ಜನನೀ ತ್ರಿಜಗತಿ ಜನಾರ್ದನೀ ಜನನೀ
ಜಯತು ಶ್ರೀಪದ್ಮಾವತೀ ಪ.
ಗುಣಗಣಾರ್ಣವೆ ವಿಶ್ವಪೂಜಿತ
ಜನನಮರಣವಿದೂರೆ ಪದ್ಮಾಸನೆ
ಘನಗಗನಭೂಪಾಲನಂದಿನಿ ಅ.ಪ.
ಶ್ರೀನಿವಾಸನ ರಾಣಿ ಸರ್ವಾರ್ಥ ನಿ-
ದಾನಾಂಬುಜಪಾಣಿ
ಭಾನುಕೋಟಿಸಮಾನ ತೇಜೆ ಸ-
ದಾನುರಾಗಪ್ರದಾನೆ ವಿಬುಧ-
ಶ್ರೇಣಿನುತೆ ಮಹದಾದಿಮಾಯಾ-
ಮಾನಿ ಮಾಧವಮನವಿಲಾಸಿನಿ 1
ಸುಂದರಿ ಸುಮನೋಹರಿ ಸುಜ್ಞಾನಾ-
ನಂದೆ ಸಿಂಧುಕುವರಿ
ಚಂದ್ರವದನೆ ಚರಾಚರಾತ್ಮಕಿ
ವಂದನೀಯೆ ಪರೇಶಪರಮಾ-
ನಂದರೂಪೆ ಸನತ್ಸುಜಾತ ಸ-
ನಂದನಾದಿಮುನೀಂದ್ರವಂದಿತೆ 2
ಅಂಬೆ ಶ್ರೀಹರಿಪ್ರೀತೆ
ಶಂಭುಸಂಭಾವಿತೆ ತ್ರಿಲೋಕಾ-
ರಂಭಸೂತ್ರೆ ಪವಿತ್ರೆ ವಿಶ್ವಕು-
ಟುಂಬೆ ಕಮಲಯನೇತ್ರೆ ಸಾಧ್ವೀಕ-
ದಂಬಮಸ್ತಕಮಣಿಪ್ರಭಾಶಿನಿ 3
ಪದ್ಮ ಸರೋವಾಸಿನೀ ಪಾವನಹೃ
ತ್ಪದ್ಮನಿತ್ಯಭಾಸಿನಿ
ಪದ್ಮನವಕ್ರೀಡಾವಿಲಾಸಿನಿ ಮ-
ಹನ್ಮನೋಧ್ಯಾನಾಧಿರೂಢೆ ಸು-
ಪದ್ಮಹಸ್ತೆ ನಮಸ್ತೆ ಪಾವನೆ
ಪದ್ಮನಾಭನರಮಣಿ ಕರುಣಿ 4
ವರಲಕ್ಷ್ಮೀವಾರಾಯಣಿ ಕಲ್ಯಾಣಿ ಶ್ರೀ-
ಕರೆ ಕಾಳಾಹಿವೇಣಿ
ಧರೆಯೊಳುತ್ತಮ ಕಾರ್ಕಳದಿ ಸು-
ಸ್ಥಿರನಿವಸವ ಗೈದೆ ಕರುಣಾ-
ಶರಧಿ ಭಕ್ತರ ಪ್ರಾರ್ಥನೆಯ ಸ್ವೀ-
ಕರಿಸಿ ಪೊರೆವಿಷ್ಟಾರ್ಥದಾಯಿನಿ5