ಇದೇ ಜ್ಞಾನವೊ ಇದೇ ಮಾನವೊ ಧ್ರುವ
ಕೇಳಿ ಕೇಳಿ ಕೇಳಿ ಕೇಳುವ ಮಾತಿದು
ಕೇಳಿದಂತೆ ನೀವು ಬಾಳಿ
ಬಾಳಿದ ಮ್ಯಾಲಿನ್ನು ಹೇಳ್ಯಾಡುವ ಮಾತಿನ
ಮೊಳೆ ಅಂಕುರನೆ ಸೀಳಿ
ಒಳಿತಾಗಿದೆ ಪೂರ್ಣ ಕೇಳಿ
ಕಳೆದ ದುಸ್ಸಂಗವು ಕೇಳುವನಾದರೆ
ತಿಳಿಸಿಕೊಡುವನು ಗುರು ಹೇಳಿ 1
ಸೂಟಿ ತಿಳಿದು ನಿಜಧಾಟಿಗೆ ಬಂದರೆ
ಕೋಟಿಗವನೇ ಒಬ್ಬ ಙÁ್ಞನಿ
ನೀಟಾಗಿಹ್ಯ ಘನಕೂಟವು ತಿಳಿದರೆ
ನೋಟದಲ್ಲವ ಬಲು ತ್ರಾಣಿ
ನೋಟದಲ್ಲಿಹುದು ತ್ರಾಟಿವ ಬಲ್ಲನೆ
ಬೂಟಕ ದೇಹಾಭಿಮಾನಿ
ನಾಟಿ ಮನದೊಳು ಮಾಟಿಸಿಕೊಂಬುದು
ಘಟಿಸಿತಿದೆ ಸಾಧನ 2
ನೆನೆಯಲಿಕ್ಕೆ ಮನ ಘನಬೆರದಾಡುವ
ಖೂನಾಗುವದಿದೆ ರಾಜಯೋಗ
ಅನುಭವಿಗಳಿಗೆ ಅನುಕೂಲವಾಗಿನ್ನು
ಅನುವಾಗಿದೋರುದು ಬ್ಯಾಗ
ಭಾನುಕೋಟಿತೇಜ ತಾನೆತಾನಾದನು
ಎನ್ನ ಮನದೊಳು ಈಗ
ದೀನ ಮಹಿಪತಿಗೆ ಸನಾಥಮಾಡುವ
ಸ್ವಾನುಭವದ ಬ್ರಹ್ಮಭೋಗ 3