ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪನ್ನಂಗಶಯನ ನಿನ್ನ ನಾ ಬಿಡೆನಯ್ಯ ಪ ನಿನ್ನ ಬಿಡುವೆನೆಂತು ಎನ್ನ ಮನಸಿನ ಡೊಂಕನ್ನು ಚೆನ್ನಾಗಿ ತಿದ್ದಿ ಮನ್ನಿಸಿ ಸಲಹುವನಕ ಅ.ಪ ಕಾಲಿಲ್ಲದವನಾಗಿ ತಲೆಯುದರದಡಗಿಸಿ ಜಲದಿ ಮುಳುಗಲು ನಿನ್ನ ಬಲವ ಪಡೆಯದೆ ಬಿಡೆ 1 ನೆಲವನಗೆದು ಬೇರು ಮೆಲುತ ಚರಿಸಲು ಮತ್ತೆ ಹಲ್ಲುಕಿಸಿದು ಗರ್ಜಿಸಲು ಬಿಡೆನೊಲಿಸದೆ 2 ತಿರುಕನೀನಾದರು ಕರದಿ ಕೊಡಲಿಪಿಡಿದು ಶಿರ ತರಿವೆನೆನೆ ನಿನ್ನ ಚರಣಕಾಣದೆ ಬಿಡೆನು 3 ವನವಾಸಿಯಾದರು ಘನಚೋರನಾದರು ವನತೇರೊಳ್ಬತ್ತಲೆ ಕುಣಿದರು ಬಿಡೆ ನಿನ್ನ 4 ಭವಭಯನಾಶನ ದಯಾಕರ ಶ್ರೀರಾಮ ಹಯವೇರೋಡಲು ನಿನ್ನ ಸಹಾಯ ಪಡೆಯದೆ ಬಿಡೆ 5
--------------
ರಾಮದಾಸರು