ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಜ್ಞಾನವೊ ಇದೇ ಮಾನವೊ ಧ್ರುವ ಕೇಳಿ ಕೇಳಿ ಕೇಳಿ ಕೇಳುವ ಮಾತಿದು ಕೇಳಿದಂತೆ ನೀವು ಬಾಳಿ ಬಾಳಿದ ಮ್ಯಾಲಿನ್ನು ಹೇಳ್ಯಾಡುವ ಮಾತಿನ ಮೊಳೆ ಅಂಕುರನೆ ಸೀಳಿ ಒಳಿತಾಗಿದೆ ಪೂರ್ಣ ಕೇಳಿ ಕಳೆದ ದುಸ್ಸಂಗವು ಕೇಳುವನಾದರೆ ತಿಳಿಸಿಕೊಡುವನು ಗುರು ಹೇಳಿ 1 ಸೂಟಿ ತಿಳಿದು ನಿಜಧಾಟಿಗೆ ಬಂದರೆ ಕೋಟಿಗವನೇ ಒಬ್ಬ ಙÁ್ಞನಿ ನೀಟಾಗಿಹ್ಯ ಘನಕೂಟವು ತಿಳಿದರೆ ನೋಟದಲ್ಲವ ಬಲು ತ್ರಾಣಿ ನೋಟದಲ್ಲಿಹುದು ತ್ರಾಟಿವ ಬಲ್ಲನೆ ಬೂಟಕ ದೇಹಾಭಿಮಾನಿ ನಾಟಿ ಮನದೊಳು ಮಾಟಿಸಿಕೊಂಬುದು ಘಟಿಸಿತಿದೆ ಸಾಧನ 2 ನೆನೆಯಲಿಕ್ಕೆ ಮನ ಘನಬೆರದಾಡುವ ಖೂನಾಗುವದಿದೆ ರಾಜಯೋಗ ಅನುಭವಿಗಳಿಗೆ ಅನುಕೂಲವಾಗಿನ್ನು ಅನುವಾಗಿದೋರುದು ಬ್ಯಾಗ ಭಾನುಕೋಟಿತೇಜ ತಾನೆತಾನಾದನು ಎನ್ನ ಮನದೊಳು ಈಗ ದೀನ ಮಹಿಪತಿಗೆ ಸನಾಥಮಾಡುವ ಸ್ವಾನುಭವದ ಬ್ರಹ್ಮಭೋಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇನ್ನೊಬ್ಬರಿಗೆ ಇದು ಏನು ತಿಳಿದೀತು ಧ್ರುವ ವೇದಾಂತಕಿದು ಸನ್ಮತಗೂಡುವ ಮಾತು ಸಾಧುಜನರಿಗೆ ಸಾಕ್ಷಿಯಾಗಿ ದೋರುವ ಮಾತು ಸಾಧನಕೆ ಸಾಧಿಸುವ ಮಾತು ಬೋಧಿಸಿದವಗೆ ಬಲವಾಗುವ ಮಾತು 1 ಕೋಟಿ ಜನ್ಮದಾ ಪುಣ್ಯವಂತಗಿದಿರಿಡುವ ಮಾತು ನೋಟ ನಿಜವಾದವಗೆ ನೀಟವಾಗಿಹ ಮಾತು ಸೂಟಿಗಿದೆ ಘನಕೂಟ ಮಾತು ನಾಟಿಮನದೊಳು ಮಥಿüಸುವ ಮಾತು 2 ದ್ವೈತ ಅದ್ವೈತಕ ಆಧಾರವಾಗುವ ಮಾತು ತ್ರಯಗುಣಕ ಮೀರಿ ಮಿಗಿಲಾಗಿ ದೋರುವ ಮಾತು ಮಹಿಪತಿಯ ಗುರುಗೂಢ ಮಾತು ತ್ರಯಲೋಕಕಿದೆ ತಾರಿಸುವ ಮಾತು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೂರೆಂಟು ನೆನೆದು ಫಲವೇನು ಈರೇಳು ಜಗದೊಡೆಯಹರಿಯನೊಮ್ಮೆ ನೆನೆ ಮನವೆ ಪ. ಧನದಾಸೆಗಳಲದಿರು ಭವದುಃಖ ಬಳಲದಿರುಜನಾರ್ದನನ ಮರೆಯದಿರು ಈ ತನುವ ಪೊರೆಯದಿರುಅನಘಜನರೊಡನಾಡು ದಿನದಿನ ಶುಭವಕೂಡುಇನಿತು ಜನಮವೆ ಸಾಕು ಇನ್ನು ಮುಕುತಿಯೆ ಬೇಕು 1 ಸಾಕು ದುರ್ಜನÀರಾಟ ಸಾಕು ಸತಿಯರ ಬೇಟಸಾಕು ಸವಿಯನ್ನದೂಟ ಸಾಕು ಘನಕೂಟಸಾಕು ದೇಶಕೆವೋಟ ಸಾಕು ಸಲೆ ಭವನೋಟಸಾಕದೆಲ್ಲ ಖಳಕೂಟ ಸಾಕುಮನೆ[ಮಠ] 2 ಕೇಳು ಹರಿಮಹಿಮೆಯನು ಪೇಳು ಹರಿನಾಮವನುಬಾಳು ಬಂದಷ್ಟರಿಂದ ತಾಳು ಹಸಿತೃಷೆಗಳಶ್ರೀಲಲನೆಯಾಳ್ದ ಹಯವದನ ಸಿರಿನರಹರಿಯಆಳುತನವನು ಬೇಡು ಕೀಳು ಬುದ್ಧಿಯ ದೂಡು 3
--------------
ವಾದಿರಾಜ