ಅವನೆವೆ ಶರಣಾ ಪ
ಗುರುಗರಡಿಯ ಮನಿಯೊಳು ಬೆರೆದು |
ಗುರುದಾಸರ ಸಂಗವ ಬಲಿದು |
ಅರಿತಾವಿನಾ ಅಲ್ಲಿಯ ಕಳೆಗಳ ತಿಳಿದು 1
ಹರಿದಾಡುವ ಚಂಚಲ ನೀಗಿ |
ಗುರುಸೇವೆಯಲಿ ತತ್ಪರನಾಗಿ |
ಕರುಣವ ಬೀರ್ವನು ಅರಿಸಖರೊಳಗಾಗಿ2
ಆರಿಗೆ ಹೊಲ್ಲೆಯ ತಾ ನುಡಿಯಾ |
ಆರಿಂದು ನಿಷ್ಟುರ ಪಡಿಯಾ |
ಧರಿಯೊಳು ಸನ್ಮತ ಮಾರ್ಗದಿ ತಾ ನಡಿಯಾ3
ದೋರಗಡುದೆ ಬಲ್ಲವಿಕೆಯನು |
ಪರರವಗುಣವನು ಅರಿಸನು |
ನೀರು ಹಾಲಿನ ಸಖ್ಯಕ ಪರಿಲಿಹನು4
ತನುಧನ ಮದದೊಳು ಬೆರಿತಿರದೇ
ಘನದೆಚ್ಚರಿಕೆಯ ಮರೆದಿರದೇ
ನೆನೆವನು ಗುರುಮಹಿಪತಿಸ್ವಾಮಿಯ ಬಿಡದೇ5