ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಪ್ಪು ಪೇಳ್ವೆ ನಿನ್ನೊಳೆನ್ನಪ್ಪಿ ಸಲಹಯ್ಯ ಅಪ್ಪ ಸಿರಿಪತಿಯೆನ್ನ ನೆಪ್ಪಿನೊಳಗಿರ್ದು ಪ ಅರಿವಿಟ್ಟು ತವಚರಣ ಸ್ಮರಿಸದಿರೆ ಎನ್ನ ತಪ್ಪು ಮರೆವೆಯನು ಪರಹರಿಸದಿರೆ ನಿನ್ನ ತಪ್ಪು ಧರೆಯ ಭೋಗವ ಮೀರಿ ನಡೆಯಿದಿರೆ ಎನ್ನ ತಪ್ಪು ಪರಮವೈರಾಗ್ಯ ಭಕ್ತಿ ಕೊಡದಿರೆ ನಿನ್ನ ತಪ್ಪು 1 ಅರ್ತಿಯಿಂ ತವಭಜನೆ ಮಾಡಿದಿರೆ ಎನ್ನ ತಪ್ಪು ಚಿತ್ತ ಚಂಚಲಗೊಳಿಸಿದರೆ ನಿನ್ನ ತಪ್ಪು ಸತ್ಯಭ್ರಷ್ಟನಾಗಾಚರಿಸಿದರೆ ಎನ್ನ ತಪ್ಪು ಸತ್ಯಜನಸಂಗ ಕೊಡದಿರೆ ನಿನ್ನ ತಪ್ಪು 2 ನಾಶವೊಂದೋ ಮಹಹೇಸಿಸಂಸಾರದ ವಾಸನೆಯ ಬಿಡದಿರೆ ಎನ್ನ ಘನತಪ್ಪು ಶ್ರೀಶ ಶ್ರೀರಾಮ ತವ ದಾಸತ್ವ ಕೊಡದಿರೆ ಸಾಸಿರಪಾಲಿಗೆ ನಿನ್ನ ಮಹತಪ್ಪು 3
--------------
ರಾಮದಾಸರು
ತಿಳಿಸು ದಾಸನ ನಿರುತ ನಿಲಯ ಕರುಣಾರ್ಣವ ತಿಳಿಯದಾಡಿದ ವಚನ ಹೊಲೆಗಲಿಸದಿಳೆಯೊಳು ಪ ಗುಪಿತದಿಂ ತವಪಾದ ಜಪಿಸಿ ಆನಂದಿಸದೆ ಅಪರಾಧಿಯಾಗಿರುವೆ ಕೃಪೆಯಿಂದ ಕ್ಷಮಾಮಾಡಿ 1 ಬಿನುಗುಮತಿಗೈದಂಥ ಘನತಪ್ಪುಗಣಿಸದೆ ಚಿನುವiಯಾತ್ಮನೆ ಬೇಗ ಕನಿಕರದಿ ಮೊರೆ ಕೇಳಿ 2 ಸುಲಭಭಜಕರಿಗತಿ ಚೆಲುವ ಶ್ರೀರಾಮಯ್ಯ 3
--------------
ರಾಮದಾಸರು
ಸಾಗಿಬಾರಯ್ಯ ನಾಗಶಯನ ಪ ಭೋಗದಾಸೆ ನೀಗಿಸೆನ್ನು ಬೇಗ ರಕ್ಷಿಸು ಬಾಗಿ ಬೇಡ್ವೆ ಅ.ಪ ದುಷ್ಟಭವದರಿಷ್ಟದಲಿ ಇ ನ್ನೆಷ್ಟುದಿನ ನಾ ಕಷ್ಟಬಡಲಿ ದೃಷ್ಟಭ್ರಷ್ಟತೆ ನಷ್ಟಗೊಳಿಸಿ ಶಿಷ್ಟಸಂಗದೊಳಿಟ್ಟು ಸಲಹೊ 1 ಜನನ ಮರಣವ ನೆನೆಸಿಕೊಳ್ಳದೆ ಬಿನಗುತನದಲಿ ದಿನವಗಳೆದೆ ಅಣುಗನ ಘನತಪ್ಪು ಗಣಿಸದೆ ಘನ ಘನ ನಿಮ್ಮ ನೆನಹ ಪಾಲಿಸು 2 ಸ್ವಾಮಿಯೆನ್ನಯ ನೇಮವಿಲ್ಲದ ಕಾಮಿತಂಗಳ ದೂರಮಾಡಿ ಪ್ರೇಮದೆನ್ನಗೆ ಕ್ಷೇಮಕೊಡು ಶ್ರೀ ರಾಮ ಮೂಜಗ ಸಾರ್ವಭೌಮ3
--------------
ರಾಮದಾಸರು