ಒಟ್ಟು 7 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘನತಾಪ ಘನತಾಪ ಘನತಾಪ ಸಂಸಾರ ನೆನೆಸಲಳವಲ್ಲದನು ಕನಸಿನೋಳಭವ ಪ ಕ್ಷಣಹೊತ್ತು ಮನಸನ್ನು ಸನುಮತಯಿರಗೊಡದು ಗಣನೆಯಿಲ್ಲದ ತಾಪವನೆ ಒದಗಿಪುದಭವ ಅ.ಪ ವನಿತೆಯರ ತಿನಿಸು ತನುಜ ಅನುಜರ ಮುನಿಸು ಜನರನೊಲಿಸುವುದಿನಿಸು ಘನತಾಪ ಅಭವ ತನುರೋಗ ಮನರೋಗ ಧನದ ವಿಯೋಗ ಇನಿತೆಲ್ಲವೊಂದಾಗಿ ಘನಬಾಧಿಸುವುವಭವ 1 ಕೊಟ್ಟ ಒಡೆಯರು ಬಂದು ನಿಷ್ಠೂರಾಡುತ ಬಲು ಕಟ್ಟಿಕಾದುವ ಮಹಕೆಟ್ಟತಾಪಭವ ತಾಪ ಕೊಟ್ಟವರ್ಹಂಗಿನ ತಾಪ ಹುಟ್ಟುಸಾವಿನ ಅತಿ ಕಷ್ಟತಾಪಭವ 2 ಮನುಜರೂಪದ ಮಹ ಘನತೆಯನು ಕೆಡಿಸಿ ಕ್ಷಣದಿ ತೋರೆರಗುವ ಕನಿಕಷ್ಟ ಅಭವ ಇನಿತೀ ಸಂಸಾರತಾಪ ಕನಿಕರದಿಂ ಕಡೆಹಾಯ್ಸಿ ಮನಕೆ ಜಯನೀಡಿ ಕಾಯೋ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು
ನಗುವರಲ್ಲೋ ಕೃಷ್ಣಾ ನಿನ್ಹಾಸಕೆ ನೋಡಿ ಪ ಸುತನಾ ಸತಿಯರು ಸಹಿಸದೆ ವಿರಸವಾಗುತಿರೆಸುಮ್ಮನಿಪ್ಪುದು ನೋಡಿ ಅ.ಪ. ಕಂದ ನಾನಲ್ಲವೇ ನಿನ್ನ ರಾಜಾ ಹಿಂದೆ ಮುಂದೆಬಲು ನಿಂದಿಪರೈ ಭೋಜಾಇಂದು ಮುಂದು ಎಂದೆಂದಿಗೂ ನಂಬಿದ ನರನಾಪಾಲಿಸದಿಪ್ಪುದು ಕಂಡು1 ಸಹಿಸಲಾರೆ ಸಹಿಸಲಾರೆ ಈ ತಾಪವ ಸಹಿಸಲಾರೆನೋಘನತಾಪಕೆ ಒಳಮಾಡಿ ಕ್ಲೇಶಪಡಿಸೋದಕೆ 2
--------------
ತಂದೆವರದಗೋಪಾಲವಿಠಲರು
ಸಾಕು ಸಂಸಾರದ ವ್ಯಾಕುಲ ತೀರಿಸಿ ಲೋಕೇಶ ಸುಖ ಕರುಣಿಸೊ ಪ ಸಾಕು ಸಜ್ಜಾಗಿಲ್ಲ ಸಂಸಾರ ಶೋಕದಬ್ಧಿಲಿ ಬಿದ್ದು ಬಲುಬಲು ನೂಕುನುಗ್ಗಾಗಿ ಖೋಡಿಯೆನಿಪ ಲೌಕಿಕದ ಘನತಾಪದಿರುವ ಅ.ಪ ಮೂಢಮತಿಯಿಂದತಿ ರೂಢಿಸಂಪದ ನೆಚ್ಚಿ ನೋಡಿನೋಡಸೂಯೆ ಪಡುತ ಆಡಬಾರದ ನಾಡಮಾತುಗ ಳಾಡಿ ಮುಖವನು ಬಾಡಿ ಪರರನು ಹೇಡಿತನದಿಂ ಮಾಡಿಸ್ತೋತ್ರವ ಬೇಡಿಬದುಕುವ ಖೋಡಿದುರ್ಭವ 1 ಏನು ಎನ್ನುವರೆಂದು ಗೋಣುಮೇಲೆತ್ತದೆ ಪ್ರಾಣ ಕರದಲ್ಲಿ ಪಿಡಿದು ಹೀನ ಸ್ಥಿತಿಯಿಂ ನೀನೆ ಗತಿ ಎನ್ನ ಮಾನವುಳಿಸೆಂದು ನಾನಾ ಪರಿಯಲಿ ದೀನಸ್ವರದಿಂ ತ್ರಾಣಗುಂದಿ ದೈನ್ಯಬಡುವಂಥ ಹೀನಬವಣೆ 2 ಕಾನನಸಂಸಾರದ್ಹಾನಿಮಾಡದೆ ಎನ್ನ ಜ್ಞಾನಬೆಳಗಿನನೊಳಾಡಿಸೊ ಜ್ಞಾನಮೂರುತಿ ದೀನದಯಾಳು ಭಾನುಕೋಟಿಪ್ರಭೆ ಜಾನಕೀಶ ನಾನಾಲೋಕವ ನೀನೆ ಒಳಗೊಂಡು ಮಾಣದಿಹಿ ಮಮಪ್ರಾಣ ಶ್ರೀರಾಮ 3
--------------
ರಾಮದಾಸರು
ಏನಯ್ಯ ನಿನ್ನ ಸಂಗದಪರಿ - |ಮಾನಿನಿಯ ಮರುಳು ಮಾಡಿ ನೋಡಿದವಗೆ ಪಶಿರವ ತೂಗುವಳು, ಚಿತ್ರದ ಪ್ರತಿಮೆಯಂತಿಹಳು |ಕರವ ಗಲ್ಲದೊಳಿಟ್ಟು ಕಡುಸುಯ್ವಳು ||ಇರು ಇರುತಲೊಮ್ಮೊಮ್ಮೆ ಎದುರೆದ್ದು ನೋಡುವಳು |ಬರವ ಕಾಣದೆ ಕಂದಿ ಕುಂದಿ ಬಡವಾದಳೈ 1ಕಂಬನಿಯ ತುಂಬುವಳು ಕರೆವಳು ಪೆಸಗೊರ್ಂಡು |ಹಂಬಲಿಸುವಳು ಕಂಡ ಕಾಂತೆಯರೊಳು ||ಬೆಂಬಿಡದೆ ಜಡೆ ಮುಡಿಯೆ ತೊಡಿಗೆ ಬೀಸಾಡುವಳು |ಬಿಂಬವರಿತು ಪೊಗುಳುವಳು ನಿನ್ನ ಗುಣಗಣವ 2ಇನಿತರೊಳೇನಹುದೊ, ನಿನ್ನ ಮೇಲಣ ಸ್ನೇಹ |ಘನತಾಪದಿಂದ ಗೋಚರವಾಗಿದೆ ||`ಅನುತಾಪದಿಂದ ಸಲೆ ಬಳಲಿದ ಮಾನಿನಿಯ |ವನಜಾಕ್ಷಪುರಂದರ ವಿಠಲ ಬಂದು ಸಂತಯಿಸೊ3
--------------
ಪುರಂದರದಾಸರು