ಕಂಡೆ ಕಂಡೆನು ಸ್ವಾಮಿಯ ಸುಪ್ರೇಮಿಯಾ ಪ
ಕಂಡೆ ಕಂಡೆನು ಕೃಷ್ಣರಾಯನ
ಪುಂಡರೀಕ ದಳಾಯತಾಕ್ಷನ
ಪಾಂಡವಪ್ರಿಯ ಪಾರ್ಥಸಖನ ಉ
ದ್ದಂಡ ಮಹಿಮ ಸುರೇಂದ್ರವಂದ್ಯನ ಅ.ಪ.
ಕನಕ ನವಮಣಿ ಖಚಿತ | ವಾಗಿಹ ಸಿಂಹಾ
ಸನದೊಳು ಸಲೆ ಶೋಭಿತ | ಸುರುಚಿರ ದಿವ್ಯ
ಘನನೀಲನಿಭರಂಜಿತ | ನಿರ್ಮಲಗಾತ್ರ
ಕುಂಡಲ ಮಣಿ
ಗಣದ ಹಾರಾದಿ ಬಹು ಭೂ
ಷಣಗಳನುಪಮ ಕಾಂತಿಯಿಂದಲಿ
ಮಿನುಗುವತಿ ಲಾವಣ್ಯ ಮೂರ್ತಿಯ 1
ಕೋಟಿ ಮನ್ಮಥರೂಪನ | ಶ್ರೀಕೃಷ್ಣನ
ಹಾಟಕಾಂಬರಧಾರನ | ಕರುಣಾಮಯ
ಕಂಬು ಕಂಠನ
ಆಟಮಾತ್ರದಿ ಪ್ರಬಲ ದೈತ್ಯ ಮ
ಹಾಟವಿಯ ನಿರ್ಧೂಮಗೈದನ
ಖೇಟವಾಹನನೆನಿಪ ತ್ರಿಜಗದಿ
ಸಾಟಿಯಿಲ್ಲದ ದೇವದೇವನ 2
ಮೆರೆವ ದ್ವಾರಕಾಧೀಶನ | ದ್ರೌಪದಿದೇವಿ
ಮೊರೆ ಕೇಳಿ ಸಲಹಿದನ | ಭಜಿಪರ ಅವ
ಸರಕೊದಗುವ ದೇವನ | ಶ್ರೀ ಕೃಷ್ಣನ
ತರಳತನದಲಿ ಗೋಕುಲದಿ ತಾ
ಪರಿಪರಿಯ ಲೀಲೆಗಳ ತೋರಿದ
ಪರಮ ಪುರುಷನ ಕರಿಗಿರೀಶನ
ಸರಿಯಧಕರಿಲ್ಲದ ಸುರೇಶನ 3