಯ ಧ್ರುವ ಚಕ್ಕಮಲಕು ಭಕ್ತಿಯ ನೋಡಿ ಉಕ್ಕಿ ದೋರುತಲ್ಯದ ಬಲಗೂಡಿ ಮಿಕ್ಕ ಮಾನವರಿಗೆ ದಯಮಾಡಿ 1 ಡಂಭದೋರು ವನೇಕಚಂದ ಗುಂಭಹೇಳನು ಸರಕ್ಕನೆ ಬಂದು ಕೊಂಬುಕೊಡುವ ಮಾತಿಗೆ ಬಂದರೆ ನಂಬದೆ ಹೋಗುವರತ್ತತ್ತ ಹಿಂದ 2 ಹೊಟ್ಟಿನಮ್ಯಾಲೆ ಸಾರಿಸಿದಂತೆ ನಿಷ್ಠೆನೋಡಿ ಜನ ಮೋಹಿಸುವಂತೆ ಘಟ್ಟಿಸುತ ತಮ್ಮ ಹೊಟ್ಟೆಯ ಹೊರೆದರು ಮುಟ್ಟ ಭಜಿಸುವ ಗುಟ್ಟುದೋರಿದಂತೆ3 ರಚ್ಚಿಗೆ ಬಂತು ಭಕ್ತಿ ಇದೇ ಬಹಳ ಹೆಚ್ಚು ನಮ್ಮದೆಂದು ಮಾಡುರು ಮ್ಯಾಳಿ ಮತ್ಸರದೊಳಗಿದ್ದು ಸಚಲಸ್ನಾನ ಮಾಡಿದೆವೆಂದು ಹೇಳುರು ನಿರ್ಮಲ4 ನಗೆ ಬರುತ್ತದೆ ಭಕ್ತಿಯ ಕಂಡು ಜಗದೊಳಗೆಲ್ಲ ಇದೇವೆ ಭಂಡು ಸುಗಮ ಸುಪಥ ಬ್ಯಾರದೆ ಎಂದು ಮಹಿಪತಿ ಘನಬೆರೆದು ಸದ್ಗುರು ಬಲಗೊಂಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಸುಖ ನೋಡಿ ಸದ್ಗುರು ಕೃಪೆಯಿಂದ ವಿಶ್ವತೋಮುಖ ತೋರುವ ತಾಂ ಗೋವಿಂದ ಧ್ರುವ ಏನೆಂದ್ಹೇಳಲಯ್ಯ ಅನುಭವದ ಮಾತು ಖೂನಾಗ್ಯಾದೊಂದೇ ಶಾಶ್ವತ ಆನಂದೋಭರಿತ ಸ್ವಾನಂದ ಸುಖ ತಾನೆ ಆಗ್ಯದೆ ಸನ್ಮತ ಘನಬೆರೆದು ನೋಡುವದೀ ಸುಪಥ 1 ಮಲಕಿನ ಮನುಜರು ಮನವಿಡಬಲ್ಲರೇ ನಾಲ್ಕು ವೇದ ಸಾರುದಕ ಒಮ್ಮೆಯಾದರ ನಿಲುಕಿಸಿ ನಿಜ ನೋಡಿದರಸಾಧ್ಯ ಬೆಳಕೆ ಆಗ್ಯದ ನೋಡಿ ತಿಳಿಕೊಂಡರೆ 2 ಗುರುವಿನಿಂದಧಿಕಿಲ್ಲ ಅರಿತುಕೊಳ್ಳಿರೊ ಖೂನ ಪರಮಗತಿಯ ಸಾಧನ ಸುತತ್ವ ಜ್ಞಾನ ಬೆರೆದು ಮಹಿಪತಿ ಪೂರ್ಣ ಸದ್ಗುರು ಚರಣಕೆರಗಿ ಮನ ಪಡೆವದೀ ದಯಕರುಣಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು