ಮನಾ ಮನಾ ಘನಾ ಘನಾ
ಎನುತಿದೆ ಲೋಕರಿಯದೆ ಖೂನ ಧ್ರುವ
ಮನದಾವದು ಎಂದರಿಯದೆ ಖೂನ
ಘನದಾವವೆಂದರಿಯದು ಧ್ಯಾನ
ಧ್ಯಾನ ಮೋನ ಯಾತಕದೇನ
ಅನುಭವರಿಯದೆ ಮರುಳಜನ 1
ಮೂಲದಲಿಡದೆ ಠಾವಿಲಿ ಮನ
ಜ್ಯಾಲವ್ಯಾತಕೆ ಬರೇ ಮಾತಿನ
ಕೀಲ ತಿಳಿಯದೆ ಸದ್ಗುರು ಜ್ಞಾನ
ನೆಲಿಯುಗೊಂಬುದೆ ನಿಜಸಾಧನ 2
ಮನದಲಿ ಮನಸಿನ ತಿಳಿವದು ಬಿಟ್ಟು
ಜನವನ ತಿರುಗುದೆ ಕೆಟ್ಟು
ಮನೋನ್ಮನದೊಳಗಿದೆ ಘನಗುಟ್ಟುದೀನ ಮಹಿಪತಿ ಗುರು ದಯಲುಂಟು3