ಮಂಗಲಂ ಗುರುರಾಜಗೆ
ಮಂಗಲ ಪರಮಾನಂದಸ್ವರೂಪಗೆ ಪ
ಜೀವÀಪರಮರೈಕ್ಯವ ತಿಳುಹಿಸುವಾ
ದೇವನೆ ನೀನೆನ್ನುತ ಬೋಧಿಸುವಾ
ಸಾವು ಸಂಕಟಗಳ ಮೂಲವ ಕಡಿಯುವಾ
ಪಾವನಾತ್ಮ ಘನಜ್ಞಾನರೂಪಗೆ 1
ಶೋಧಿಸಿ ದೇಹತ್ರಯಗಳ ಕಳಹಿ
ಬಾಧರಹಿತ ಪರಮಾತ್ಮನ ಅರಿವನು
ಬೋಧಿಸಿ ಅನುಭವದಲಿ ನೆಲೆಸಿದಗೆ 2
ತೋರಿಕೆ ಅನಿಸಿಕೆ ಎನಿಸುವ ದ್ವೈತವ
ಧೀರತನದಿ ಸುಳ್ಳೆಂದು ತಿಳಿಸುವಾ
ನಾರಾಯಣಗುರುವರನ ಕೃಪಾಪ್ರಿಯ
ಪೂರಣಬ್ರಹ್ಮಸ್ವರೂಪ ಶಂಕರಗೆ 3