ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾದಿ ಪಿಡಿ ಕರವಾ ದೇವರ ದೇವ ಪ ಕರುಣಾದಿ ಪಿಡಿಕರ ಸರಸಿಜಾಂಬಕ ಎನ್ನ ಗುರು ರಘುಪತಿ ಪಾಲಾ ಮರುತಾಂತರಿಯಾಮಿ ಅ.ಪ ಗತಶೋಕ ಜಿತಮಾಯ ಪತಿತ ಪಾವನವೇದ್ಯ ಪ್ರತಿಪಾದ್ಯ ಕ್ಷಿತಿಪ ಭಾರತಿ ಕಾಂತ ವಂದ್ಯಾ ಆ ನತರ ಪಾಲಕ ದುಷ್ಟದಿತಿಜಾರಿ ತವಪಾದ ಶತಪತ್ರ ಬಿಡದೆ ಸಂತತ ಭಕುತಿಯಲಿಂದ ಸ್ತುತಿಪಾರ ಮಿತ ಅಘವಾ ಕಳೆದು ಮತ್ತೆ ಹಿತದಿ ಸದ್ಗತಿ ಕೊಡುವಾ ನಿನ್ನಯ ದಿವ್ಯಾಚ್ಯುತವಾದ ಘನದಯವಾ ಪೊಗಳು ವಂಥ ಮತಿವಂತರನು ಕಾಣೆ ಶತಮುಖಜಜ ಮಾವಾ 1 ಅನಿಮಿತ್ಯ ಬಂಧುವೆ ವನಚಾರಿ ಕೂರ್ಮನೆ ಕನಕ ನೇತ್ರಾರಿ ಪಾವನತರ ನರ ಪಂಚ ನಾನಾ ರೂಪದಿಂದ ಬಾಲನಾ ಕಾಯ್ದೊನರ ಹರಿಬಲಿ ನಿತ್ಯ ಅನಘಾತ್ಮ ಜನನೀಯ ಕೊಂದಾನೆ ಜನಕ ಜಾಪತಿಯ ರು ಕ್ಮಿಣಿ ಮನೋಹರನೆ ವಸನದೂರ ಹಯರೂಢ ಜನನ ರಹಿತ ವಿಖ್ಯಾತಾ ನಮಿಸುವೆ ಅನಿಮಿಷಪಜನ ಸುತಾ ಬೇಡಿಕೊಂಬೆ ಅನುದಿನದಲಿ ಮಮತಾ ಕನಕೋದರನ ತಾತಾ 2 ಸರಿವೀರ ಹಿತ ಬಲಿಸರಸಿ ಜಾಂಬಕ ಮುರ ಹರ ಹರ ವಂದಿತ ಹರಿಮುಖ ಹರಿನುತ ಪಾದ್ಯ ಹರಸು ಎನ್ನಯ ಅಘ ನಿರುತ ನಿನ್ನ ಡಿಂಗರರ ನೀಕರದಿತ್ತು ಗುರುವಿನ ಚರಣಾದಿ ಸ್ಥಿರ ಭಕುತಿಯ ಕೊಟ್ಟು ವರ ಶಿರಿಗೋವಿಂದ ವಿಠಲನೆ ನೀ ಯನ್ನ ಮರಿಯದೆ ಮಮತೆಯಿಂದಾ ನಿತ್ಯ ಗರಿಯುತಲಿರು ಆನಂದಾ ನಿನ್ನಯ ಪಾದಾದಿರಲಿ ಮನಸು ಮುಕುಂದಾ ದುರುಳ ಭವದ ಬಂಧ 3
--------------
ಅಸ್ಕಿಹಾಳ ಗೋವಿಂದ
ಶ್ರೀ ಗುರು ಮೂರ್ತಿಯನು ನಂಬಿ ಧ್ಯಾನಿಸಿ ಜನರು | ನೀಗಿ ಚಂಚಲ ಚಿತ್ತದಾ ಭಾಗವತ ಧರ್ಮದಿಂದರ್ಚಿಸಲು ಕರುಣ ಮಳೆ | ಭವ ಪಾಶದೆಶೆಯಿಂದ ಪ ಎಳೆಯ ಮಾದಳಿರ ಸೋಲಿಸುವ ಮೃದುತರ ಬೆರಳ ನಖ ಚಲುವ ಪಾದಾ | ನಳ ನಳಿಪ ಪವಳ ಮಣಿಯಂತೆ ಹರಡಿನ ಸೊ.... ವಿಲಸಿತದ ಜಂಘೆದ್ವಯದಾ | ನಿಚ್ಚಳದ ಜಾನೂರದ ಸ್ಪುರದಾ | ವಲುಮೆಮಿಗೆ ತನು ಮಧ್ಯ ಸಂಪಿಗೆಯ ಗಂಭೀರನಾಭಿ ಕಿರು ಡೊಳ್ಳು ತ್ರಿವಳಿ ವಾಸನೆಯ ಛಂದಾ 1 ಪುತ್ಥಳಿಯ ಹಲಗಿ ಕಾಂತಿಯ ಲೊಪ್ಪುತಿಹ ಉರದ | ವತ್ತಿಡದ ಕೊರಳ ಮಾಟಾ| ಮಣಿ ಬಂಧ | ಮತ್ತ ಊರ್ಪರಿಯಕಟಾ | ಮೊತ್ತದೋರ್ವಂಡ ಭುಜ ಶ್ರವಣ ನುಣ್ಗದಪುಗಳು | ಹೆತ್ತ ಪಲ್ವಧರ ನೀಟಾ | ಸೂರ್ಯ ಪರಿನಯನ | ವೆತ್ತ ಭ್ರೂಲತೆ ಪೆರ್ನೊಸಲ ಸುಕೇಶಿಯ ಜೂಟಾ 2 ಮಣಿ ತೇಜದೊಳೆ ಯುಗ್ಮ ಕುಂಡಲಗಳು | ನವರತ್ನ ಹಾರ ಮಂಡಿತ ಪದಕ ವಡ್ಯಾಣ | ಠವ ಠವಿಸುತಿಹ ಸರಳು | ಬವರದೊಳು ಚಿತ್ತ ತೆತ್ತೀಸ ತಾಯಿತ ಕಡ ವಜ್ರ ದುಂಗುರಗಳು | ತವಕದೊಳ್ ನಿರೆ ಹಾಕಿ ದಂಬರವ ಮೌಲಿಕದ | ಕಾಲ ಕಡಗ ಅಂದುಗೆಗಳು 3 ದ್ವಿನಯನ ಮಧ್ಯ ರಾಜಿಸುವ ಮಂಟಪದೊಳಗ ಧ್ಯಾನ ಸಿಂಹಾಸನದಲಿ | ಸಾನು ರಾಗದಲಿ ಕುಳ್ಳಿರಿಸಿ ಚರಣ ದ್ವಯವ ಜ್ಞಾನ ಗಂಗೋದಕದಲಿ | ಮಾನಸದಿ ಅಭಿಷೇಕವನೆ ಮಾಡಿ ಸಲೆ ಪೂಸಿ ಆನಂದ ವಸ್ತ್ರ ಗುಣಲಿ | ಮೌನದಲಿ ಲಯಲಕ್ಷಿ ಗಂಧಾಕ್ಷತೆಯ ಸುಮನ ತಾನಿಟ್ಟು ಬೆಳಗಿ ಧೂಪದಿ ಏಕಾರತಿಗಳಲಿ 4 ಬಳಿಕ ಕಸ್ತೂರಿಯ ಕೇಶರದ ಚಂದನ ಪೂಸಿ | ಕಳೇವರಕ ವಪ್ಪಿಲಿಂದಾ | ಥಳ ಥಳನೆ ರಂಜಿಸುವ ಬಟ್ಟ ಮುತ್ತಿಶಾಶೆ ಗಳನಿಟ್ಟು ಬೇಗ ಛಂದಾ | ಚಲುವ ಮಲ್ಲಿಗೆ ಕುಂದರ್ಕೆ ಜಾಜಿ ಕೇತಕಿಯು ನಳಿನ ಮೊದಲಾದರಿಂದಾ | .....ರ ಮಾಲೆಯಾ ಹಾಕಿ ಪರಿಮಳದಿ ಧೂಪವನು | .....ಸಂಚಿತ ದಶಾಂಗದಿ ಚಕ್ಷು ಜ್ಯೋತಿಯಿಂದಾ 5 ವರಶಾಂತಿ ಶಕ್ತಿ ಯರ್ಚಿಸಿ ಕುಳ್ಳಿರಿಸಿ ಪುರುಷಾರ್ಥ ದೀಪಂಗಳು | ಮೆರೆಯುತ ಪ್ರಜ್ವಲಿಸಿ ತರುವಾಯ ಕನಕಮಯ | ಹರಿವಾಣ ಬಟ್ಟಲುಗಳು | ಪರಮಾನ್ನ ಪಂಚಭಕ್ಷಗಳನ್ನ ಸೂಪಘೃತ ಪರಿ ಪರಿಯ ಶಾಖಂಗಳು | ಸುರಸ ಪಾಲು ಮೊಸರು ತನಿವಣ್ಣಲುವಗಾಯಿಕೇಸರ | ಧರಿಯೊಳಗ ಲೇಹ ಪೇಹ ಮೊದಲಾದ ಭೋಜ್ಯಂಗಳು 6 ಇನಿತು ಅರ್ಪಿಸಿ ಸ್ವಾದುದಕ ಕೈದೊಳೆದು | ಗುಣದಿತ್ತು ತಾಂಬೂಲವಾ | ಅನುಭವದಾರತಿಯು ಪುಷ್ಪಾಂಜುಳಿ ನಮನ ಪ್ರದ ಕ್ಷಿಣ ಗೀತ ನೃತ್ಯ ಮುದವಾ | ಘನ ತೀರ್ಥಸು ಪ್ರಸಾದವ ಕೊಂಡು ಸೂರ್ಯಾಡಿ ಅನುವಾಗಿ ಸಖ್ಯದನುವಾ | ಮನುಜ ಜನ್ಮಕ ಬಂದು ಗುರು ಮಹಿಪತಿ ಸ್ವಾಮಿ | ಘನದಯವ ಪಡಕೊಂಡು ಪಡೆಯೋ ಮುಕ್ತಿಯ ಸ್ಥಳವಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹಯ್ಯಾ ನಿನ್ನ ಸಾರಿದೇ|ಶ್ರೀ ರಮಣನಾ ಪ ಮರುಹು ಮರಸಿ ಎನ್ನ|ಅರಹು ಕೊಡಿಸಿ ನಿನ್ನಾ| ಸ್ಮರಣೆಯೊಳಿಡಬಾರದೇ 1 ನಿನ್ನ ಚರಣವದೋರಿ|ಘನದಯವ ಬೀರಿ| ಧನ್ಯನ ಮಾಡಬಾರದೇ 2 ತಂದೆ ಮಹಿಪತಿ|ನಂದನ ಸಾರಥಿ| ಇಂಧುದ್ಧರಿಸಬಾರದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ತಿರುವಳ್ಳೂರ್ ಶ್ರೀ ವೀರರಾಘವ ಸ್ತೋತ್ರ51ವೀರರಾಘವ ಸ್ವಾಮಿಸಿರಿಕನಕವಲ್ಲೀಶಶರಣಾದೆಪೊರೆಎನ್ನ ಕರುಣಾ ಸಮುದ್ರಪಮರುತಾದಿ ಸುರಸೇವ್ಯ ಉರುಗುಣಾರ್ಣವ ದೋಷದೂರ ಸ್ರಷ್ಟಾಪಾತ ಪರಮೈಕ ಈಶ ಅ ಪಜಗಜ್ಜನ್ಮಾದ್ಯಷ್ಟಕ ಸುಕತೇ ನೀನೇವೆನಿಗಮೈಕವೇದ್ಯನೇ ಏಕಾತ್ಮ ಭೂಮನ್ಗೋಗಣಗಳೆಲ್ಲವೂ ಪೊಗುಳುತಿವೆ ನಿನ್ನನ್ನೇಏಕ ವಿಧದಲ್ಲಿ ಇದಕೆ ಸಂದೇಹವಿಲ್ಲ 1ನಿವ್ರ್ಯಾಜ ಭಕ್ತನ ಆತಿಥ್ಯವನು ಸ್ವೀಕರಿಸಿಸತ್ಯವಾಗಿ ವರವ ಈವಿ ಭಕ್ತರಿಗೆ ಎಂದಿಸತ್ಯಲೋಕಾಧಿಪ ಪದಾರ್ಹನನುಯಾಯಿಗಳಭೃತ್ಯನಾದೆನ್ನಪೊರೆಉದ್ಯಾಕರ್Àತೇಜ2ನೀನಾಗಿಯೇ ನೀನು ನಿನ್ನ ಸ್ಥಳಕೆ ಕರೆನಿನ್ನದರುಶನವಿತ್ತಿ ನಿನಗೇವೆ ನಾ ಶರಣುಮನೋವಾಕ್ ಕಾಯದ ಎನ್ನ ಸರ್ವಕರ್ಮಗಳೊಪ್ಪಿಘನದಯವ ಬೀರೊ ' ಪ್ರಸನ್ನ ಶ್ರೀನಿವಾಸ&ಡಿsquo;3
--------------
ಪ್ರಸನ್ನ ಶ್ರೀನಿವಾಸದಾಸರು