ನೆನೆಯೋ ನೆನೆಯೋ ನೆನೆಯೋ ಮನವೆ
ಘನಕರ್ಮಗಳನು ಕಳೆದು ಕಾಯುವ ಪ
ನೆನೆವ ಜನರ ಕನಕಾಭರಣನ ಅ.ಪ
ಹೊತ್ತು ಯಾಕೋ ಗೊತ್ತು ಯಾಕೋ
ನಿತ್ಯ ನೇಮವೆಂದು ಹೊತ್ತು ಗಳೆಯದೆ
ನಿತ್ಯ ನಿರ್ಮಲಚಿತ್ತದ ಹರಿಪಾದ1
ಧೂಪವ್ಯಾಕೋ ದೀಪವ್ಯಾಕೋ
ಪಾಪಿನಾನೆಂದಾಲಿಸದೆ ತ್ವರ
ಪಾದ 2
ಯಾಗ ಯಾಕೋ ಯಜ್ಞ ಯಾಕೋ
ನೀಗಿ ಮನದಲಿ ಭೋಗದಾಸೆಯ
ಭೋಗಿಶಾಯಿ ಶ್ರೀರಾಮ ಪಾದವ 3