ಜಯಜನನೀ ಶಾರದೆ ಜನನಮೃತಿಭಯಭಿದೆ ಪ.
ನಯವಿದೆ ತ್ರಿಜಗನ್ಮಯೆ ವೀಣಾವಿನೋದೆ ಅ.ಪ.
ಭಕ್ತಿಜ್ಞಾನ ಮಾನದೆ ಭಗವತ್ಪ್ರಾಪ್ತ ಪ್ರಸಾದೆ
ಮುಕ್ತಿಶಕ್ತಿಪ್ರದೆ ನಿಜ ಭೃತ್ಯವತ್ಸಲೆ ಪ್ರಬುದ್ಧೆ 1
ವೇದಾರ್ಥತತ್ವಪ್ರಬೋಧೆ ಆದಿತೇಯಾನತಪದೆ
ಶ್ರೀಧರೆ ಸದಾನಂದೆ ಸಾಧು ಸೌಭಾಗ್ಯನಿಧೆ 2
ಅನಘ ಲಕ್ಷುಮಿನಾರಾಯಣನ ಭಕ್ತ ಪ್ರಹ್ಲಾದ
ಸನಕನುತೆ ಸನ್ನುತೆ ಘನಪಾಪಾಪಹ್ನುತೆ 3