ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ಸುಖವ ಜಗಪಾಲಯ ಒಡೆಯ ವೈಕುಂಠದಾಲಯ ಪ ಕೊಡು ಸುಖ ನಿಮ್ಮಯ ಅಡಿಯದಾಸರ ಸೇವೆ ಸಡಗರ ಸಂಪದ ಎಡೆಬಿಡದೆ ಅ.ಪ ಜಡಮತಿಯನು ಕೆಡಿಸಿ ಜಡದೇಹಮೋಹ ಬಿಡಿಸಿ ಜಡಭವತೊಡರನು ಕಡೆಹಾಯ್ಸಿ ಅಡಿಗಡಿಗೆ ನಿನ್ನಡಿದೃಢ ಭಕುತಿ 1 ಸಾಗರಸಂಸಾರಭೋಗದ ಬಲುಘೋರ ನೀಗಿಸಿ ನಿಜಜ್ಞಾನ ಪಾಲಿಸಿ ಬೇಗನೆ ನೀಡು ತವದರುಶನವ 2 ಮನಸಿನ ಹರಿದಾಟ ಘನಘನ ದುಶ್ಚಟ ವನು ಪರಿಹರಿಸಿ ದಯಮಾಡು ಮನಶಾಂತಿ ಸದುಗುಣವ 3 ತನುತ್ರಯದಲಿ ನಿನ್ನ ನೆನಹನು ನಿಲಿಸೆನ್ನ ಬಿನುಗು ತ್ರಿದೋಷ ದೂರಮಾಡಿ ಜನನ ಮರಣಂಗಳ ಗೆಲಿಸಭವ 4 ಭೂಮಿಯೊಳಧಿಕೆನಿಪ ಸ್ವಾಮಿ ಶ್ರೀರಾಮಭೂಪ ನೇಮದಿ ಬೇಡುವೆ ವರ ನೀಡು ಆ ಮಹಕೈವಲ್ಯ ಪದವಿಯ 5
--------------
ರಾಮದಾಸರು
ದಶವಿಧ ನಾದವು ಭಕ್ತರಿಗೆ ಕೇಳುತಿದೆದಶವಿಧ ನಾದವು ಭಕ್ತರಿಗೆ ಕೇಳುತಿದೆದುಶ್ಮಾನರು ಇಬ್ಬಗೆಯಾಗಲು ದೆಸೆ ಬಿರಿಯಲುಯೋಗಿಯ ಕಿವಿ ಎರಡರಲಿ ಪ ಛಿಣಿ ಛಿಣಿ ಎಂಬ ಚಿನ್ನಿನ ನಾದವು ಚಿತ್ಕøತಿಯಾಗಿ ಚಿಮ್ಮತಿರೆಝಣಝಣವೆಂಬ ಝಿಲ್ಲಿಯ ನಾದವು ಝೇಂಕಾರದಿ ಝೇಂಕರಿಸುತಿದೆಎಣಿಕೆಯಿಲ್ಲದೆ ನಾಗಸ್ವರದ ಧ್ವನಿ ಎಡೆದೆರೆಪಿಲ್ಲದೆ ಕೂಗುತಿದೆಧಣಧಣ ಎನಿಪ ತಾಳನಾದವು ದಟ್ಟಣೆಯಾಗಿ ತುಂಬುತಿದೆ 1 ಮೃಣು ಮೃಣು ಎನಿಪ ಮೃದಂಗ ನಾದವುಮುಂಕಾಟ್ಟಾಗಿಯೆ ನುಡಿಯುತಿದೆತನನಾ ಎಂಬ ವೀಣಾಸ್ವರವು ತಂಪಾಗೆಲ್ಲವ ಮುಚ್ಚುತಿದೆಘನಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ2 ಭೇರಿಯ ನಾದವು ಧಮಧಮ ಎನುತಲಿ ಬಹಳಾಗಿಯೆ ಭೋಂಕರಿಸುತಿದೆಘೋರದಿ ಮೇಘದ ನಾದವು ಘರ್ಜಿಸುತಿದೆ ಘುಡಿ ಘುಡಿಸುತಿದೆನೂರಾರು ಸಿಡಿಲಂತೆ ನೂಕು ನುಗ್ಗಡಿಸುತಿದೆವೀರ ಚಿದಾನಂದ ವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ3
--------------
ಚಿದಾನಂದ ಅವಧೂತರು
ಧನ್ವಂತ್ರಿ ನಾ ನಿನ್ನ ಅಣುಗನೋ - ತ್ರೈಗುಣದೂರ ಅಣುಗಣು ಘನಘನಾ ಪ ಭವ ಹಂತ್ರಿ 1 ಭವ ಹಂತ್ರೀ 2 ಸ್ನಾನ ಸಂಧ್ಯಾವಿಲ್ಲ ಧನ್ವಂತ್ರೀ | ಸೂಕ್ಷ್ಮಸ್ನಾನಾನು ಸಂಧಾನ ಧನ್ವಂತ್ರೀ |ಜ್ಞಾನಾವೆ ಪಾಲಿಸೊ ಧನ್ವಂತ್ರೀ | ಈಸುಜ್ಞಾನವೇ ಸ್ಥಿರವಿರಲಿ ಭವಹಂತ್ರೀ 3 ಸತಿಸುತರ ಪ್ರಾರ್ಥನೆಗೆ ಧನ್ವಂತ್ರೀ | ಅತಿಹಿತದಿಂದ ಸಲಹೀದೆ ಧನ್ವಂತ್ರೀ |ಗತಿಪ್ರದ ಬಿರುದಾಂಕ ಧನ್ವಂತ್ರೀ | ಮಮರತಿ ಇರಲಿ ತವ ಪದದಿ ಭವಹಂತ್ರೀ 4 ಭೇಷಜ ಧನ್ವಂತ್ರೀ | ಎನ್ನಅವಗುಣವೆಣಿಸೋರೆ ಧನ್ವಂತ್ರೀ |ಧೃವ ಬಲಿ ಕರಿವರದ ಧನ್ವಂತ್ರೀ | ಗುರುಗೋವಿಂದ ವಿಠಲನೇ ಧನ್ವಂತ್ರೀ 5
--------------
ಗುರುಗೋವಿಂದವಿಠಲರು
ನನ್ನಿಂದ ನಾನೇ ಜನಿಸಿ ಬಂದೆನೆ ದೇವಎನ್ನ ಸ್ವತಂತ್ರವು ಲೇಶವಿದ್ದರು ತೋರು ಪ ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆನಿನ್ನದು ತಪ್ಪೋ ನನ್ನದು ತಪ್ಪೋ ಪರಮಾತ್ಮಅ ಜನನಿಯ ಜಠರದಲಿ ನವಮಾಸ ಪರಿಯಂತಘನದಿ ನೀ ಪೋಷಿಸುತಿರೆ, ನಾನುಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದವನಜಾಕ್ಷ ನೂಕಿದವನು ನೀನಲ್ಲವೆ 1 ಎಲವುಗಳ ಜಂತೆ ಮಾಡಿ ನರಗಳ ಹುರಿಯಿಂಹೊಲಿದು ಚರ್ಮವ ಹೊದಿಸಿ ದೇಹದೊಳುಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿನೆಲಸಿ ಚೇತನವನಿತ್ತವ ನೀನಲ್ಲವೆ 2 ಜನಿಸಿದಾರಭ್ಯದಿಂದ ಇಂದಿನ ಪರಿಯಂತಘನಘನ ಪಾಪ ಸುಕರ್ಮಂಗಳನುಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲಅನುಭವಿಸುವುದು ಜೀವನೊ ನೀನೊ ದೇವ 3 ಅಂಧಕನ ಕೈಲಿ ಕೋಲಿತ್ತು ಕರೆದೊಯ್ಯುವಾಮುಂದಾಳು ತಪ್ಪಿ ಗುಂಡಿಗೆ ಕೆಡಹಲುಅಂಧಕನ ತಪ್ಪೊ ಅದು ಮುಂದಾಳಿನ ತಪ್ಪೊಹಿಂದಾಡಬೇಡ ಎನ್ನೊಳು ತಪ್ಪಿಲ್ಲವೊ 4 ಕಂದನ ತಾಯಿ ಆಡಿಸುವಾಗ ಅದು ಪೋಗಿಅಂದಿ ಬಾವಿಯ ನೋಡುವುದನು ಕಂಡುಬಂದು ಬೇಗನೆ ಬಾಚಿ ಎತ್ತಿಕೊಳ್ಳದಿದ್ದರದುಕಂದನ ತಪ್ಪೊ ಮಾತೆಯ ತಪ್ಪೊ ಪರಮಾತ್ಮ 5 ಭಾರ ನಿನ್ನದೊ ದೂರು ನಿನ್ನದೊ ಕೃಷ್ಣನಾರಿ ಮಕ್ಕಳು ತನುಮನ ನಿನ್ನದಯ್ಯಕ್ಷೀರದೊಳಗದ್ದು ನೀರೊಳಗದ್ದು ಗೋವಿಂದಹೇರನೊಪ್ಪಿಸಿದ ಮೇಲೆ ಸುಂಕವೆ ದೇವ 6 ನ್ಯಾಯವಾದರೆ ದುಡುಕು ನಿನ್ನದೊ, ರಂಗ, ಮತ್ತ-ನ್ಯಾಯವಾದರೆ ಪೇಳುವರಾರುಮಾಯಾರಹಿತ ಕಾಗಿನೆಲೆಯಾದಿಕೇಶವಕಾಯಯ್ಯ ತಪ್ಪನೆಣಿಸದೆ ದೇವ 7
--------------
ಕನಕದಾಸ
ಶರಣಜನರ ಪಾಲ ಹರಿ ದಯಾಸಿಂಧುವೆ ವೆಂಕಟೇಶ ಮರೆಯದೆ ಸಲಹೆನ್ನ ದೀನಜನಾಪ್ತನ ವೆಂಕಟೇಶ ಪ ಕರಿ ಧ್ರುವ ಪ್ರಹ್ಲಾದ ಪಾಂಚಾಲಿ ಪಾಲನೆ ವೆಂಕಟೇಶ ದುರುಳರಕ್ಕಸಹರ ಹರಸುರನಮಿತನೆ ವೆಂಕಟೇಶ ಪರಮಪಾವನ ಸಿರಿಯರ ಸಖಜೀವನೆ ವೆಂಕಟೇಶ ದುರುಳಮಾತ ನೀನಳಿದು ಗೋವಳರ್ಪೊರೆದನೆ ವೆಂಕಟೇಶ 1 ವಸುದೇವ ದೇವಕಿ ಬಸಿರೊಳು ಬಂದನೆ ವೆಂಕಟೇಶ ಕುಶಲದಿ ವಸುಧೆಲಮಮಹಿಮೆ ತೋರ್ದನೆ ವೆಂಕಟೇಶ ಅಸುರ ಕಂಸನ ಕುಟ್ಟಿ ಗೋಕುಲರಿದನೆ ವೆಂಕಟೇಶ ಶಶಿಮುಖಿ ಗೋಪಿಯರಾನಂದಲೀಲನೆ ವೆಂಕಟೇಶ 2 ಮಂದರಧರ ಗೋವಿಂದ ಮುಕುಂದನೆ ವೆಂಕಟೇಶ ಸಿಂಧುಶಯನ ಆನಂದನ ಕಂದನೆ ವೆಂಕಟೇಶ ಇಂದಿರೆಯರ ಬಿಟ್ಟು ಭೂಲೋಕಕ್ಕಿಳಿದನೆ ವೆಂಕಟೇಶ ಸುಂದರಗಿರಿಯ ಭೂವೈಕುಂಠವೆನಿಸಿದನೆ ವೆಂಕಟೇಶ 3 ಬಣಗರಸೊಕ್ಕನು ಕ್ಷಣಕ್ಷಣಕೆ ಮುರಿದನೆ ವೆಂಕಟೇಶ ಮನಮುಟ್ಟಿ ಬೇಡ್ವರ ಮನದಿಷ್ಟವಿತ್ತನೆ ವೆಂಕಟೇಶ ಎಣಿಕೆಗೆ ಮೀರಿದ ದ್ರವ್ಯ ಕೂಡಿಟ್ಟನೆ ವೆಂಕಟೇಶ ಘನಘನಮಹಿಮೆಯ ಭುವನದಿ ತೋರ್ದನೆ ವೆಂಕಟೇಶ 4 ನಂಬಿದೆ ನಿನ್ನ ಪಾದಾಂಬುಜಗಳನ್ನು ವೆಂಕಟೇಶ ಬೆಂಬಲವಿರ್ದು ನೀ ಸಂಭ್ರಮದಿ ಸಲಹೆನ್ನ ವೆಂಕಟೇಶ ನಂಬಿದ ದಾಸರ ಭವಾಂಬುಧಿ ಗೆಲಿಪನೆ ವೆಂಕಟೇಶ ಅಂಬುಜಮುಖಿ ಸೀತಾಪತಿ ಶ್ರೀರಾಮನೆ ವೆಂಕಟೇಶ 5
--------------
ರಾಮದಾಸರು
ಹನುಮರಾಯ ಎನ್ನ ದುರಿತದಾರಿದ್ರ್ಯವ ಪರಿಹರಿಸಿ ಸಲಹೋ ಹನುಮರಾಯ ಪ ದಿನದಿನ ಘನಘನ ತನುವಿನರೋಗವು ಹನುಮರಾಯ ಇನ್ನು ಘನವಾಯ್ತು ಕನಿಕರದಿಂದ ಕಡೆಹಾಯ್ಸಯ್ಯ ಹನುಮರಾಯ ಕ್ಷಣಸುಖವಿಲ್ಲದೆ ಅನುಪಮ ನೋಯುವೆ ಹನುಮರಾಯ ಹನುಮರಾಯ1 ಕಿರಿಕಿರಿಸಂಸಾರ ಪರಿಪರಿಬಾಧೆಯು ಹನುಮರಾಯ ಬೇಗ ಪರಿ ಬಾಧ್ಯಾಕೊ ಹನುಮರಾಯ ಇನ್ನು ಮರವೆಹರಿಸಿ ನಿಜಅರಿವು ಕರುಣಿಸಿ ಕಾಯೊ ಹನುಮರಾಯ 2 ಸ್ವಾಮಿ ಶ್ರೀರಾಮನ ಪ್ರೇಮದದೂತನೆ ಹನುವiರಾಯ ದೇವ ಪಾದ ಭಜಿಸುವೆನಯ್ಯ ಹನುಮರಾಯ ಈ ಮಹಕಷ್ಟದಿ ಕ್ಷೇಮ ಪಾಲಿಸಯ್ಯ ಹನುಮರಾಯ ನಿನ್ನ ಪ್ರೇಮದಿರಿಸಿ ಎನ್ನ ಮುಕ್ತಿಗ್ಯೋಗ್ಯನ ಮಾಡೊ ಹನುಮರಾಯ 3
--------------
ರಾಮದಾಸರು
ಸಿಕ್ಕಿದೆಯೋ ಎಲೆ ಜೀವ-ನಿನ್ನ-ಕುಕ್ಕಿ ಕೊಲ್ಲದೆ ಬಿಡರು ಪಸೊಕ್ಕಿದ ಹೆಣ್ಣಿಗೆ ನೀ ಮರುಳಾದೆ |ಉಕ್ಕಿನ ಕಂಬಕೆ ನೀ ಗುರಿಯಾದೆ ಅ.ಪಹಾಳೂರ ಕೋಳಕೆ-ಕಾಲು ಚಾಚಿದ ಹಾಗೆ |ಮೂಳ ಸಂಸಾರಕೆ ನೀ ಗುರಿಯಾಗಿ ||ತೇಲುತ ಮುಳುಗುತ ಇಲ್ಲಿಗೆ ಬಂದೆ 1ಸತಿ-ಸುತರೆಂಬುವರೆ - ಹಿತರೆಂದು ನಂಬಿದೆಯೊ |ಯತಿಗಳ ತಿಥಿಗಳು ಬಂದರೆ ಮನೆಗೆ-||ಗತಿಯಿಲ್ಲವೆಂದು ಖತಿಗೊಂಡೆಯಲ್ಲೊ 2ಶುನಕನಂದದಿ ನೀನು ಮನೆಮನೆಯನು ತಿರುಗಿ |ಘನಘನವಾದ ಕೂಳನೆ ತಿಂದು ||ತನುವ ತಗ್ಗಿಸಿ ಇಲ್ಲಿಗೆ ಬಂದೆ 3ಕಂಡವರ ಒಡವೆಯ-ಖಂಡುಗ ಧನವನು |ಮಿಂಡೆಯರ ಒಡವೆಯ ಭಂಡತನದಲಿ ||ಕಂಡುಕಾಣದೆ ನೀ ತಿಂದೆಯಲ್ಲೊ 4ಗೋಪಾಲಕೃಷ್ಣಯ್ಯ-ತಾಪತ್ರಯವ ಕಳೆವ |ಆಪತ್ತೆಲ್ಲ ಪರಿಹಾರ ಮಾಡುವ ||ಶ್ರೀಪತಿ ಪುರಂದರವಿಠಲನ ನೆನೆಯದೆ 5
--------------
ಪುರಂದರದಾಸರು