ದುರಿತಾರಿಯೊಳು ಮನವಿರಿಸಿ ಸೌಖ್ಯವತಾಳು
ನರಕವು ಬರದೊ ಮಾನವಾ ಪ
ಪರಿಪರಿ ಜನ್ಮದೆ ಕೊರಗಿ ಕಂಗೆಡಬೇಡ
ಸ್ಥಿರವಲ್ಲವೀ ದೇಹವೂ ಭರವಸದಿಂದ ಅ.ಪ
ಮಂದಮತಿಯನಾಂತು ನೊಂದು ಸಾಯಲಿಬೇಡ
ಕುಂದುಕೊರತೆಗಳಿಲ್ಲವೋ ವಂದಿಸಲು ಹರಿಯ 1
ಎರಡು ಕಂಬದ ಮೇಲೆ ಮೆರೆವ ಗೋಪುರವಿದು
ಬಿರುಗಾಳಿಯಿಂದಲೋ ಉರುತರ ಮಳೆಯೊಳೊ
ಉರುಳಿ ಬೀಳುವುದೆಂಬುದು ಬರೆದಿಡೊ ಮೂಢಾ 2
ನೀರ ಬೊಬ್ಬುಳಿಯಂತೆ ಆರಿಹೋಗುವುದಿದು
ಸೇರದು ಪದುಮಾಕ್ಷನಾ
ಆರುದಿನ ಬಾಳಿಗಾರು ಸಮರೆನಬೇಡ
ಆರಡಿ ಕಮಲವುತಾ ಸೇರುವವೊಲು 3
ಎನಗೆ ಮುಂದೊದಗುವ ಜನ್ಮಕೋಟಿಗಳೊಳು
ಅನುಗಾಲ ದೇಶವಸ್ಥೆಗಳೊಳಗೂ
ವನಜನಾಭನೆ ನಿನ್ನ ಘನಪಾದಕಮಲವ
ನೆನೆವ ನೆಲೆಸುವಂದದೆ ಅನವರತ ಬೇಡೋ 4
ಜೀವಾತ್ಮ ಪೋಪಾಗ ದೇವದೇವನ ಮರೆವ
ಭಾವಗಳೊಳುದಯಿಪವು
ಸಾವಕಾಶವ ತೊರೆದು ಮಾಂಗಿರಿರಂಗನ
ದಿವ್ಯನಾಮವ ನೆನೆದು ಭಾವುಕನಾಗು 5