ಬಂದನು ಕೃಷ್ಣ ಗೋವಿಂದ ಮುಕುಂದ
ಭವ ಬಂಧನ ಪರಿಹಾರ
ಶೌರಿ ಪ
ಸಾರಸಪತ್ರನೇತ್ರ ಅನಘ ಘನನೀರದÀ ನಿಭಗಾತ್ರ
ಶಕಟಾಂತಕ ಧೀರ ಕರುಣಾ ಪಾತ್ರ
ಮುರಹರ ಜಂಭಾರಿಸನ್ನುತ ಗೋತ್ರಾ
ಧಾರಿ ಮುನಿಜನ ಮಂದಾರ ಗೋಪಾಲ ಘನ
ಸಾರ ಶೋಭಿತ ಯದುವೀರ ನಾರಾಯಣ 1
ಪಂಡಿತ ಕುಸುಮಪಾಣೆ ಜನಕ ಶ್ರೀ
ಅಂಡಜಗಮನ ಗಾನಲೋಲನೆ
ತಂಡ ರಕ್ಷಕ ಪುರಾಣಪುರುಷ ಕೋ
ದಂಡ ಪಾಣಿ ಧುರೀಣ
ಕುಂಡಲಿಶಯನ ಭೂಮಂಡಲಾಧಿಪ ಬಲೋ-
ದ್ದಂಡ ಪರಾಕ್ರಮ ಚಂಡಮಹಿಮ ರಾಮ 2
ವೇದವೇದ್ಯ ಸುನಾಮಾ ತ್ರಿಜಗನ್ನುತ
ಯಾದವ ಸಾರ್ವಭೌಮ
ಪರಮಾತ್ಮ ಆದಿತೇಯಾಬ್ಧಿ ಸೋಮ
ರಮೇಶಾಂಬುಜೋದರ ಸುಗುಣಧಾಮ
ಮಾಧವ ನರಮೃಗ ಪ್ರಹ್ಲಾದ
ವರದ ಸನÀಕಾದಿ ವಂದಿತ ಚರಣ 3