ಘನನಂದನ ರಾಮಚಂದ್ರ ಪ
ತಂದೆ ತಾಯಿ ಬಂಧು ನೀನು ಸಂದ ಯೆನ್ನ ಮಿತ್ರನೀನು
ಕಂದನಿಗಾನಂದ ಬೀರಿ ಅಂದವಾದ ಪಾದತೋರು1
ಸ್ವಾಮಿ ನಿನ್ನ ನಾಮವನ್ನು ನೇಮದಿಂದ ಧ್ಯಾನಿಪೆನ್ನ
ಪ್ರೇಮದಿಂದ ಕ್ಷೇಮ ಕೊಟ್ಟು ಸಾಮಗಾನಗೈಸು ವಿಷ್ಣು 2
ಅಗ್ರಹಾರಪಾಲಾಧೀಶ ಅಗ್ರಪೂಜೆಗೊಂಬ ಶ್ರೀಶ
ಸುಗ್ರೀವನ್ನ ಪೊರೆದ ಉಗ್ರದೈತ್ಯನಾಶ ಹೆಜ್ಜಾಜೀಶ 3