ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿ ಶ್ರೀ ಹರಿಪೂಜಿ ಮಾಡುದು ಬಿಡಿ ಮನಕೃತ ವಾಜಿ ಧ್ರುವ ಮಂಗಳಕರಸುಖ ಕಂಗಳಗಿದಿರಿಡುತದನೇಕ ಮುಂಸಗುಡಿಯಲಿ ಮೂಡಿ ರಂಗದೋರುವ ಘನಕೌತುಕ 1 ತಾಳ ಮೃದಂಗ ಘನ ಭೇರಿ ಫಳಗುಡುತದೆ ಪರೋಪರಿ ತಿಳಿದವನಧಿಕಾರಿ ಕೇಳಲ್ಹೋಗುದು ಭವಭಯ ಹಾರಿ 2 ಹೇಳಲೆನ್ನಳವಲ್ಲ ಹೊಳೆವುತಿಹುದು ಮೂಜಗವೆಲ್ಲ ಕೇಳಿ ಸವಿಯ ಸೊಲ್ಲ ತಿಳಿದ ಮಹಿಮ ತಾನೆ ಬಲ್ಲ 3 ಅಜಪ ಸುಜಪ ಮಂತ್ರ ರಾಜಿಸುತಿಹುದು ಬಾಹ್ಯಾಂತ್ರ ತ್ರಿಜಗ ಮಾಡುವ ಪವಿತ್ರ ಸುಜನ ನೋಡುವ ಸುಚರಿತ್ರ 4 ಸ್ವಹಿತ ಸುಖದ ಸಾರ ಶ್ರೀಹರಿಪೂಜಿ ನಿರಂತರ ಮಹಿಪತಿ ಮನೋಹರ ಸಾಹ್ಯ ಸಕಲಕಿದೆ ಸಹಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು