ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತುಮಾತಿಗೆ ಮರೆಯಬೇಡ ಸೀತಾರಾಮನ ಪ ಮಾತರಿಶ್ವನಾಥನು ಪ್ರೀತನಾಗುವ ಅ.ಪ. ಹನುಮ ತಾನು ಭಕ್ತಿಯಿಂದ ನೆನೆದು ಸುಖಿಸುತ ವನಜ ಸಂಭವ ಪದವಿ ಪೊಂದಿದ ಘನತರನ ಮಾತ 1 ಅಬಲೆಯನ್ನು ಕುಲಕೆ ತಂದ ಪ್ರಬಲನ ಮಾತ ಶಬರಿಯೆಂಬ ಭಕ್ತಳಿಗೆ ಅಭಯವಿತ್ತನ ಮಾತ 2 ಅಂಗಜವೈರಿ ಶ್ರೀ ಶಿವನು ಹಿಂಗದೆ ಭಜಿಪ ರಂಗೇಶವಿಠಲನೆಂಬುವ ಮಂಗಳನ ಮಾತ 3
--------------
ರಂಗೇಶವಿಠಲದಾಸರು
ಸ್ಮರಿಸು ಸಂತತ ಹರಿಯನು ಮನವೇ ಪ ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ ಸರಸಿಯೊಳಗಂದು ಕರಿಯ ನರನ ಸಂಗರದೊಳಗೆ ಕಾಯ್ದು ದೊರೆಯ ಜಗದೀಶ ಅ.ಪ. ಪರ ಸೌಖ್ಯ ದಾನಿಗಳರಸನೆಂದು ಸಾನುರಾಗದಿ ನಂಬಿದ ಜನಕೆ ಸುರ ಮೋದ ಸಲಿಸುವ ಶ್ರೀಮ ಪತಿ ಸಾಮ ಗಾನ ಲೋಲನ ಪ್ರಸಾದಾ ಪಾದಾ 1 ಎಲ್ಲೆಲ್ಲಿ ನೋಡೆ ಮತ್ತಲ್ಲಲ್ಲಿ ನೆಲೆಸಿಹನು ಬಲ್ಲಿದನು ಭಾಗ್ಯವಂತ ನಂಬಿದವರಿ ಗಲ್ಲದೆ ಒಲಿಯ ಭ್ರಾಂತಾ ದುಷ್ಟ ಜನ ರೊಲ್ಲ ನಿಶ್ಚಯ ಮಹಂತಾರೊಡೆಯ ಕೈ ವಲ್ಯದಾಯಕನ ಇಂಥಾ ಪಂಥಾ 2 ಅಣುವಿನೊಳಗಣುವಹನು ಘನಕೆ ಘನತರನಹನು ಅಣು ಮಹದ್ವಿಲಕ್ಷಣಾ ಕಲ್ಯಾಣ ಗುಣಜ್ಞಾನ ಘನಲಕ್ಷಣಾ ಸಂಪೂರ್ಣ ಮನ ಮುಟ್ಟಿ ಕರೆದಾಕ್ಷಣಾ ಬಂದೊದಗಿ ಕುಣಿವ ಲಕ್ಷ್ಮೀ ವಕ್ಷನಾ ಅನಪೇಕ್ಷನಾ 3 ಚೆಲುವರೊಳಗತಿ ಚೆಲುವ ಸುಲಭರೊಳಗತಿ ಸುಲಭ ಒಲಿವ ಸರಿ ಬಂದ ತೆರದಿ ಗುಣಕರ್ಮ ಕುಲಶೀಲಗಳನೆಣಿಸನರಿದೀ - ಭಕುತಿ ಫಲವ ಕೊಡೆ ತಾ ತವಕದಿ ಶಬರಿ ಎಂ ಶರಧಿ ಭರದೀ 4 ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು ನೀಡಿ ನೀಡಿಸುವ ಪಿಡಿವಾ ಪಿಡಿಸುವನು ಬೇಡಿ ಬೇಡಿಸುವ ಬಡವರೊಡೆಯ ಕೊಂ ಡಾಡುವರ ಒಡನಾಡುವಾ ಈ ಮಹಿಮೆ ಗೀಡೆಂದು ಆವ ನುಡಿವಾ ಕೆಡುವಾ 5 ಕೋದರಾದ್ಯಮರ ವ್ರಾತಾ ಸಹಿತ ಮಹ ದಾದಿ ಪೃಥ್ವಂತ ಭೂತಾದೊಳು ನಿಲಿಸಿ ಕಾದುಕೊಂಡಿಹ ವಿಧಾತಾ ಅಂಡತ್ರಿದ ಶಾಧಿಪನ ಸೂತ ಸಚ್ಚರಿತಾ 6 ನಿಗಮ ಸಂಚಾರ ಶ್ರೀ ಜಗನ್ನಾಥವಿಠಲರೇಯಾ ತನ್ನ ಪಾ ದಗಳ ಧ್ಯಾನಿಪರ ನೋಯಾಗೊಡದಂತೆ ಮಾಯಾ ರಮಣ ನಮ್ಮ ನಗಲಿ ಸೈರಿಸನು ಪ್ರಿಯಾ ಧ್ಯೇಯಾ 7
--------------
ಜಗನ್ನಾಥದಾಸರು