ಒಟ್ಟು 4 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದುಸರಲಿ ನಾ ನೆರೆ ಸಂತರಾ | ಸ್ವಾನುಭವಗಳನುವಾಗೀ ಮಾನಿಸಿರೋಳುಸಲೆ ಮಾನಿಸ ಸ್ಥಿತಿಯಲಿ ತಾನಿಹ ಉನ್ಮನಿಯಾಗಿ ಪ ಕಾಮವು ಹರಿಪದ ತಾಮರಸವ ನಿ | ಷ್ಕಾಮದ ಭಕುತಿಗಳಲ್ಲಿ | ಆ ಮಹಾ ಕೋಪವು ಈ ಮನಸಿನ ಗುಣ | ನೇಮಿಸಿ ಶೀಕ್ಷಿಸುವಲ್ಲಿ | ಆ ಮೋಹ ಲೋಭವು ಯಾಮವಳಿಯದಾ | ನಾಮ ಕೀರ್ತನೆಯಲ್ಲಿ | ತಾ ಮರೆಯದ ಅತಿ ವ್ಯಾಮೋಹ ತನ್ನಯ | ಪ್ರೇಮದ ಕಿಂಕರರಲ್ಲಿ 1 ಮದವತಿ ಇಂದ್ರಾದಿ ಪದಗಳ ಸಿದ್ದಿಗೆ | ಳಿದಿರಡೆ ಕಣ್ಣೆತ್ತೆ ಲೆಕ್ಕಿಸರು | ವದಗಿಹ ಮತ್ಸರ ಕುದಿವಹಂಕಾರದ | ಮೊದಲಿಗೆ ತಲೆಯತ್ತಿಸಗುಡರು | ಇದರೊಳು ಸುಖದು:ಖ ಉದಿಸಲು ಹರಿಯಾ | ಜ್ಞದೆಗತಿಗಡ ಸಮಗಂಡಿಹರು | ಉದಕದಲಿ ಕಮಲದ ಎಲೆಯಂದದಿ | ಚದುರತೆಯಿಂದಲಿ ವರ್ತಿಪರು 2 ಜಲದೊಳು ಕಬ್ಬಿಣಸಲೆ ಮುದ್ದಿಯ ನೆರೆ | ನಿಲಿಸದೆ ನಿಲ್ಲದೆ ಮುಣಗುವದು | ಪರಿ | ನಳನಳಿಸುತ ತೇಲುತಲಿಹುದು | ಕಳೆವರ ವೃತ್ತಿಯ ಕಳೆ ಸುವೃತ್ತಿಯ ಮಾಡಿ | ಬೆಳಗಿನ ಘನದೊಳು ಮನ ಬೆರೆದು | ನಲವರು ಮಹಿಪತಿ ವಲುಮೆಯ ಪಡೆಯದ | ಹುಲು ಮನುಜರಿಗಿದು ಭೇದಿಸದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಹಿಮನಿಗೆ ನಮಸ್ಕಾರ ಬ್ರಹ್ಮಾನಂದದಿ ಸಮರಸವಾದ ಸಪ್ರೇಮಿಗೆ ನಮಸ್ಕಾರ ಕಾಮಕ್ರೋಧಗಳೆಂದು ನಿಷ್ಕಾಮದಿ ನೇಮದಲಿಹಗೆ ನಮಸ್ಕಾರ ಶಮೆದಮೆದಲಿ ಸಮದೃಷ್ಟಿಗೂಡಿಹ ಸ್ವಾಮಿ ಸೇವಿಗೆ ನಮಸ್ಕಾರ 1 ಆಶಿ ತಿಳಿದು ನಿರಾಶೆಯೊಳಿಹ ಉದಾಸಿಗೆ ನಮಸ್ಕಾರ ಸುಮಿಲೊಂತಕಗೆ ನಮಸ್ಕಾರ ಸೂಸಿ ತುಳುಕದೆ ಕಾಸಿನಾಶೆಗೆ ಹರಿದಾಸರಿಗೆ ನಮಸ್ಕಾರ 2 ಹೆಚ್ಚು ಕುಂದನೆ ರಚ್ಚಿಗೆ ತಾರದ ಸ್ವಚ್ಛಲಿಹಗೆ ನಮಸ್ಕಾರ ಕಚ್ಚಿ ಕೈ ಬಾಯಿಲಿ ಹುಚ್ಚಾಗದ ನಿಶ್ಚಲೇಂದ್ರಿಗೆ ನಮಸ್ಕಾರ ಮತ್ಸರಳಿದು ನಿರ್ಮತ್ಸರೊಳಿಹ ಸುನಿಶ್ಚಿತನಿಗೆ ನಮಸ್ಕಾರ ಮೆಚ್ಚಿ ಘನದೊಳು ಇಚ್ಛೆಲಿಹ ಮಹಾ ಎಚ್ಚರಿಗೆ ನಮಸ್ಕಾರ 3 ನಾ ನೀನೆಂಬುವ ನುಡಿ ನೀಗಿನ ಅನುಭವಿನಗೆ ನಮಸ್ಕಾರ ಖೂನ ತಿಳಿದಿಹ ಸ್ವಾನುಭವದ ಸುಙÁ್ಞನಿಗೆ ನಮಸ್ಕಾರ ತಾನೆ ತಾನಾಗಿಹ ಘನದೊಳು ನಿರಾಶನಿಗೆ ನಮಸ್ಕಾರ ಮೌನದಲಿ ನಿಜಸ್ಥಾನದಲಿರುವ ಸುದಾನಿಗೆ ನಮಸ್ಕಾರ 4 ಗರ್ವವಳಿದು ಸರ್ವವೇ ನಿಜ ತಿಳಿದ ನಿಗರ್ವಗೆ ನಮಸ್ಕಾರ ತೋರ್ವ ಕರದೊಳು ಅರ್ವನುಭವನಿರ್ವಾಣಿಗೆ ನಮಸ್ಕಾರ ನಿರ್ವಾಹದ ಸುಪರ್ವಾಣಿಯ ಫಲ ಇರ್ವನಿಗೆ ನಮಸ್ಕಾರ ಸರ್ವಸುಖ ಸುರಿಸಿದ ಮಹಿಪತಿ ಶ್ರೀಗುರುವಿಗೆ ನಮಸ್ಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಿಕ್ಕಲು ನೋಡೇ ಸತ್ಸಂಗ | ಯನ | ಗಕ್ಕಿತು ಸ್ವಾನುಭವದಂಗ | ಮಿಕ್ಕಿನವಿಷಯದಿ ಹಂಗಿಲ್ಲಾ | ಒಳ | ವಕ್ಕಲವಾದನು ಶ್ರೀನಲ್ಲಾ ಪ ಜ್ಞಾನಾಂಜನವನು ತಂದಿಡಲಿ | ಅ | ಪರಿ ಬಿಡಲಿ | ಪರಿ ಭಾಸುವ ಕೋಶದಲೀ | ತಾನೇ ದೋರುವ ಜಗದೀಶಾ 1 ಭವ ಬಂಧವ ತಿಳಿಯಲು ನೆಲೆಯಾ | ತಾ | ಅವನಿಲಿ ಶುಕನಳಿ ಕನ್ಯಾಯಾ | ವಿವರಿಸಿಯನ್ನೊಳಗೆಚ್ಚರಿಸಿತೆ | ನಾ | ತವಕದಿ ಚಿದ್ಘನದೊಳು ಬೆರೆತೇ 2 ಏನೆಂದ್ಹೇಳಲಿ ಅಮ್ಮಮ್ಮಾ | ಯನ್ನಾನಂದದ ಸುಖ | ಸಂಭ್ರಮಾ | ಶ್ರೀನಿಧಿಗುರು ಮಹಿಪತಿ ಬೋಧಾ | ಸಲೆ | ತಾ ನಳಿಯಿತು ಕಲ್ಪನೆ ಬಾಧಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು