ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಿಮಿಷ ರೂಪದಿಂದಾಗಮವನು ತಂದ ರಾಮಚಂದ್ರ ಘನಕೂರ್ಮರೂಪದಿಂ ಗಿರಿಯ ಬೆನ್ನೊಳಗಾಂತ ರಾಮಚಂದ್ರ ಕನಕಾಕ್ಷನನು ಕೊಂದ ಧರಿಣಿದೇವಿಯ ರಮಣ ರಾಮಚಂದ್ರ ಹಿರಣ್ಯಕನ ಕರುಳನು ಕೊರಳೊಳು ಧರಿಸಿದ ರಾಮಚಂದ್ರ ತರಳ ಪ್ರಹ್ಲಾದನ ಕರೆದಾದರಿಸಿದ ರಾಮಚಂದ್ರ ವಟುರೂಪದಿಂ ಬಂದು ವಸುಧೆಯ ಬೇಡಿದ ರಾಮಚಂದ್ರ ದಾನಕೊಟ್ಟವಗೆ ಪಾತಾಳ ಪಟ್ಟವ ಕಟ್ಟಿದ ರಾಮಚಂದ್ರ ಕ್ಷತ್ರಿಯರ ಕುಲಬೇರ ಕತ್ತರಿಸಿದ ದೇವ ರಾಮಚಂದ್ರ ಧರಿತ್ರಿಯ ಭಾರವ ಪರಿಹರಿಸಿದ ದೇವ ರಾಮಚಂದ್ರ ವಸುದೇವನಂದನನೆಂದೆನಿಸಿ ಮೆರೆದೆಯೋ ರಾಮಚಂದ್ರ ಮತ್ತೆಕಾಮಿನಿಯರ ಚಿತ್ತವ ಕಲಕಿದ ರಾಮಚಂದ್ರ ಉತ್ತಮಾಶ್ವವನೇರಿ ಕಲ್ಕಿಯೆನಿಸಿದ ರಾಮಚಂದ್ರ ಆದಿಮಧ್ಯಾಂತ ಸ್ವರೂಪ ಸುಂದರರೂಪ ರಾಮಚಂದ್ರ ವೇದವೇದ್ಯನೆ ನಿನ್ನ ಪಾದವೇ ಗತಿಯೆನಗೆ ರಾಮಚಂದ್ರ ರಘುಕುಲತಿಲಕನೆ ರಮ್ಯಚರಿತ್ರನೆ ರಾಮಚಂದ್ರ ಅಘಹರ ಪುರವೈರಿ ಸಂಸ್ತುತಿಪಾತ್ರನೆ ರಾಮಚಂದ್ರ ಮಾನಾಭಿಮಾನ ನಿನ್ನಾಧೀನಮೆಂಬೆನೈ ರಾಮಚಂದ್ರ ಏನೊಂದನರಿಯದ ಅಜ್ಞಾನಿ ನಾನಯ್ಯ ರಾಮಚಂದ್ರ ನೀನಲ್ಲದೆ ಮತ್ತನ್ಯರಾರಿಹರೈ ರಾಮಚಂದ್ರ ದೀನಪಾಲಕ ನಿನ್ನುಳಿದಾರ ನೆರೆಯೆ ರಾಮಚಂದ್ರ ವರಶೇಷಗಿರಿದೊರೆ ಮರೆಹೊಕ್ಕು ಬೇಡುವೆ ರಾಮಚಂದ್ರ ಕರುಣಾಳು ನೀನೆಂಬ ಬಿರುದುಳಿಸೆನ್ನುವೆ ರಾಮಚಂದ್ರ
--------------
ನಂಜನಗೂಡು ತಿರುಮಲಾಂಬಾ