ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೃಷ್ಟಿಗೀಶ ನಿನಗಿಷ್ಟು ದಯಬಾರದ್ಯಕೊ ಎಷ್ಟು ಬೇಡಲು ಎನ್ನ ಮೊರೆ ಕೇಳದಿರುವಿ ಪ ಕರಿರಾಜನ ಪೊರೆದೆಲೋ ನರಗೆ ಸಾರಥಿಯಾದಿ ತರುಣಿಯನುದ್ಧರಿಸಿ ಪರಿಶುದ್ಧಗೈದಿ ಪರಮಕುರುಣಿಯು ನೀನು ದುರಿತಕಾರ್ಯದಿಂ ನಾನು ನರಕಿಯಾಗ್ವುದನರಿತು ಅರಿಯದಂತಿರುವಿ 1 ಖುಲ್ಲದಾನವರೊದೆದು ಎಲ್ಲ ದೇವತೇರಿಗೆ ನೀ ನುಲ್ಲಾಸವನು ಕೊಟ್ಟು ಪುಲ್ಲನಾಭ ಹರಿಯೆ ಕ್ಷುಲ್ಲಕರ ಸಂಗದಿಂ ನಾ ಸಲ್ಲದಂತಾಗುವೆ ಕ ಣ್ಣಲ್ಲಿ ಕಂಡು ನೀ ಕಂಡಿಲ್ಲದಂತಿರುವಿ 2 ಮುನಿಶಾಪದಿಂ ನೃಪನ ಕನಿಕರದಿ ಕಾಯ್ದಿ ನಿಂ ತನುದಿನದಿ ಬಾಗಿಲವ ಘನವಾಗಿ ಕಾಯ್ದಿ ಶುನಕನಂದದಿ ನಾನು ದಿನದಿನಕೆ ಮತ್ತಿಷ್ಟು ಘನಪಾಪಿಯಾಗ್ವುದನು ಮನಕೆ ತರದಿರುವಿ 3 ವನವಾಸಗೈದಯ್ಯಾ ವಾನರನ ಸಲಹಿದಿ ದನುಜನನು ಸಂಹರಿಸಿ ದನುಜನನುಜಂಗೆ ಮಾಣದ ಪಟ್ಟವನು ಮೆಚ್ಚಿ ನೀ ಕೊಟ್ಟೆಯ್ಯಾ ಎನಗ್ಯಾಕೀದುರ್ಬವಣೆ ದೂರಮಾಡದಿರುವಿ 4 ಇನಿತೆಲ್ಲ ಯೋಚಿಸಲು ಘನ ಕುರಣಾನಿಧಿ ನೀನು ನಿನಗವರೆ ದಾಸರೆ ನಾನಲ್ಲವೇನು ಮನಸಿಜಪಿತ ನಿನ್ನ ವನರುಹಂಘ್ರಿಯ ನಂಬಿ ಮಣಿದು ಬೇಡುವೆ ಕಾಯೊ ತಂದೆ ಶ್ರೀರಾಮ 5
--------------
ರಾಮದಾಸರು
ಹುಚ್ಚರಾಗಿ ಕೆಡಬೇಡಿರೆಚ್ಚರವ ಪಡಿರೋ ಮೆಚ್ಚಿ ಸ್ತ್ರೀಯರ ಇಚ್ಛೆಗೊಳಗಾಗದಿರಲೊ ಪ ಬಡಿವಾರತನದಿಂದ ಕಡುದೈನ್ಯದೋರುವರು ಒಡಲೊಳಗಿನ ಹರಳು ಒಡೆದರಳುವಂತೆ ಒಡಲೊಳೊಂಚನೆ ಬಿಡರು ಕಡೆತನಕ ಸ್ಥಿರವಲ್ಲ ಕಡುಪಾಪಿರೂಪಿನ ಮಡದಿಯರ ಮನವು 1 ಮನವ ಕರಗಿಸಿ ತನ್ನ ಮನೆಯ ಪುರುಷನ ಜರೆದು ಮನಮೋಹಿಸಿನ್ನೊಬ್ಬ ಗೆಣೆಯನಂ ಕೂಡಿ ತಿನುವಳು ಬಿಡದೊಂದುದಿನ ಪತಿಯ ಪ್ರಾಣಮಂ ಘನಪಾಪಿ ವನಿತೆಯರ ಮನನಂಬಿಗಲ್ಲ 2 ತನ್ನ ಪುರುಷನಮುಂದೆ ಬಣ್ಣದಮಾತಾಡಿ ಹಣ್ಣಿಗೆತಂದವನ ತನ್ನೊಶದಲಿರಿಸಿ ಮುನ್ನ ಜನನೀ ಜನಕರನ್ನು ಅಗಲಿಸಿ ಒಡನೆ ತನ್ನಯ ಅನುಕೂಲವನ್ನೆ ಸಾಧಿಪಳು 3 ಅವಗೆ ಹಿತವನೆ ತೋರಿ ಇವಗೆ ಕಾಲನೆ ಎತ್ತಿ ಅವನಿಗೆ ಕೈಕೊಟ್ಟು ದಿವರಾತ್ರಿಯೆನದೆ ಭ ಭವ ಭವವ ತಿರುಗುವರು ಜೀವಘಾತಕಿಯರದಾವ ಭರವಸವೊ 4 ಹರಿದಿಯರ ಒಡನಾಟ ನರಕಕ್ಕೆ ಮೂಲವು ದುರಿತಕ್ಕೆ ತವರಿದು ಮರೆಮೋಸದುರುಲು ದುರುಳೆಯರ ಚರಿತಕ್ಕೆ ಮರುಳಾಗಿ ಕೆಡದೆ ಭವ ಹರ ಶ್ರೀರಾಮನ ಪದಸ್ಮರಣೆ ಸಂಪಾದಿಸಿರೊ 5
--------------
ರಾಮದಾಸರು
ತ್ರುಟಿಗೆ ಕ್ಷಣಕೆ ನೆನೆಮನವೇ - ಹರಿಯ |ತ್ರುಟಿಗೆ ಕ್ಷಣಕೆ ನೆನೆಮನವೆ ಪತ್ರುಟಿಗೆ ಕ್ಷಣಕೆ ನೆನೆ ಕ್ಷಣಕೆ ಲವಕೆ ನೆನೆ |ಘಟಿಗೆ ಘಟಿಗೆ ನೆನೆ, ಇರುಳು ಹಗಲು ನೆನೆ ಅ.ಪಜಠರದಿ ಜಗತಿಗೆ ಹಿರಿಯ-ಜಗ |ನ್ನಾಟಕಮೋಹ ಸೂತ್ರಧಾರಿಯ ||ಪಟು ಹಿರಣ್ಯಾಕ್ಷ ಸಂಹಾರಿಯ |ನಿಷ್ಠುರನಾದ ಕಂಸಾರಿಯ 1ರಣಿತ ಕಂಕಣ ನೂಪುರಿಯ-ರು |ಕ್ಮಿಣಿಯನಾಳುವ ದೊಡ್ಡ ದೊರೆಯ ||ಗುಣನಿಧಿ ಗೋವರ್ಧನಧಾರಿಯ-ನೀ- |ಕರುಣಿಯು ಅವನೆಂದರಿಯ 2ನವನೀತದಧಿತಸ್ಕರಿಯ -ಈ |ಭವಹರಒಡೆಯನೆಂದರಿಯ ||ಜವನು ಕೇಳಲು ನಿನ್ನ ಮೊರೆಯ -ಚಿಹಿ |ಅವನ ನಾಲಗ್ಗೆ ಮುಳ್ಳು ಮುರಿಯ 3ಮನಕಭಾಗಿಗೆ ಶ್ರುತಿಯರಿಯ -ದಂಥ |ಘನಪಾಪಿಗಳಿಗವ ದೊರೆಯ ||ನೆನೆವರ ಪಾಲಿಪುದ ಮರೆಯ -ಸು |ಮ್ಮನೆ ಇರಲವ ನಮ್ಮ ಪೊರೆಯ4ಸ್ಮರಿಸಲು ಯಮ ನಿನ್ನ ದಾರಿಯ -ಹೋಗ |ವರಭಾರತಿಪತಿ ಮರೆಯ |ಪುರಂದರವಿಠಲ ದೊರೆಯ -ನೆನೆ-ದಿರೆ ಯಮ ನಿನ್ನನು ಕೊರೆಯ 5ತ್ರುಟಿಗೆ ಕ್ಷಣಕೆ ನೆನೆಮನವೇ-ಹರಿಯತ್ರುಟಿಗೆ ಕ್ಷಣಕೆ ನೆನೆಮನವೇ ||
--------------
ಪುರಂದರದಾಸರು