ಮರತರ ತಾ ಮರವಲ್ಲದು ನೋಡಲು |
ಅರತರತಾ ಅರವಲ್ಲದು ನಿಜದೊಳು |
ಘನದರುವೇ ತಾನಾಗಿ |
ಕುರುವಿನೊಳಿರುವಾಗಿಹ ಸ್ವಾನಂದದಿ |
ತೆರವಿಲ್ಲದೆ ಸಲೆ ತುಂಬಿತುಳುಕುತಿಹ |
ಜಯ ಜಯತು 1
ತೋರುವ ದೃಶ್ಯವ ಕಾಂಬುವ ನಯನಕ |
ಸಾರಿಯಮನವನು ನೋಡುವ ಬುದ್ಧಿಗೆ |
ನಿತ್ಯ ನಿರಂಜನ ವಿಶ್ವ ಭರಿತನೆಂದು ||
ಸಾರುವ ಶೃತಿಯಿಂದಾತ್ಮ ಪ್ರಚೀತಿಯ |
ಭವ |
ವಾರಿಸಿ ಚಿತ್ಸುಖಲಿರಿಸಿದ ಮಹಿಪತಿ | ಸದ್ಗುರು ಜಯ ಜಯತು 2
ಮೊದಲಿಗೆ ಜಯದಾರ್ಜ ಲಕ್ಷಣವನು |
ಹೃದಯದಿ ನೆಲೆಗೊಳಿಸಿ |
ಇದರದರಿಸಿ ಭವದ್ಹೆದರಿಕೆÉ ಹಾರಿಸಿ |
ಸದಮಲ ಬ್ರಹ್ಮನ ಕಳೆಯನು ತೋರಿಸಿ |
ಗುರುಮೂರ್ತಿಗೆ ಶರಣು 3
ಆಡುವ ರೇಚಕ ಪೂರ್ವಕ ನಂದಿಯ |
ಜೋಡಿಸಿ ಯರಡನೆ ಮೆರೆವಸುಷಮ್ನಿಯ |
ನಿಜವiನ ಸಾರಥಿಯಾ |
ಕೂಡಿಸಿ ಹರುಷದ ತೇರಿ ನಡಸುತ ಸ |
ಫಾಡಿರೆಯಿಂದಲಿ ಮೇಲ್ಗಿರಿಯಾತ್ರೆಯ |
ಗುರುಮೂರ್ತಿಗೆ ಶರಣ 4