ನೆನೆಮನವೇ ನಾರಾಯಣ ನಾಮವ
ಅನುದಿನ ಧ್ಯಾನಿಸು ಗುರಮುಖದಂತೆ ಪ
ಅನುಸಂಧಿಸುತಲಿ ಅವನಡಿ ಪಿಡಿಯುತ
ಕನಿಕರದಿಂ ಕಾಯುವ ಕೈ ಹಿಡಿದು ಅ.ಪ
ಅಡಿಗಡಿಗೊಂದೊಂದು ಯೋಚನೆ ಗೈವೆವೇ
ಎಡಹಿ ಮುಗ್ಗುರಿಸುವೆ ಸುಡುಗಾಡೊಳಗೆ
ಕಡಿದೋಡಿಸುತಲಿ ಪಾಪದ ಪಡೆಯಂ
ಕಡೆಹಾಯಿಸುವನು ಕಷ್ಟದ ಕಡಲಿಂ 1
ತಮವೇ ತಾನು ಎಂಬ ಮೋಹದಿ
ಕನವರಿಸುತ ಬಹು ಸಾಹಸ ತೋರ್ವೈ
ಮನದೊಡೆ ಜೀವನು ಶರೀರವನು ಬಿಡೆ
ಅನುಮತಿಸುತ್ತಲದ ಸುಟ್ಟು ಬಿಡುವರು 2
ತೃಷೆ ಜ್ವರ ರೋಗಗಳೊಳು
ತಣಿವಂ ಕಾಣದೆ ತೊಳಲುತ್ತಿರುವೈ
ಘನತರದಾಯುವು ಗತಿಸದ ಮೊದಲೆ
ರಿನಕರನೊಳಗಿಹ ಶ್ರೀಶನ ನೋಡೈ 3
ಅನುಮಾನನ್ಯ ಆಶ್ರಯ ಬಿಡುಬಿಡು
ತನುಮನ ತೊರೆಯನು ಆಪದ್ಭಂದು
ಕೊನೆಗಳಿಗೆಯೊಳು ಕಡೆ ನುಡಿನುಡಿದು
ಸನುಮತದಿಂ ಸಿರಿಯರಸನ ಪದವುಗು 4
ಸುಣ್ಣವ ತಿಂದ ತಿಮ್ಮಣನ ತೆರದಿ
ನಿನ್ನ ಸ್ಥಿತಿಯ ಅನ್ಯಾಯವು ಸಹಜ
ಕರ್ಮ ಬೆನ್ನನು ಬಿಡದಿದೆ
ಇನ್ನು ಹೆಜ್ಜಾಜಿ ಶ್ರೀಶನ ಮರೆಹೊಗು 5