ಸಿಕ್ಕಿತೆನಗೊಂದು ಸುವಸ್ತ ಮುಖ್ಯದಂತಸ್ಥ
ಅಕ್ಕಿ ಮನಕ್ಕಾಯಿತು ಸ್ವಸ್ತ ದಕ್ಕಿ ಪ್ರಶಸ್ತ 1
ಕಟ್ಟ ಇಡುವದಲ್ಲ ಬಿಟ್ಟರೆ ಹೋಗುವದಲ್ಲ
ಮುಟ್ಟಿದರೆ ಬಿಡುವುದಿಲ್ಲ ಗುಟ್ಟು ಕೇಳೆಲ್ಲ 2
ಮುಚ್ಚುಮರಿಲಿಹುದಲ್ಲ ಬಚ್ಚಿಟ್ಟು ಕೊಂಬಂಥದಲ್ಲ
ನೆಚ್ಚಿದ ಮಹಿಮನೆ ಬಲ್ಲ ಆಶ್ಚರ್ಯವಲ್ಲ 3
ಭಾನುಕೋಟಿ ತೇಜನಾಗಿ ಘನದಯದಲೊದಗಿ
ತಾನೆ ಸಿಕ್ಕಿತ್ಯೆನಗಾಗಿ ಸಾನುಕೂಲಾಗಿ4
ಮಿಹಿತದ ಅಗರ ಸ್ವಹಿತ ಸುಖಸಾಗರ
ಮಹಿಪತಿಯ ಮನೋಹರ ಸಹಕಾರ 5