ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದನೆ ಪಾಲಿಸೆನಗೆ ದೇವ ಸುದಯದೇನುಕೊಟ್ಟರು ಒಲ್ಲೆ ಪ ಸದಾ ಎಡೆಬಿಡದೆ ನಿಮ್ಮ ಸದಮಲ ನಾಮೆನ್ನೊದನಕೆ ಅ.ಪ ಹಲವು ಚಿಂತನೆಯೊಳಗಿರಲಿ ನಲಿಯುತಿರಲು ಮಲಗಿರಲಿ ಚಲಿಸದೆ ತವ ಚೆಲುವಮೂರ್ತೆ ನ್ನೊಳನೇತ್ರದ್ಹೊಳೆಯುತಿರಲಿ 1 ಘನತರದ ದುಃಖದೊಳಗೆ ಅನುಪಮ ಆನಂದದೊಳಗೆ ಕನಸುಮನಸಿನೊಳಗೆ ನಿಮ್ಮ ನೆನವು ಕ್ಷಣ ಮರೆಯದಂತೆ 2 ಕ್ಷೇತ್ರದಿರಲಿ ಯಾತ್ರದಿರಲಿ ಧಾತ್ರಿ ತಿರುಗುತ್ತಿರಲಿ ಜಗ ತ್ಸೂತ್ರ ಶ್ರೀರಾಮ ನಿಮ್ಮ ಪಾದ ಮಾತ್ರೆನ್ನ ಮಂಡೆಮೇಲೆ ಇರಲಿ 3
--------------
ರಾಮದಾಸರು
ಏನಿದೇನಿದನ್ಯಾಯ ಕೇಳಲಾಗದಯ್ಯ ಧ್ಯಾನದಿಂದಾನೆಂಬ ಹೀನ ಜನರ್ವಚನ ಪ ಪರಮಪುರುಷರ ಚರಿತ ಪರಮ ಭಕ್ತಿಯಲಿಂದ ಬರೆದೋದಿಕೇಳಿದರೆ ಪರಮಪದವೆನುತ ವರವೇದ ಸ್ಮøತಿವಾಕ್ಯ ಅರಿದರಿದು ಸಚ್ಚರಿತ ಬರೀಬಾರದೆನ್ನುವ ನರಗುರಿಗಳ ವಚನ 1 ಕನಸುಮನಸಿನೊಳೊಮ್ಮೆ ಜನಕಜೆಯವರನಂಘ್ರಿ ನೆನೆವರ್ಗೆ ಭವಬಂಧವಿನಿತಿಲ್ಲವೆನುತ ಮನುಮುನಿಗಳ್ಬರೆದಿಟ್ಟ ಘನತರದ ವಚನಗಳನು ಮನನ ಮಾಡಳಿವ ಬಿನಗುಜನರ್ವಚನ 2 ಬೀಳುತೇಳುತಲೊಮ್ಮೆ ನೀಲಶ್ಯಾಮನ ದಿವ್ಯ ಮೇಲು ಮಹಿಮೆಯ ಮನದಾಲಿಸಲು ಜವನ ದಾಳಿ ಸೋಂಕದು ಎಂದು ಶೀಲದೊರೆದ್ವಚನಗಳ ಕೇಳಿ ತಿಳಿಯದ ಮಹ ಕೀಳುಜನರ್ವಚನ 3 ಹರಿನಾಮ ಕೀರ್ತನೆಯಿಂ ಜರಾಮರಣ ಕಂಟಕª À ಕಿರಿದು ಮಾಡಿ ದಾಟಿದರು ಗುರುಹಿರಿಯರೆಲ್ಲ ನಿರುತ ನಿಜ ತಿಳಿಯದೆ ಹರಿಸ್ಮರಣೆ ಸ್ಮರಿಸದೆ ಬರಿದೆ ಬ್ರಹ್ಮೆಂಬ ಮಹನರಕಿಗಳ ವಚನ 4 ಪರಮ ಶ್ರೀಗುರುರೂಪ ವರದ ಶ್ರೀರಾಮನಂ ನೆರೆನಂಬಿ ಒಲಿಸದೆ ಗುರುವಾಗಿ ಜಗದಿ ಅರಿವಿತ್ತು ಆತ್ಮನ ಕರುಹು ತೋರಿಸಿ ಪರಮ ಪರತರದ ಮೋಕ್ಷಮಂ ಕರುಣಿಸುಯೆಂತು 5
--------------
ರಾಮದಾಸರು
ಚರಣಕೆರಗುವೆ ಕೃಷ್ಣಾ ಪರಿಹರಿಸು ಜನ್ಮವನುಶರಣಜನಬಂಧು ನೀನು ಕೃಷ್ಣಾ ಪಕರುಣನಿಧಿಯಡಿಗೊಮ್ಮೆ ಶಿರವೆರಗಿದವರು ಭವಶರಧಿಯೊಳು ಬೀಳರೆಂದೂ ಕೃಷ್ಣಾ ಅ.ಪಹಲವು ದೇಹಂಗಳಲಿ ಮಾಡಿದಘ ವೃಂದಗಳುಬಲವಂದಡವಕೆ ಲಯವು ಕೃಷ್ಣಾಜಲಜಸಂಭವ ತೊಡಗಿ ಶಲಭಾಂಕದೊಳಗೊಂದನುಳಿಯದೇ ಪ್ರಾಣಿಗಳಲಿ ಕೃಷ್ಣಾತೊಳಲಿ ಬಂದೆನು ನೀನು ನಿರ್ಮಿಸಿದ ಪರಿಯಲ್ಲಿತೊಲಗಿಸಿನ್ನೀ ಭವವನು ಕೃಷ್ಣಾನಳಿನಾಕ್ಷ ನಿನ್ನ ಪ್ರಾದಕ್ಷಿಣವು ಬಳಿಕಾಯ್ತುನಿಲಿಸೆನ್ನ ನಿನ್ನಡಿಯೊಳು ಕೃಷ್ಣಾ 1ಜನನ ಜನನಗಳಲ್ಲಿ ಕಿವಿಮುಚ್ಚಿ ತಲೆವಾಗಿನಿನಗೆರಗಿದವನಾದೆನು ಕೃಷ್ಣಾಗಣನೆುಲ್ಲದ ಜನ್ಮಗಳಲಿನಿತು ನಮಿಸಿದರೆಗಣನೆಗೊಳದಿಪ್ಪುದೇನು ಕೃಷ್ಣಾಅಣು ಮಾತ್ರದವನಾಗಿ ಘನತರದವಿದ್ಯೆಯಲಿಮನಮುಳುಗಿ ಬಹು ನೊಂದೆನೋ ಕೃಷ್ಣಾಯೆಣಿಸದಪರಾಧ ಕೋಟಿಗಳ ಭವ ಭೀತನನುಅನುಪಮನೆ ಕೊಡು ಗತಿಯನು ಕೃಷ್ಣಾ 2ಮರೆಯೊಕ್ಕವರ ಕಾಯ್ವ ಬಿರಿದು ನಿನ್ನದು ದೇವಮರೆಯೊಕ್ಕೆನೆಂದೆನೀಗ ಕೃಷ್ಣಾಮರಳಿ ನುಡಿವರೆ ಗುಣಗಳಡಿಮೆಟ್ಟುತಿವೆ ಬೇಗಸ್ಮರಣೆದೊರಕೊಳ್ಳದಾಗ ಕೃಷ್ಣಾಸೆರೆಯವನ ಬಂಧುಗಳು ಬಿಡಿಸುವರು ಕಂಡಾಗಸೆರೆಯವನಿಗುಂಟೆ ಯೋಗ ಕೃಷ್ಣಾತಿರುಪತಿವಿಹಾರಿ ದುರಿತಾರಿ ವೆಂಕಟರಮಣಕರವಿಡಿಯೆ ಸದ್ಗತಿ ಸರಾಗ ಕೃಷ್ಣಾ 3ಓಂ ವಿದುರಾಕ್ರೂರಾಯ ನಮಃ
--------------
ತಿಮ್ಮಪ್ಪದಾಸರು
ಜಯ ಮಂಗಳಂ ಮಹಾ ಶುಭಮಂಗಳಂ ಶ್ರೀಯಕರಾನಂದ ಘನಚಿನ್ಮೂರ್ತಿಗೆ ಪ ಅನಿಮಿಷಾಕ್ಷಗ ಧರಮಹೀಗ ಸಂಭೋದ್ಬವಗ ಮುನಿಪಟು ಕ್ಷತ್ರಿ ಕುಲಸಂಹಾರಗ ಇನಕುಲೋದ್ಭವ ವಾಸುದೇವಶ್ರೀ ಬೌದ್ಧಗ ಘನತರದ ತುರಗ ಹರರಾವುತಂಗೆ 1 ಮರಮತ್ಸ್ಯ ಶ್ರೀಕಮಠ ಹಿರಣ್ಯಕ್ಷಮರ್ಧನಗೆ ಕೊರಳೊನಮೂಲಿ ವಾಮನದೇವಗೆ ಧರಿ ಭೂಸುರಗಿತ್ತು ಧಾಶರಥಿ ಶ್ರೀ ಹರಿಗೆ ಸಿರಿದಿಂಗಬರ ಕಲ್ಕಿ ಯವತಾರಗೆ 2 ಕೂರ್ಮ ವರಾಹನರಸಿಂಹಗೆ ಅಗವೈರಿಯನುಜ ಪರಶುರಾಮಗ ರುಘುನಾಥ ಕೃಷ್ಣ ಬೌದ್ದೇಶಕಲಿನಾಶಗ ಜಗದ್ಗುರು ಮಹಿಪತಿ ಸುತಪ್ರಿಯಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆನೆಮನವೇ ನಾರಾಯಣ ನಾಮವ ಅನುದಿನ ಧ್ಯಾನಿಸು ಗುರಮುಖದಂತೆ ಪ ಅನುಸಂಧಿಸುತಲಿ ಅವನಡಿ ಪಿಡಿಯುತ ಕನಿಕರದಿಂ ಕಾಯುವ ಕೈ ಹಿಡಿದು ಅ.ಪ ಅಡಿಗಡಿಗೊಂದೊಂದು ಯೋಚನೆ ಗೈವೆವೇ ಎಡಹಿ ಮುಗ್ಗುರಿಸುವೆ ಸುಡುಗಾಡೊಳಗೆ ಕಡಿದೋಡಿಸುತಲಿ ಪಾಪದ ಪಡೆಯಂ ಕಡೆಹಾಯಿಸುವನು ಕಷ್ಟದ ಕಡಲಿಂ 1 ತಮವೇ ತಾನು ಎಂಬ ಮೋಹದಿ ಕನವರಿಸುತ ಬಹು ಸಾಹಸ ತೋರ್ವೈ ಮನದೊಡೆ ಜೀವನು ಶರೀರವನು ಬಿಡೆ ಅನುಮತಿಸುತ್ತಲದ ಸುಟ್ಟು ಬಿಡುವರು 2 ತೃಷೆ ಜ್ವರ ರೋಗಗಳೊಳು ತಣಿವಂ ಕಾಣದೆ ತೊಳಲುತ್ತಿರುವೈ ಘನತರದಾಯುವು ಗತಿಸದ ಮೊದಲೆ ರಿನಕರನೊಳಗಿಹ ಶ್ರೀಶನ ನೋಡೈ 3 ಅನುಮಾನನ್ಯ ಆಶ್ರಯ ಬಿಡುಬಿಡು ತನುಮನ ತೊರೆಯನು ಆಪದ್ಭಂದು ಕೊನೆಗಳಿಗೆಯೊಳು ಕಡೆ ನುಡಿನುಡಿದು ಸನುಮತದಿಂ ಸಿರಿಯರಸನ ಪದವುಗು 4 ಸುಣ್ಣವ ತಿಂದ ತಿಮ್ಮಣನ ತೆರದಿ ನಿನ್ನ ಸ್ಥಿತಿಯ ಅನ್ಯಾಯವು ಸಹಜ ಕರ್ಮ ಬೆನ್ನನು ಬಿಡದಿದೆ ಇನ್ನು ಹೆಜ್ಜಾಜಿ ಶ್ರೀಶನ ಮರೆಹೊಗು 5
--------------
ಶಾಮಶರ್ಮರು
ಪಾರ್ವತಿದೇವಿ ಗಿರಿಜೆ ನೀ ಒಲಿಯುವರೇ ಪರಶಿವನು ತಕ್ಕ ವರನೆಂದು ಮೆರೆಯುವರೆ ಪ ಪರಮ ವೈಷ್ಣವ ಭಕ್ತಾಗ್ರಣಿಯಾದ ಶಿವನಿಗೆ ಇರುತಿಹ ಕೊರತೆಗಳರಿಯದೆ ಗರುವದಲಿ ಅ.ಪ ಮನ್ಮಥನ ವೈರಿಗೆ ವಾಸಕೆ ಯೋಗ್ಯ ಮನೆಯಿಲ್ಲದಿರುವಾತಗೆ ಮನೆಯು ಮಶಾಣವೆನ್ನುತ ಪೇಳುತಿಹರಿನ್ನು ಸುಮನಸರೊಡಯನೆ ಸಖನಂತೆ ಇದು ಕೇಳು ಮನಸಿನ ಅಭಿಮಾನಿ ಶಿವನು ಘನತರದ ವಿಷಪಾನಗೈದನು ಮನದಿ ಶ್ರೀ ರಘುವರನ ಸ್ಮರಿಸುತ ವೃಷಭ ವಾಹನವೇರಿ ಚರಿಪಗೆ 1 ರುಂಡಮಾಲೆಯ ಧರಿಸಿದ ಕೊರಳೊಳಗೆ ಸರ್ಪ ದಂಡೆ ಅಲಂಕರಿಸಿರುವ ಮಂಡೆಯೊಳಗೆ ಚಲುವ ಗಂಗೆಯ ಧರಿಸಿಹ ಚಂದ್ರಶೇಖರ ಶಿವನೆಂದು ಕರೆಸಿಕೊಂಬ ಕೆಂಡಗಣ್ಣಿನ ಕ್ರೂರರೂಪನ ಕಂಡು ಹರುಷದಿ ಹಿಗ್ಗಿ ನಲಿಯುವಿ ಮಂಡೆಯಲಿ ಕೆಂಜಡೆಯ ಸುತ್ತಿಹ ಹಿಂಡು ವಿಷ ಸರ್ಪಗಳಲಂಕೃತನಿಗೆ 2 ಕರಿಚರ್ಮಾಂಬರನುಡುವ ಕೈಯಲ್ಲಿ ಕಪಾಲ ತಿರಿದುಂಡು ಹರುಷಿಸುವ ಪರಿ ದೈತ್ಯ ಪಿಶಾಚಯಕ್ಷರ ಕೂಡಿ ಚರಿಸುತ್ತ ಕುಣಿಯುತ್ತ ಗೊರವನಂತಿರುತಿಹ ಪರಮ ವೈರಾಗ್ಯವನು ಧರಿಸಿ ಫಣೆಯ ಗಣ್ಣನು ಬಳಿದು ಭಸುಮವ ಚರಿಸುವನು ರುಷಿವರರ ತೆರದಲಿ ಎಣಿಸಿ ಮಣಿಗಳ ಒಲಿಸಿ ಹರಿಯನು 3 ರಾಮಮಂತ್ರವ ಜಪಿಸಿ ರಮಣಿಗೆ ದಿವ್ಯ ರಾಮಚರಿತೆಯ ಬೋಧಿಸಿ ಕಾಮಹರನು ಕೈಲಾಸಪತಿಯು ಮತ್ತೆ ಕಾಮದೇವನು ಎಂಬ ನಾಮಸ್ಮರಿಸುವ ಆ ಮಹಾಗಣಪತಿಯು ಪುತ್ರನು ವೀರಭಕ್ತನು ಸುತನು ಶಿವನಿಗೆ ಪ್ರೇಮದಲಿ ಷಣ್ಮುಖನು ಸುತನೆಂ- ದೀ ಮಹಾಮಹಿಮೆಗಳು ತಿಳಿಯದೆ4 ಸುಂದರಾಂಗಿ ನಿನ್ನಯ ಚಲುವಿಕೆಗೆ ತಕ್ಕ ಚಂದದ ವರನೇ ಕೇಳು ಮಂದರೋದ್ಧರ ಶ್ರೀ ಮುಕುಂದನ ಭಜಿಸಲು ಚಂದದ ವರಗಳ ಕುಂದದೆ ಕರುಣಿಪ ಕಂದುಗೊರಳನು ಶಿವನು ಕಮಲ ನಾಭ ವಿಠ್ಠಲನ ಭಜಿಪ ಸಂತತ ಮಂದಗಮನೆಯ ಇಂದುಧರನಿಗೆ ಚಂದದಲಿ ವನಮಾಲೆ ಹಾಕುತ 5
--------------
ನಿಡಗುರುಕಿ ಜೀವೂಬಾಯಿ
ಪುರಂದರದಾಸರು ಜಿಪುಣರೈ ನೀವೆಂದು ಹೇಳಿದುದು ಸುಳ್ಳಲ್ಲ ಪ ಪುರಂದರ ದಾಸಮಲ್ಲ ಅ.ಪ. ಘನತರದ ವೈರಾಗ್ಯ ತಳೆದು ದ್ವಿಜರಿಗೆಲ್ಲಧನಕನಕ ಸಂಪತ್ತು ದಾನ ಮಾಡಿದರೆಲ್ಲವನಜನಾಭನ ಸ್ತುತಿಗೆ ಶಬ್ದ ಸಂಪತ್ತೆಲ್ಲಒಸೆದು ನೀವೇ ಬಳಸಿ ನನಗೇನು ಕೊಡಲಿಲ್ಲ 1 ಖಂಜೂತನದ ಕಥೆಯನು ಹೇಳಲಾಸಲ್ಲಕಂಜನಾಭನ ಮಹಿಮೆ ಬಣ್ಣಿಸುವ ನೆವದಲ್ಲಿರಂಜನೆಯ ಶಬ್ದಗಳ ಸವಿದುಂಡೆಯಲ್ಲಿಎಂಜಲವನುಳಿದೆನಗೆ ಕಿಂಚಿತ್ತು ಬಿಡಲಿಲ್ಲ 2 ಕೃಪೆಮಾಡಿ ಕ್ಷಮಿಸುವುದು ವಿಪುಲ ಭಕ್ತಿಗಳಿಂದಜಪತಪದಿ ಕನ್ನಡದ ನಿಮ್ಮ ಭಾರತಮಲ್ಲ ಕೃಪಣವತ್ಸಲ ಗದುಗು ವೀರನಾರಾಯಣನ ಸಫಿಲ ಜ್ಞಾನವ ಗಳಿಸಿ ನಮಗೇನು ಕೊಡಲಿಲ್ಲ 3
--------------
ವೀರನಾರಾಯಣ
ವನಜನಾಭನ ಅಡಿಯು ಮನುಜಾನೀಪತಿಯು ಪ ಅನುದಿನದೊಳೈತಂದು ಘನಸಿಂಧುಶಯನನು ಮಿಂದು ದ್ವಾದಶಿಯೊಳಿಂದು ಸನುಮತದಿಯರ್ಪಿಸಿದ ಎಡೆಯನು ಘನತರದ ಸಂಭ್ರಮದಿ ಭುಂಜಿಸಿ ಜನಿಸಿ ಭಕುತಿಯನೆನ್ನ ಮನದಿ ಪ್ರ- ಸನ್ನನಾದನು ಎನಿತು ಪೇಳಲಿ 1 ರಕ್ಕಸರಿಗತಿ ವೈರಿ ಮಿಕ್ಕಾನತರ ಸಹಕಾರಿ ಶ್ರೀಹರಿ ಮುರಾರಿ ತಕ್ಕ ವಿಜಯಗೆ ಸಾರಥ್ಯಾಗಿ ಇಕ್ಕರಿಸಿ ಕುರುಪತೀಯನನ್ವಯ ಅಕ್ಕರದಿ ದ್ರುಪದಸುತೆಯ ಸಲಹಿ ರುಕ್ಮಿಣೀಶನು ರಕ್ಷಿಪನು ಸಲೆ 2 ಕರಿವರದ ಶಿರಿಲೋಲಾ ಪರಮಾತ್ಮ ಶ್ರೀಘನಲೀಲಾ ಜರರಹಿತ ವಿಮಲಾ ನಿರುತದೀಪರಿ ಸ್ಮರಿಪ ನರನಿಗೆ ಕರುಣಸಾಗರನಾಗಿ ಸುರವರ ತ್ವರಿತದೀವನು ಹರಸಿ ವರಗಳ ಹರಗೊಲಿದ ನರಸಿಂಹವಿಠಲಾ 3
--------------
ನರಸಿಂಹವಿಠಲರು
ವನಜಾಕ್ಷ ನೀನೀಗ ಘನ ಕನಿಕರದಿ ಕಾಯಭವ ಘನತರದ ಗುಣ ಎನ್ನೊಳಿನಿತಿಲ್ಲ ದೇವ ಪ ಮನ ತುಸು ಗಟ್ಟಿಲ್ಲ ತನುಮೋಹ ಸುಟ್ಟಿಲ್ಲ ಧನದಾಸೆ ಬಿಟ್ಟಿಲ್ಲ ಬಿನುಗುಗುಣಟ್ಟಿಲ್ಲ 1 ಪರಮಮದ ಮುರಿದಿಲ್ಲ ಪರನಿಂದೆ ತೊರೆದಿಲ್ಲ ಶರಣರಿಗೆ ಎರಗಿಲ್ಲ ಹರಿಪಾದವದರಿವಿಲ್ಲ 2 ಏನು ಅಪರಾಧವಿರೆ ನೀನೆ ಕ್ಷಮಿಸೆನಗೆ ಜ್ಞಾನದಿಂ ಸಲಹಯ್ಯ ಪ್ರಾಣೇಶ ಶ್ರೀರಾಮ 3
--------------
ರಾಮದಾಸರು