ಇಂಥಾದೆಲ್ಲದೆ ತಾಂ ನೋಡಿ ಸತ್ಸಂಗದಸುಖಾ ಇಂಥಾ
ಅಂಥಿಂಥವರಿಗಿಂಥಾದೈಲ್ಲದೆ ನೋಡಿ ಧ್ರುವ
ಒಂದೊಂದುಪರಿ ಕೇಳಿಸುವ ಹ
ನ್ನೊಂದರ ಮ್ಯಾಲಿನ್ನೊಂದರ ಘೋಷ
ಧೀಂ ಧೀಂ ಧೀಂ ಧೀಂ ಧೀಂ ಧೀಂ
ಧೀಂ ಧೀಂ ಮಿಡುಗತಿಹ್ಯ ಆನಂದಸುಖ 1
ಉದಯಾಸ್ತಿಲ್ಲದೆ ಬೆಳಗಿನ ಪ್ರಭೆಯು
ತುದಿಮೊದಲಿಲ್ಲದೆ ತುಂಬಿತು ಪೂರ್ಣ
ಬುಧಜನರನುದಿನ ಸೇವಿಸುತಿಹ್ಯ
ಸದಮಲವಾದ ಸದಾ ಸವಿಸುಖ2
ವಿಹಿತ ವಿವೇಕದ ಅನುಭವಗೂಡಿ
ಬಾಹ್ಯಾಂತ್ರದ ಘನದೋರುತಲಿಹ್ಯ
ಸ್ವಹಿತಸುಖದ ಸುಧಾರಸಗರೆವ
ಮಹಿಪತಿಗುರು ಕರಣದ ಕೌತುಕ 3