ಆವ ಬಗೆಯಲಾದರು ಕರುಣದಿ
ದೇವ ಕೃಪೆದೋರೋ ಪ.
ಭಾವ ಭಕುತಿಯಲಿ ತೋಯಜಾಕ್ಷನೆ ನಿನ್ನ
ಕಾವ ಕರುಣಿಯೆಂದು ಭಾವಿಸಿ ಕರೆವೆನು ಅ.ಪ.
ವಿಪ್ರರಾಗಮವಾದರೂ ಸರಿ
ಕ್ಷಿಪ್ರದೊಳವನ ಸಂಗದಿ
ಅಪ್ಪಾ ನೀ ನೆರೆಯುವ ಸಪ್ಪಳಾ ತೋರುತ
ಬಪ್ಪೆ ಎಂದೆನೆವೆನು ಅಪ್ಪ ತಿಮ್ಮಪ್ಪನೇ 1
ಮಕ್ಕಳೊಳಗಾದರೊ ನಿನ್ನಯ ಆಟ
ಪಕ್ಕನೆ ತೋರೋ ದೇವನೆ
ಚಿಕ್ಕ ಕೃಷ್ಣನೆ ನಿನ್ನ ರೂಪವ ನೆನೆಯುತ
ಪರಿ 2
ಮನೆಗೆಲಸದೊಳು ನಿನ್ನಯ ಧ್ಯಾನ
ತನು ಮನ ನೆನೆಯುತಲಿ
ದಿನದಿನದಲಿ ಸುಖ ದುಃಖದೊಳು
ಮನಸಿಜಪಿತ ನಿನ್ನ ನೆನಸುವ ಪರಿಯಲಿ 3
ಹಿರಿಯರಾಗಮವಾಗಲು ನಾನವರೊಳು
ಕಿರಿಯಳಂದದಿ ಇರುವ ಪರಿ
ಮನವನಿತ್ತೂ ಪೊರೆ ಕರುಣಾಳು
ಕರಣ ಶುದ್ಧಳಾ ಮಾಡಿ ಕರೆ ನಿನ್ನ ಬಳಿಗೆ 4
ಕನಸಲಾದರೂ ನಿನ್ನ ಮನಸಿಜಪಿತನೆ
ಮನನ ಮಾಡುತ ನೆನೆಯುವ
ಘನಕೃಪೆಯಿತ್ತು ಎನ್ನ ಜನುಮ ಸಾರ್ಥಕಗೊಳೆ
ಈತನು ನಿನಗರ್ಪಿಸಿಹೆ ದಿನಮಣಿ ಶ್ರೀ ಶ್ರೀನಿವಾಸ 5