ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷೆಸೆನ್ನ ಈ ಕ್ಷಣದಲುಪೇಕ್ಷೆ ಮಾಡದೆ ಪಕ್ಷಿವಾಹನ ಪರಮಪುರುಷ ಲಕ್ಷ್ಮಿನಾಯಕ ಪ ಅಂದಂದಿಂದ ಕೈಯಹಿಡಿದು ಚಂದದಿಂದ ಎನ್ನಬಿಡದೆ ಇಂದು ನಿನ್ನ ದ್ವಂದ್ವ ಚರಣಕ್ಹೊಂದಿದ ದಾಸನು ಎಂದು 1 ಕಷ್ಟಿ ಇವನು ಎಂದು ಕರುಣ ದೃಷ್ಟಿಯನೆ ತೋರುಬೇಗ ಸೃಷ್ಟಿಗೊಡೆಯ ನಾದ ಶ್ರೀ ಕೃಷ್ಣಮೂರುತಿ ನೀನೆ ಗತಿ 2 ಇಂದು ಮಾಡಿದಂಥದೆಂಥಾ ದೋಷವೊ ಹರಿಯೆ ಇಂದು ಎನ್ನ ಬಾಧಿಸುವುದು ಏನು ಕಾರಣವೊ ಕೃಷ್ಣಾ 3 ಸಜ್ಜನರ ರಕ್ಷಕ ದೇವ ಸರ್ವಜನರ ಪೋಷಕ ನೀನೆ ದುರ್ಜನರ ಖಂಡಿಸಿದ ಮೂಜ್ಜಗ ಪಾಲಕ ನೀನೇ ಎಂದೂ 4 ಪುಂಡರೀಕವರದ ಭೂಮಂಡಲಾಧಿಪತಿಯೆನಿಸಿ ಮಹಿಮವುಳ್ಳದೇವ 5 ಭಾವಜನಯ್ಯ ಭವ ಸ್ತೋತ್ರ ಪ್ರೀಯಾ ಪೊರೆಯದಲಿರುವದು ದೇವಾ 6 ಗಂಗೆ ಜನಕ ಮಂಗಳಾಂಗ ಕರುಣಾಸಾಗರ ಘನಗಂಭೀರಾ ರಂಗ `ಹೆನ್ನವಿಠಲ' ಕೃಪಾಂಗ ದೇವೋತ್ತುಂಗ ಹರಿಯೆ7
--------------
ಹೆನ್ನೆರಂಗದಾಸರು