ಪುರಾಣ
ಅಕ್ಕರವುಳ್ಳ ನಮ್ಮಕ್ಕ ರುಕ್ಮಿಣಿ ಕೇಳೆ
ರಕ್ಕಸಾಂತಕ ಕೃಷ್ಣ ಮತ್ತೆಲ್ಲೆ ಪೋದ 1
ಸತ್ಯಭಾಮೆಯೆ ನಿನ್ನ ಚಿತ್ತದ್ವಲ್ಲಭ
ನೀರೊಳು ಪೊಕ್ಕು ವೇದವ ತಂದು ಪುತ್ರಗಿಡಹೋದ 2
ಪನ್ನಂಗಶಯನ ಲಾವಣ್ಯರೂಪನು
ಎನ್ನ ಕಣ್ಣಿಗೆ ಮರೆಯಾಗಿ ಇನ್ನೆಲ್ಲೆ ಹೋದ 3
ಪತಿ ಶರಧಿಯೊಳು ಬೆನ್ನಲಿ ಗಿರಿಯೆತ್ತಿ
ತನ್ನ ಭಕ್ತರಿಗೆ ಸುಧೆಯ ನೀಡಲು ಹೋದ 4
ವನಜನಾಭನ ಕಾಣದೆ ಘನಕ್ಲೇಶದಿಂದೀಗ
ಮನದ ವಿರಹತಾಪವನು ಸೈರಿಸಲ್ಹ್ಯಾಗೆ 5
ಅವನಿ ಕದ್ದವನ ಸಂಹರಿಸಿ ಕೋರೆಗಳಿಂದ
ಭುವನಾಧಿಪತಿಯು ಬರುವನೆ ಸತ್ಯಭಾಮೆ 6
ಹಂಬಲ ಬಿಡದರವಿಂದನೇತ್ರನ ಬಿಟ್ಟು
ಸುಂದರಾಂಗನ ಕರೆತಂದು ತೋರೆನಗೆ 7
ಕಂಬದಿಂದೊಡೆದು ಕಂದನ ತಂದೀ(ದೆಯ?) ಕರುಳ್ಹಾರ
ಕಂದರದಿ ಧರಿಸಿ ತಾ ಬಂದನು ಭಾಮೆ 8
ಸೃಷ್ಟಿಕರ್ತನುಯೆನ್ನ ದಿ(ದೃ?) ಷ್ಟಿಂದೆ ನೋಡದೆ
ಎಷ್ಟು ಹೇಳಲೆ ಪ್ರಾಣ ಬಿಟ್ಟು ಹೋಗುವುದೆ 9
ಪುಟ್ಟ ಬ್ರಾಹ್ಮಣನಾಗಿ ದಿಟ್ಟತನದಲಿ ದಾನವ
ಕೊಟ್ಟ ಬಲಿ ಪಾತಾಳಕೆ ಮೆಟ್ಟಿ ಬಾಹುವನೆ 10
ತ್ವರಿತದಿಂದಲಿ ಯಾದವರರಸು ಶ್ರೀಕಾಂತನ
ಸರಸವಾಡಲೀಗ ಕರೆಸಿ ತೋರೆನಗೆ 11
ಅರಸರ ಕುಲವ ಸಂಹರಿಸಿ ಕ್ಷತ್ರೇರನೆಲ್ಲ
ನಿರುತ ನಿಷ್ಠೆಯಲಿ ತಪ ಚರಿಸಿ ಬಾಹುವನೆ 12
ಹೇಮಪುತ್ಥಳಿಗೊಂಬೆ ಸಾಮಜವರದನ
ಆ ಮಾಸುರರೊಡೆಯ ಮೇಘಶ್ಯಾಮನ ತೋರೆ13
ಮಾಡಿ ಯುದ್ಧವ ಲಂಕಾ ನೋಡಿ ದಶಶಿರವ
ಚೆಂಡಾಡಿ ಜಾನಕಿಯ ಒಡಗೂಡಿ ಬಾಹುವನೆ 14
ವಾಸುದೇವನ ಕಾಣದೊಂದರಘಳಿಗೀಗ
ನಾಲ್ಕು ಯುಗವಾಗಿ ತೋರುವುದೆನ್ನ ಮನಕೆ 15
ಶ್ರೀಶ ತಾ ಸೋಳಸಾಸಿರ ಮಂದಿ ಸತಿಯೇರ ವಿ-
ಲಾಸದಿಂದಿದ್ದನೀಗಿಂದೀವರಾಕ್ಷ 16
ಸಿರಿವೊಬ್ಬಳಲ್ಲದೆ ಪರನಾರಿಯರ ಕಣ್ಣು
ತೆರೆದು ನೋಡುವ ತಾ ಭೂರಮಣನೆಲ್ಲಿಹನೆ 17
ಖರೆಯವೀಮಾತು ತ್ರಿಪುರದ ಸತಿಯರ ಲಜ್ಜೆ
ತೊರೆದು ಕೂಡಿದನೆಂಬೋದು ಪರಮ ಮೋಹಕವೆ18
ನಾಡೊಳಗಧಿಕಶ್ವಾರೂಢ ರುಕ್ಮಿಣೀಕಾಂತನ
ನೋಡದÉನಜೀವ ನಿಲ್ಲದು ನೀರಜಾಕ್ಷಿ 19
ಬೇಡಿಕೊಂಬುವೆನೆಂ(ಯೆ?)ದು ಭೀಮೇಶಕೃಷ್ಣನ
ಕೂಡಿಸುವೆನೆ ಕರೆತಂದು ಕಮಲಾಕ್ಷಿ 20