ಮರೆಯದಿರು ಮರೆಯದಿರು ಮಾರಮಣನೇ ಪ
ಗುರು ಸತ್ಯಬೋಧಾರ್ಯ ವರದ ರಘುರಾಮಾ ಅ.ಪ.
ವನ ವನಂಗಳ ತಿರುಗಿ | ಹಣ್ಣು ಹಂಪಲ ಮೆದ್ದುದಣುವಾದ ಪಾಡು ನಿನಗರಿಕಿಲ್ಲವೇ ||ದಿನ ದಿನದಿ ಚಿತ್ರ ವಿಚಿತ್ರ ಭೋಜ್ಯಗಳನ್ನುಕ್ಷಣ ಬಿಡದೆ ಕೈಕೊಂಬ | ಘನ ಗರ್ವದಿಂದೆನ್ನ1
ವಜ್ರ ಮಣಿ ಮಕುಟಗಳಭಾರವನು ನೀ ವಹಿಸಿ | ಬಹು ಬಿಂಕವನೆ ತಾಳೀ 2
ಹೇಮ ತೊಟ್ಟಿಲೊಳು ನೀ ಮಲಗಿಉಬ್ಬಿ ಓಲಗಗೊಂಬ ಉತ್ಸಾಹದಿಂದೆನ್ನ 3
ಹೆಂಡತಿಯ ಕಳಕೊಂಡು | ಕಂಡ ಕಂಡವರಿಗೇಅಂಡಲಿದ ಮಾತುಗಳು ಅನಲೇತಕೇ ||ಮಂಡಿತಾದಾಭರಣ | ಮತ್ತೆ ಎಡದಲಿ ಸತಿಯುಕಂಡು ಸುಖ ಬಡುವಂಥ | ಕಳವಳಿಕೆಯಿಂದೆನ್ನ 4
ಈಗಲೀ ಸತ್ಯಬೋಧರ ಬಳಿಯಲಿರಲಾಗಿನೀಗಿ ಹೋಯಿತೆ ನಿನ್ನ ಪಡಿಪಾಟಲೂ ||ಆಗೀಗಲೆನ್ನದೇ ಕ್ಷಣ ಬಿಡದೆ ಕೈಕೊಂಡು ವೈಭೋಗ ಬಡುವುದೂ ಮೊದಲಿಗಿದ್ದಿಲ್ಲ 5
ನಮ್ಮ ಗುರುಗಳು ನಿಮಗೆ | ಈ ಪರೀಯುಪಚಾರಘಮ್ಮನೇ ಮಾಡಲೂ ಘನತೆಯಿಂದಾ ||ನಮ್ಮ ಸಾಕದೆ ಇನಿತು ದೂರ ಮಾಳ್ಪುದು ನಿನಗೆಧರ್ಮವಲ್ಲವೊ ಸ್ವಾಮಿ ದಯದದಿಂದ ನೋಡೆಮ್ಮ 6
ಪರಿ ಭಾಗ್ಯವೂ ||ಯಾಕೆ ಭಕುತರ ಮಾತು ನಿರಾಕರಿಸಿ ಬಿಡುವುದೂಶ್ರೀಕಾಂತ ಎರಗುವೆ ವ್ಯಾಸ ವಿಠಲ ರೇಯಾ 7