ಅಯ್ಯಾಜಗದಯ್ಯಾ ಪ
ಅಯ್ಯಾ ಜಗದಯ್ಯಾ ಜೀಯಾನಂದ ನಿಮ್ಮ ಮಹಿಮೆಯ
ಅಜ ಭವಾದಿಗಳಿಗೆ
ತಾಯಿಯ ಮರೆವ ಶಿಶುವಿನ ಪರಿದಣಿದೆನಾ
ಪ್ರೀಯದಲಿ ಸಲಹವು ಅವಗುಣ ನೋಡದೇ 1
ಧರೆಯೊಳಗ ಸಕಲಪತಿತರನ್ನು ಉದ್ಧರಿಸಲ್ಕೆ
ಪರಬೊಮ್ಮತಾನೊಂದು ರೂಪನಾಗಿ
ಕರುಣದಿಂದಲಿ ಅವತರಿಸಿದನೆಂದೆನ್ನದೆ
ನರನೆಂದು ಬಗೆವವನು ಗುರುತಲ್ಪಕಾ2
ಸಾಕಾರ ನಿಮೈಲನಾಗಿ ಕ್ರೀಡಿಸಿದರೆಯು
ಏಕ ಮೇವಾದ್ವಿತಿಯು ಶೃತಿಯೆನುತಿರೇ
ಕಾಕು ಬುದ್ದಿಯಲಿ ಪರತರ ವಸ್ತು ನಿಮಗೆಂದ
ಧಿಕ ಉಂಟೆಂಬುವ ಸುರಾಪಾನಿಯು 3
ಗಗನದಂದಲಿ ಸಕಲಾತೀತನಾಗಿನೀ
ಮಿಗಿಲೆನಿಸಿ ಸಂಸಾರ ಸ್ಥಿತಿಯಲಿರಲು
ಅಗಣಿತತೆ ಗುಣಬಂದನವ ಕಲ್ಪಿಸುವ
ಜಗದೊಳಗ ಬ್ರಹ್ಮತ್ಯಕಾರನವನು 4
ಎನಗ ತಾರಕ ವಸ್ತು ಇದೆಯೆಂದು ನಿಶ್ಚೈಸಿ
ತನು ಮನರ್ಪಿಸಿ ನಿಮ್ಮ ಚರಣಾಬ್ಜಕೆ
ಘನನಂಬಿ ಶರಣವನು ಪೊಕ್ಕುನೆಲೆಗೊಂಬುದಕೆ
ಅನುಮಾನ ವಿಡಿವವನ ಸ್ವರ್ಣಸ್ತೇಯಾ5
ಇಂತು ಪರಿಯಾದಾ ನಾಲ್ವರ ಸಂಗಡದಲಿ ಅ
ತ್ಯಂತ ಹರುಷದ ತಾವ ಬಾಳುತಿಹನು
ಅಂತಿಜನ ಸಮನಾದ ಸರ್ವದ್ರೋಹಿಯವನು
ಸಂತತ ಬುಧ ಜನರು ಯನುತಿರುವರು 6
ಎಂದೆಂದು ಈ ಪಂಚ ಮಹಾಪಾತಕಿಳಗಳ ಮುಖ
ತಂದೆ ತೋರಿದಿರೆನ್ನ ನಯನಗಳಿಗೆ
ಎಂದು ಬಿಡದೇ ಕಾಯೋ ಮಹಿಪತಿ ಸುತ ಪ್ರಾಣ
ಛಂದದಲಿ ಮಂದಮತಿ ತನ ಹರಸಿಯನ್ನಾ 7